50 ವರ್ಷದಿಂದ ರಷ್ಯಾ ಮುಚ್ಚಿಟ್ಟಿತ್ತು ಈ ಖತರ್ನಾಕ್ ಅಸ್ತ್ರ, ಅಣು ಬಾಂಬ್‌ಗಿಂತಲೂ ಡೇಂಜರ್!
ವಿಶ್ವದಲ್ಲಿ ತಾವೇ ಶಕ್ತಿಶಾಲಿಯಾಗಬೇಕೆಂಬ ರಾಷ್ಟ್ರಗಳ ನಡುವಿನ ಪೈಪೋಟಿ ಇಂದು ನಿನ್ನೆಯದಲ್ಲ. ಅಮೆರಿಕಾ, ಚೀನಾ ಅಥವಾ ಇನ್ನ್ಯಾವುದೋ ದೇಶವಿರಲಿ ತನ್ನನ್ನು ತಾನು ಶಕ್ತಿಶಾಲಿ ಎಂದು ಘೋಷಿಸಲು ಅನೇಕ ರೀತಿಯ ಅಸ್ತ್ರಗಳನ್ನು ಒಗ್ಗೂಡಿಸುತ್ತಿರುತ್ತದೆ. ಈವರೆಗಿನ ಪಟ್ಟಿಯಲ್ಲಿ ಅಣು ಬಾಂಬ್ ಅತ್ಯಂತ ಡೇಂಜರ್ ಎನ್ನಲಾಗುತ್ತಿತ್ತು. ಯಾವೆಲ್ಲಾ ದೇಶದ ಬಳಿ ಈ ಅಸ್ತ್ರವಿದೆಯೋ ಅವರೆಲ್ಲರೂ ಇದನ್ನು ಬಳಸಲು ಹಿಂದೇಟು ಹಾಕುತ್ತಾರೆ. ಈವರೆಗೆ ಅಮೆರಿಕ ಮಾತ್ರ ಎರಡು ಬಾರಿ ಜಪಾನ್ ಮೇಲೆ ಅಣು ಬಾಂಬ್ ಸ್ಫೋಟಿಸಿದೆ. ಇದಾಧ ಬಳಿಕ ಯಾವೊಂದೂ ದೇಶವೂ ಇದನ್ನು ಬಳಸಿಲ್ಲ. ಆದರೀಗ ರಷ್ಯಾ ಕಳೆದ ಐವತ್ತು ವರ್ಷಗಳ ಹಿಂದೆ ನಡೆಸಿದ ಟೆಸ್ಟ್ ಒಂದರ ವಿಡಿಯೋ ಶೇರ್ ಮಾಡಿಕೊಂಡಿದೆ. ರಷ್ಯಾದ ಈ ಬಾಂಬ್ ಹಿರೋಶಿಮಾದಲ್ಲಿ ಸ್ಫೋಟಿಸಲಾದ ಅಣು ಬಾಂಬ್‌ಗಿಂತಲೂ ಮೂರು ಸಾವಿರ ಪಟ್ಟು ಅಧಿಕಶಕ್ತಿಶಾಲಿಯಾಗಿದೆ. ಒಂದು ವೇಳೆ ಇದು ಯಾವುದಾದರೂ ದೇಶದ ಮೇಲೆ ಸ್ಫೋಟಿಸಿದರೆ ಅಲ್ಲಿಯುಂಟಾಗುವ ಹಾನಿಯನ್ನು ಅಂದಾಜಿಸಲೂ ಸಾಧ್ಯವಿಲ್ಲ.
ರಷ್ಯಾದ ಪರಮಾಣು ಶಕ್ತಿ ಏಜೆನ್ಸಿ ತ್ಸಾರ್ ಬಾಂಬೆಯನ್ನು ಪರೀಕ್ಷೆಗೂ ಮುನ್ನ ಯಾವತ್ತೂ ನೋಡಿರದ ದೃಶ್ಯಾವಳಿಯನ್ನು ಜಾರಿಗೊಳಿಸಿದೆ. ಇತಿಹಾಸದಲ್ಲಿ ಇದು ಈವರೆಗಿನ ಮಾನವ ನಿರ್ಮಿತ ಅತಿ ದೊಡ್ಡ ವಿಸ್ಫೋಟ ಎನ್ನಲಾಗಿದೆ. 1961ರಲ್ಲಿ 50 ಮೆಗಾ ಟನ್ ಥರ್ಮೋನ್ಯೂಕ್ಲಿಯರ್ ಬಾಂಬ್ ಸ್ಫೋಟಗೊಳಿಸಲಾಗಿತ್ತು.
ಈ ವಿಸ್ಪೋಟವನ್ನು ಆರ್ಕ್ಟಿಕ್ ವಲಯದ ದ್ವೀಪವೊಂದರಲ್ಲಿ 13,000 ಅಡಿ ದೂರದಲ್ಲಿ ಮಾಡಲಾಗಿತ್ತು. ಈ ಬಾಂಬ್ ಸಾಮರ್ಥ್ಯ ಹಿರೋಶಿಮಾ ಮೇಲೆ ಹಾಕಲಾದ ಬಾಂಬ್‌ಗಿಂತ 3,333 ಪಟ್ಟು ಅಧಿಕವಿದೆ ಎನ್ನಲಾಗಿದೆ.
ಈ ಸ್ಫೋಟದ ದೃಶ್ಯ ನಾರ್ವೆವರೆಗೆ ಕಂಡಿತ್ತು. ಸ್ಫೋಟದ ಬಳಿಕ ಆಗಸದಲ್ಲಿ ಅಣಬೆಯಾಕಾರದ ಮೋಡದಂತ ಆಕೃತಿ ಕಂಡು ಬಂದಿತ್ತೆನ್ನಲಾಗಿದೆ. ಇದು ವಾಯು ಮಂಡಲದಲ್ಲಿ 213,000 ಅಡಿಯ ಆಕೃತಿ ಮೂಡಿಸಿತ್ತು.
ಈ ಬಾಂಬ್ ಈವರೆಗಿನ ಅತ್ಯಂತ ಶಕ್ತಿಶಾಲಿ ಪರಮಾಣು ಆಗಿತ್ತು. ಅಮೆರಿಕ 1954ರಲ್ಲಿ ಸ್ಫೋಟಿಸಲಾದ 15 ಮೆಗಾಟನ್ ಕೈಸಲ್ ಬ್ರಾವೋ ಬಾಂಬ್ ಬಳಿಕ ಇದನ್ನು ಬಾಂಬ್ ಕೇಸ್ ಒಂದರಲ್ಲಿ ಹಾಕಲಾಗಿತ್ತು.
ಈ ಬಾಂಬ್‌ನ್ನು ವಿಶೇಷವಾಗಿ ಡಿಸೈನ್ ಮಾಡಲಾದ ವಾಹನವೊಂದರಲ್ಲಿ ಟೆಸ್ಟ್ ಮಾಡಲು ಕೊಂಡೊಯ್ಯಲಾಗಿತ್ತು.
ಈ ಬಾಂಬ್ ಕೆಳಗಗೆ ಕಾಹಲು ಪ್ಯಾರಾಚೂಟ್ ಒಂದನ್ನು ಬಳಸಲಾಗಿತ್ತು. ಈ ಮೂಲಕ ಕೆಳಗೆ ಬೀಳುವಾಗ ಇದರ ವೇಗ ಕಡಿಮೆ ಮಾಡಲಾಗಿತ್ತು. ಈ ಮೂಲಕ ಬಾಂಬ್ ಸ್ಫೋಟಗೊಳ್ಳುವುದಕ್ಕೂ ಮೊದಲೇ ವಿಮಾನದ ಪೈಲಟ್ ಆ ಅಪಾಯದಿಂದ ಪಾರಾಗಿದ್ದರು.
ಬಾಂಬರ್‌ನ ಕಾಕ್‌ಪಿಟ್‌ನಲ್ಲಿ ದಾಖಲಾದ ವಿಡಿಯೋದಲ್ಲಿ ಈ ಸ್ಪೋಟದ ಪರಿಣಾಮ ವಿಮಾನ ನಿಯಂತ್ರಣ ಕಳೆದುಕೊಂಡಿರುವುದು ಸ್ಪಷ್ಟವಾಗಿದೆ. ಈಗಿದ್ದರೂ ಪೈಲಟ್ ಸಮಯ ಪ್ರಜ್ಞೆಯಿಂದ ಆ ಅಪಾಯದಂದ ಹೊರ ಬರುತ್ತಾರೆ.
ಈ ಸ್ಪೋಟದ ಪರಿಣಾಮ ಭೂಕಂಪನ ಕೂಡಾ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ 5.0 ರಷ್ಟು ತೀವ್ರತೆ ದಾಖಲಾಗಿತ್ತು.