ಕೊರೋನಾಗೆ ಎಲ್ಲವೂ ಸ್ತಬ್ಧ: ಜನರಿಂದ ಗಿಜಿಗುಡುತ್ತಿದ್ದ ಪ್ರದೇಶದಲ್ಲಿ ನೊಣಗಳ ಕಾರುಬಾರು!
ಚೀನಾದ ಹುಬೇ ಪ್ರಾಂತ್ಯದ ವುಹಾನ್ ನಗರದಿಂದ ಹಬ್ಬಿದ ಕೊರೋನಾ ವೈರಸ್ ಸದ್ಯ ಜಗತ್ತಿನೆಲ್ಲೆಡೆ ಅಬ್ಬರ ಸೃಷ್ಟಿಸಿದೆ. ನೂರಕ್ಕೂ ಅಧಿಕ ದೇಶಗಳಲ್ಲಿ ಸೋಂಕು ಹರಡಿದೆ. ಈಗಾಗಲೇ ಈ ಡೆಡ್ಲಿ ವೈರಸ್ ಗೆ 6 ಸಾವಿರಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಅಮೆರಿಕಾ ಸೇರಿದಂತೆ ಅನೇಕ ರಾಷ್ಟ್ರಗಳು ಹೆಲ್ತ್ ಎಮರ್ಜೆನ್ಸಿ ಘೋಷಿಸಿದ್ದು, ಜನರನ್ನು ಓಡಾಡದಂತೆ ನಿರ್ಬಂಧಿಸಿವೆ. ಭಾರತದಲ್ಲಿ ಸೋಂಕಿತರ ಸಂಖ್ಯೆ 100 ದಾಟಿದ್ದರೆ, ಅತ್ತ ಇರಾನ್ ನಲ್ಲಿ ಸುಮಾರು 10 ಮಂದಿ ಪ್ರತಿದಿನ ಮೃತಪಡುತ್ತಿದ್ದಾರೆ. ಪುಟ್ಟ ರಾಷ್ಟ್ರ ಇಟಲಿ ಸಾವಿನ ಮನೆಯಂತಾಗಿದೆ. ಕೊರೋನಾಗೆ ಕಂಗೆಟ್ಟ ಅನೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿವೆ. ಹೀಗಿರುವಾಗ ಜನರಿಂದ ಗಿಜಿಗುಡುತ್ತಿದ್ದ ವಿಶ್ವದ ಅನೇಕ ಪ್ರದೆಶಗಳು ಜನರಿಲ್ಲದೇ ಖಾಲಿ ಖಾಲಿಯಾಗಿವೆ. ನೊಣಗಳ ಹಾರಾಟ ಆರಂಭವಾಗಿದೆ.
ಇದು ಚೀನಾದ ರಾಜಧಾನಿ ಬೀಜಿಂಗ್ ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ಒಂದು ಕಾಲದಲ್ಲಿ ಜನರಿಂದ ತುಂಬಿರುತ್ತಿದ್ದ ಈ ವಿಮಾನ ನಿಲ್ದಾಣ ಸದ್ಯ ಕೊರೋನಾ ವೈರಸ್ ಖಾಲಿ ಖಾಲಿಯಾಗಿದೆ.
ಬೀಜಿಂಗ್ ನ ಮೆಟ್ರೋ ಕೂಡಾ ಪ್ರಯಾಣಿಕರಿಲ್ಲದೇ ಓಡಾಟ ನಡೆಸುತ್ತಿದೆ.
ಚೀನಾದ ಶಾಂಘೈ ನಗರದಲ್ಲಿ ಜನರಿಲ್ಲದೇ ಖಾಲಿಯಾಗಿರುವ ರಸ್ತೆ. ಕೆಲ ತಿಂಗಳ ಈ ಹೆದ್ದಾರಿ ವಾಹನಗಳಿಂದ ತುಂಬಿ ತುಳುಕಾಡುತ್ತಿತ್ತು.
ಶಾಂಘೈನ ಒಂದು ನಿರ್ಜನ ರಸ್ತೆ. ಒಂದೂ ವಾಹನ ಇಲ್ಲಿ ಕಾಣ ಸಿಗುತ್ತಿಲ್ಲ. ಅಪರೂಪಕ್ಕೊಮ್ಮೆ ಕೆಲವರು ಇಲ್ಲಿ ಸುಳಿದಾಡುತ್ತಾರೆ.
ಶಾಂಘೈನ ಫೋಟೋಗ್ರಾಫರ್ ನಿಕ್ಕೋ ಫೆರಿಯ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಮೊದಲು ಇಲ್ಲಿ ಸಾಸಿವೆ ಹಾಕಿದರೂ ಬೀಳದಷ್ಟು ಜನ ಸಂದಣಿ ಇರುತ್ತಿತ್ತು. ಆದರೀಗ ಇಲ್ಲಿ ಒಬ್ಬ ಪ್ರಯಾಣಿಕನೂ ಇಲ್ಲ.
ಜಪಾನ್ ನ ಟೋಕ್ಯೋ ನಗರದಲ್ಲಿ ನಿರ್ಜನವಾಗಿರುವ ರೈಲ್ವೇ ನಿಲ್ದಾಣ. ಇದರಿಂದಲೇ ಕೊರೋನಾ ಜನರನ್ನು ಎಷ್ಟರ ಮಟ್ಟಿಗೆ ಕಂಗೆಡಿಸಿದೆ ಎಂದು ಅಂದಾಜಿಸಬಹುದು.
ಥಾಯ್ಲೆಂಡ್ ನ ಬ್ಯಾಂಕಾಕ್ ನಲ್ಲಿರುವ ಸುವರ್ಣ ಭೂಮಿ ವಿಮಾನ ನಿಲ್ದಾಣದ ದೃಶ್ಯವಿದು. ಇಲ್ಲಿ ಒಬ್ಬ ವ್ಯಕ್ತಿಯೂ ಕಂಡು ಬರುತ್ತಿಲ್ಲ.
ಬ್ಯಾಂಕಾಕ್ ವಿಮಾ ನಿಲ್ದಾಣದಲ್ಲಿ ಖಾಲಿ ಖಾಲಿಯಾಗಿದೆ ಡಿಪಾರ್ಚರ್ ಟರ್ಮಿನಲ್
ಅಮೆರಿಕಾದ ನ್ಯೂ ಜರ್ಸಿಯಲ್ಲಿರುವ ನೆವಾರ್ಕ್ ವಿಮಾನ ನಿಲ್ದಾಣ. ಪ್ರಯಾಣಿಕರಿಂದ ತುಂಬಿರುತ್ತಿದ್ದ ವಿಮಾನ ನಿಲ್ದಾಣದಲ್ಲಿ ಕೊರೋನಾ ಭೀತಿಯಿಂದ ಜನರೇ ಬರುತ್ತಿಲ್ಲ.
ಯುನೈಟೆಡ್ ಏರ್ ಲೈನ್ಸ್ ನಲ್ಲಿ ಪ್ರಯಾಣಿಕರೇ ಇಲ್ಲ.
ಅಮೆರಿಕಾದ ಲಾಸ್ ಏಂಜಲೀಸ್ ನ ರಿಟೇಲ್ ಶಾಪ್ ಗ್ರಾಹಕರಿಲ್ಲದೇ ಖಾಲಿ ಖಾಲಿ.
ಇಟಲಿಯ ನೆಪಲ್ಸ್ ರಸ್ತೆ ಒಂದು ನೋಟ.
ರೋಮ್ ವಿಮನ ನಿಲ್ದಾಣವೊಂದರ ದೃಶ್ಯ!