ಫೋಟೋ ಕ್ಲಿಕ್ಕಿಸಿದ ಮರುಕ್ಷಣವೇ ನಡೆಯಿತು ಘನಘೋರ ದುರಂತ!

First Published Jun 30, 2020, 1:49 PM IST

ಹಲ್ಲಿಗೆ ಭಯ ಪಡುವ ಮಂದಿ ವಿಶ್ವದಲ್ಲಿ ಅನೇಕರಿದ್ದಾರೆ. ಆದರೆ ಇನ್ನು ಕೆಲವರು ಹೆಬ್ಬಾವಿನಂತಹ ಅಪಾಯಕಾರಿ ಹಾವಿನೊಂದಿಗೂ ಕಾದಾಡುತ್ತಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ 35 ವರ್ಷದ ಕ್ರಿಸ್ ಮ್ಯಾಕ್‌ಶೈರೀ ಹೆಸರು ಭಾರೀ ಸದ್ದು ಮಾಡುತ್ತಿದೆ. ಬೇಟೆಯಾಡುವ ಆಸಕ್ತಿ ಇದ್ದ ಅವರು ತನ್ನ ಗೆಳೆಯನೊಂದಿಗೆ ಕಾಡಿಗೆ ತೆರಳಿದ್ದರು. ಆದರೆ ತಾನು ಬೇಟೆಯಾಡುವ ಕಾಡುಕೋಣ ತನ್ನನ್ನೇ ಬೇಟೆಯಾಡಲು ಯತ್ನಿಸುತ್ತದೆ ಎಂದು ಅವರು ಭಾವಿಸಿರಲಿಲ್ಲ. ಕ್ರಿಸ್ 800 ಕೆಜಿ ತೂಕದ ಕಾಡುಕೋಣಕ್ಕೆ ಬಾಣ ಹೊಡೆದಿದ್ದ. ಹೀಗಿರುವಾಗ ಬಾಣದೇಟಿಗೆ ಕೋಣ ಪ್ರಜ್ಞಾಹೀನವಾಗಿ ಬಿದ್ದಿದೆ. ಆದರೆ ಇತ್ತ ಕ್ರಿಸ್ ತಾನು ಬಾಣ ತಾಗಿ ಕೋಣ ಸತ್ತು ಬಿದ್ದಿದೆ ಎಂದು ಭಾವಿಸಿದ್ದಾನೆ. ಹೀಗಾಗಿ ಹತ್ತಿರ ತೆರಳಿ ಆ ದೈತ್ಯ ಕೋಣದ ಬಳಿ ನಿಂತು ಫೋಟೋ ತೆಗೆಯಲಾರಂಭಿಸಿದ. ಆದರೆ ಕ್ರಿಸ್‌ ಮಾಡಿದ ದೊಡ್ಡ ತಪ್ಪೇ ಇದು. ನೋಡ ನೋಡುತ್ತಿದ್ದಂತೆಯೇ ಕ್ರಿಸ್‌ ಮೇಲೆ ಅಟ್ಯಾಕ್ ಮಾಡುವ ಕೋಣ ತನ್ನ ಕೊಂಬಿಉಗಳಿಂದ ಆತನನ್ನು ತಿವಿಯಲಾರಂಭಿಸಿದೆ. ಸದ್ಯ ಈ ಫೋಟೋಗಳು ಭಾರೀ ವೈರಲ್ ಆಗಿವೆ.