ಹಾವಿನ ಹಸಿ ಮಾಂಸ ತಿಂದ ವ್ಯಕ್ತಿ, ಕ್ಷಣಾರ್ಧದಲ್ಲಿ ಶ್ವಾಸಕೋಶ ತುಂಬಾ ಹುಳಗಳು!
ವಿಶ್ವದಾದ್ಯಂತ ಕೊರೋನಾ ಅಟ್ಟಹಾಸ ಮುಂದುವರೆದಿದೆ. ಈ ವೈರಸ್ ಚೀನಾದ ವುಹಾನ್‌ನಿಂದ ಹಬ್ಬಿಕೊಂಡಿದ್ದು ಎಂಬ ಮಾತು ಇಡೀ ವಿಶ್ವಕ್ಕೇ ಸದ್ಯ ತಿಳಿದಿದೆ. ಇದಾದ ಬಳಿಕ ಚೀನಾ ಇಡೀ ವಿಶವದ ಕೆಂಗಣ್ಣಿಗೆ ಗುರಿಯಾಗಿದೆ. ಚೀನಾದ ವೆಟ್ ಮಾರ್ಕೆಟ್ ಭಾರೀ ಫೇಮಸ್. ಇಲ್ಲಿ ಸಾರ್ವಜನಿಕವಾಗೇ ಹಾವು, ಬಾವಲಿಹಾಗೂ ಇನ್ನಿತರ ಕಾಡು ಪ್ರಾಣಿಗಳ ಮಾಂಸ ಮಾರಾಟ ಮಾಡಲಾಗುತ್ತದೆ. ಆದರೀಗ ಕೊರೋನಾ ಹಬ್ಬಿದ ಬಳಿಕ ಇಂತಹ ಮಾರ್ಕೆಟ್‌ಗಳನ್ನು ಮುಚ್ಚುವಂತೆ ಇಡೀ ವಿಶ್ವವೇ ಚೀನಾದ ಮೇಲೆ ಒತ್ತಡ ಹೇರಿದೆ. ಹೀಗಿದ್ದರೂ ಇಲ್ಲಿ ಕಾಡು ಪ್ರಾಣಿಗಳ ಮಾಂಸ ಮಾರಾಟಕ್ಕೆ ಬ್ರೇಕ್ ಬಿದ್ದಿಲ್ಲ. ಸದ್ಯ ಇಲ್ಲಿ ಹಸಿ ಹಾವು ತಿಂದ ಪರಿಣಾಮ ಆಸ್ಪತ್ರೆಗೆ ಸೇರಬೇಕಾದ ಪರಿಸ್ಥಿತಿ ಹುಟಟ್ಟಿಕೊಂಡಿದೆ. ಅಲ್ಟ್ರಾಸೌಂಡ್ ಮಾಡಿದ ವೈದ್ಯರೇ ಬೆಚ್ಚಿ ಬಿದ್ದಿದ್ದಾರೆ.

ಈ ಪ್ರಕರಣ ಚೀನಾದ ಜಿಯಾಂಗ್ಸೂ ಪ್ರಾಂತ್ಯದಲ್ಲಿ ಬೆಳಕಿಗೆ ಬಂದಿದೆ. ಇಲ್ಲೊಬ್ಬ ವ್ಯಕ್ತಿ ಕೊರೋನಾ ಆತಂಕದ ನಡುವೆಯೂ ವೆಟ್ ಮಾರ್ಕೆಟ್‌ನಿಂದ ಹಸಿ ಹಾವಿನ ಮಾಂಸ ಖರೀದಿಸಿದ್ದಾನೆ.

ಈ ವ್ಯಕ್ತಿಯನ್ನು ಮಿಸ್ಟರ್ ವಾಂಗ್ ಎಂದು ಗುರುತಿಸಲಾಗಿದೆ. ಈತ ಈ ಮಾಂಸವನ್ನು ಮನೆಗೆ ತಂದು ತೊಳೆದು, ಬಳಿಕ ತರಕಾರಿಯೊಂದಿಗೆ ಸೇರಿಸಿ ಹಸಿಯಾಗೇ ತಿಂದಿದ್ದಾನೆ. ಡಿನರ್ ಮುಗಿಸಿ ಬಳಿಕ ಆತ ಮಲಗಿದ್ದಾನೆ.

ಇದಾದ ಬಳಿಕವೇ ಆತನಿಗೆ ನಿಧಾನವಾಗಿ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಜೊತೆಗೆ ಉಸಿರಾಡಲೂ ಕಷ್ಟಪಟ್ಟಿದ್ದಾರೆ.

ಉಸಿರಾಡಲೂ ಬಹಳ ಕಷ್ಟವಾದಾಗ ವೈದ್ಯರನ್ನು ಭೇಟಿಯಾಗುವುದೇ ಸರಿ ಎಂಬ ನಿರ್ಧಾರಕ್ಕೆ ಬಂದಿದ್ದಾನೆ. ಇಲ್ಲಿ ಪರೀಕ್ಷೆ ನಡೆಸಿದ ವೈದ್ಯರು ಆತನಿಗೆ Paragonimiasis ಹೆಸರಿನ ರೋಗ ತಗುಲಿರುವುದನ್ನು ದೃಢಪಡಿಸಿದ್ದಾರೆ.

ವೈದ್ಯರು ಹೆಚ್ಚಿನ ಮಾಹಿತಿ ಸಂಗ್ರಹಿಸಲು ಆತನನ್ನು ಮಾತನಾಡಿಸಿದಾಗ ತಾನು ಕೆಲ ದಿನದ ಹಿಂದೆ ಹಾವಿನ ಗಾಲ್ ಬ್ಲಾಡರ್ ತಿಂದಿರುವುದನ್ನು ಬಹಿರಂಗಪಡಿಸಿದ್ದಾನೆ. ತನಗೆ ಸೀ ಫುಡ್ ಬಹಳ ಇಷ್ಟ ಅಲ್ಲದೇ ಹಾವಿನ ಮಾಂಸ ಎಂದರೆ ಭಾರೀ ಇಷ್ಟ ಎಂದೂ ತಿಳಿಸಿದ್ದಾನೆ.

ಅಲ್ಟ್ರಾಸೌಂಡ್ ಮಾಡಿದ ವೈದ್ಯರು ಮಿಸ್ಟರ್ ವಾಂಗ್ ಶ್ವಾಸಕೋಶದಲ್ಲಿ ಹುಳಗಳಾಗಿರುವುದನ್ನು ಪತ್ತೆ ಹಚ್ಚಿದ್ದಾರೆ. ಶ್ವಾಸಕೋಶದಲ್ಲಿ ಹರಿದಾಡುತ್ತಿದ್ದ ಹುಳಗಳನ್ನು ಕಂಡು ವೈದ್ಯರೇ ಬೆಚ್ಚಿ ಬಿದ್ದಿದ್ದಾರೆ.

Paragonimiasis ಎಂಬ ರೋಗ ಹಸಿ ಮಾಂಸ ಅಥವಾ ಕೆಟ್ಟ ನೀರು ಕುಡಿಯುವುದರಿಂದ ತಗುಲುತ್ತದೆ. ವಾಂಗ್ ಆರೋಗ್ಯ ಸ್ಥಿತಿ ಬಹಳ ಗಂಭೀರವಾಗಿದ್ದು, ಆತನ ಚಿಕಿತ್ಸೆ ಮುಂದುವರೆದಿದೆ.

ಕೊರೋನಾ ಇಷ್ಟೆಲ್ಲಾ ಅವಾಂತರ ಹಾಗೂ ಸಾವು ನೋವು ಉಂಟು ಮಾಡಿದ್ದರೂ ಚೀನಾ ಮಾತ್ರ ಇನ್ನೂ ಬುದ್ಧಿ ಕಲಿತಿಲ್ಲ. ಈಗಲೂ ಮಾಂಸ ಮಾರಾಟ ಹಾಗೂ ತಿನ್ನುವುದನ್ನು ಮುಂದುವರೆಸಿದ್ದಾರೆ.

ಇನ್ನು ಕೊರೋನಾ ವೈರಸ್ ಬಾವಲಿ ಅಥವಾ ಹಾವಿನಿಂದಲೇ ಮನುಷ್ಯರ ದೇಹ ಸೇರಿದೆ ಎಂದು ಚೀನಾ ವಾದಿಸುತ್ತಾ ಬಂದಿದೆ. ಹೀಗಿದ್ದರೂ ಈ ಕುರಿತು ಸ್ಪಷ್ಟ ಹಹಾಗೂ ನಿಖರ ಮಾಹಿತಿ ಲಭ್ಯವಾಗಿಲ್ಲ.