ಪ್ರತಿಭಟನಾಕಾರರ ಪರ ನಿಂತ ಟ್ರಂಪ್ ಮಗಳು, ಇಕ್ಕಟ್ಟಿನಲ್ಲಿ ಅಮೆರಿಕ ಅಧ್ಯಕ್ಷ!

First Published Jun 4, 2020, 5:33 PM IST

ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಸಾವಿನ ಬಳಿಕ ಅಮೆರಿಕದಲ್ಲಿ ಹಿಂಸಾಚಾರ ಪ್ರತಿಭಟನೆಗಳು ಜನ್ಮ ತಾಳಿವೆ. ಈ ಪ್ರತಿಭಟನೆಯನ್ನು ವಿಶ್ವಾದ್ಯಂತ ಎಲ್ಲಾ ರಾಷ್ಟ್ರಗಳು ಬೆಂಬಲಿಸಿವೆ. ಈ ಹಿಂಸಾಚಾರ ತಡೆಯುವಲ್ಲಿ ಟ್ರಂಪ್ ಆಡಳಿತ ಸಂಪೂರ್ಣವಾಗಿ ವಿಫಲಗೊಂಡಿದೆ. ಆದರೀಗ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಗಳು ಟಿಫ್ನಿ ಟ್ರಂಪ್ ಕೂಡಾ ಈ ಪ್ರತಿಭಟನೆಯನ್ನು ಸಮರ್ಥಿಸಿಕೊಂಡಿದ್ದಾರೆ. ಹೀಗಾಗಿ ಮಗಳ ಈ ನಡೆ ಟ್ರಂಪ್ ಸಮಸ್ಯೆ ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈಕೆ ಹಿರಿ ಮಗಳು ಇವಾಂಕಾರಂತೆ ರಾಜಕೀಯ ಹಾಗೂ ಉದ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿಲ್ಲ. ಹಾಗಾದ್ರೆ ಈಕೆ ಏನು ಮಾಡುತ್ತಾರೆ? ಇಲ್ಲಿದೆ ವಿವರ