ಲೈವ್‌ ವಿಡಿಯೋ ಮಾಡಿ ಮಗುವಿಗೆ ಜನ್ಮ ಕೊಟ್ಟ ಮಹಿಳೆ!: ವೈರಲ್ ಆಯ್ತು ಡೆಲಿವರಿ ದೃಶ್ಯ

First Published Jun 6, 2020, 12:01 PM IST

ಕೊರೋನಾ ವೈರಸ್ ಮಹಾಮಾರಿ ತೊಲಗಿಸಲು ಲಾಕ್‌ಡೌನ್ ಹೇರಲಾಗಿದೆ. ಹೀಗಿರುವಾಗ ಜನರು ಮನೆಯಲ್ಲೇ ಇದ್ದು, ಚಿತ್ರ ವಿಚಿತ್ರ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಈ ವಿಡಿಯೋಗಳು ವೈರಲ್ ಆಗಿ ಅನೇಕ ಮಂದಿಯ ಗಮನ ಸೆಳೆದಿದೆ. ಯಾರೂ ಊಹಿಸಲು ಸಾಧ್ಯವಾಗದ ಘಟನೆಯ ವಿಡಿಯೋಗಳು ಕೂಡಾ ಇದರಲ್ಲಿ ಶಾಮೀಲಾಗಿವೆ. ಈ ಮೂಲಕ ಈ ಲಾಕ್‌ಡೌನ್‌ಗೆ ಜನರು ಹೊಸ ಆಯಾಮ ನೀಡಿದ್ದಾರೆ. ಹೀಗಿರುವಾಗ ಈ ಲಾಕ್‌ಡೌನ್ ನಡುವೆ ತಾಯಿಯೊಬ್ಬಳು ಲಾಕ್‌ಡೌನ್‌ ವೇಳೆ ಅಪಾಯಕಾರಿ ನಿರ್ಧಾರ ತೆಗೆದುಕೊಂಡಿದ್ದಾಳೆ. ಇದರ ಫಲಿತಾಂಶ ನೆಗೆಟಿವ್ ಆಗುವ ಸಾಧ್ಯತೆಗಳೂ ಇದ್ದವು. ಹೌದು ಈಕೆ ಮನೆಯಲ್ಲೇ ಮಗುವಿಗೆ ಜನ್ಮ ನೀಡಲು ನಿರ್ಧರಿಸಿದ್ದಾಳೆ. ಆಸ್ಟ್ರೇಲಿಯಾದ ತಾಯಿ ಈ ನಿರ್ಧಾರ ತೆಗೆದುಕೊಂಡಿದ್ದು, ಡೆಲಿವರಿಯನ್ನು ಇನ್ಸ್ಟಾಗ್ರಾಂನಲ್ಲಿ ಲೈವ್ ನೀಡಿದ್ದಾರೆ.