ಲಾಕ್‌ಡೌನ್ ವೇಳೆ ಲಂಚ್‌ ತಯಾರಿಸಿದ ಯುವಕ, ಅಜ್ಜಿಯನ್ನೇ ಕೊಂದು ಬೇಯಿಸಿ ತಿಂದ!

First Published Jun 3, 2020, 6:28 PM IST

ವಿಶ್ವಾದ್ಯಂತ ಲಾಕ್‌ಡೌನ್ ವೇಳೆ ಅನೇಕ ರೀತಿಯ ಅಪರಾಧ ಪ್ರಕರಣಗಳು ಸದ್ದು ಮಾಡುತ್ತಿವೆ. ಜನರು ಮನೆಯಲ್ಲೇ ಉಳಿದಿರುವುದರಿಂದ ಅನೇಕ ರೀತಿಯ ಹಿಂಸಾತ್ಮಕ ಘಟನೆಗಳು ಬೆಳಕಿಗೆ ಬರುತ್ತಿವೆ. ಹೀಗಿರುವಾಗ ಕ್ಯಾಲಿಫೋರ್ನಿಯಾದಲ್ಲಿ ಬೆಳಕಿಗೆ ಬಂದ ಘಟನೆ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಇಲ್ಲಿ ಮನೆಯೊಂದರಲ್ಲಿ ತೊಂಭತ್ತು ವರ್ಷದ ಮಹಿಳೆಯ ಶವ ಪತ್ತೆಯಾಗಿದೆ. ದೇಹದ ಅನೇಕ ಭಾಗಗಳು ಹಾಗೂ ಮಾಂಸ ನಾಪತ್ತೆಯಾಗಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ಮಹಿಳೆಯನ್ನು ಕೊಂದು ಇದನ್ನು ಬೇಯಿಸಿ ತಿಂದಿರುವ ವಿಚಾರ ಬೆಳಕಿಗೆ ಬಂದಿದೆ. ಈ ಸುದ್ದಿ ವೈರಲ್ ಆಗುತ್ತಿದ್ದಂತೆಯೇ ಜನರಲ್ಲಿ ಆತಂಕ ಮನೆ ಮಾಡಿದೆ.