ಸಿಂಹಿಣಿಗೆ ಗರ್ಭಕೋಶ ಸೋಂಕು: ಶಸ್ತ್ರ ಚಿಕಿತ್ಸೆ ಮಾಡಿ ಪ್ರೀತಿಯಿಂದ ಆರೈಕೆ ಮಾಡಿದ್ರು ಡಾಕ್ಟರ್ಸ್..!
ಗರ್ಭಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಸಿಂಹಿಣಿಯೊಂದನ್ನು ರಕ್ಷಿಸಿ, ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಇಲ್ಲಿ ನೋಡಿ ಫೋಟೋಸ್
ಗರ್ಭಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಸಿಂಹಿಣಿಯೊಂದನ್ನು ರಕ್ಷಿಸಲಾಗಿದೆ.
ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮಾಡಿ ಸಿಂಹಿಣಿಯನ್ನು ಪಾರು ಮಾಡಲಾಗಿದೆ
ಅಮೆರಿಕದ ಓಕ್ಲಾಮಾದಲ್ಲಿದ್ದ ಈ ಚೋಬಾ ಎಂಬ ಈ ಸಿಂಹಿಣಿ ಇದೀಗ ಓರೇಗಾನ್‌ನ ವೈಲ್ಡ್‌ಕ್ಯಾಟ್ ರಿಡ್ಜ್ ಅಭಯಾರಣ್ಯದಲ್ಲಿ ಸುಧಾರಿಸಿಕೊಳ್ಳುತ್ತಿದೆ.
ಡಲ್ ಆಗಿದ್ದ ಚೋಬಾ, ಏನನ್ನೂ ತಿನ್ನುತ್ತಿರಲಿಲ್ಲ.
ಸ್ಕ್ಯಾನ್ ಮಾಡಿದಾಗ ಸೋಂಕಿನಿಂದ ಇದರ ಗರ್ಭಕೋಶ ಊದಿಕೊಂಡಿರುವುದು ಪತ್ತೆಯಾಯಿತು.
ಸುದೀರ್ಘ ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರು ಇದರ ಗರ್ಭಕೋಶ ಹಾಗೂ ಗರ್ಭನಾಳವನ್ನು ತೆಗೆದಿದ್ದಾರೆ.
ಇದೀಗ ಸಿಂಹಿಣಿ ನಿಧಾನವಾಗಿ ಸುಧಾರಿಸಿಕೊಳ್ಳುತ್ತಿದೆ.
ಮರಿ ಇಡದ ಕಾರಣ ಸಿಂಹಿಣಿಗೆ ಚಕಿತ್ಸೆ ನೀಡಲಾಗಿತ್ತು.
2018ರಲ್ಲಿ ಸಿಂಹಿಣಿಯನ್ನು ಒಕ್ಲಾಮದಿಂದ ರಕ್ಷಿಸಲಾಗಿತ್ತು.
ಈಗ ಈ ಸಿಂಹಿಣಿ ವೈಲ್ಡ್ ಕ್ಯಾಟ್ ರಿಡ್ಜ್ ವನ್ಯಜೀವಿಧಾಮನದಲ್ಲಿದೆ.
5 ವರ್ಷದ ಸಿಂಹಿಣಿ ಸದ್ಯ ಆರಾಮವಾಗಿದೆ
ಹಲವಾರು ವೈದ್ಯರ ಶ್ರಮದ ಪರಿಣಾಮವಾಗಿ ಸಿಂಹಿಣಿ ಹುಷಾರಾಗಿದೆ.
ಸ್ಕ್ಯಾನಿಂಗ್ ಸೇರಿ ಚಿಕಿತ್ಸೆಯ ಎಲ್ಲ ವಿಧಾನಗಳನ್ನೂ ಮಾಡಲಾಗಿತ್ತು