ಈತನ ಹೊಟ್ಟೆಯಲ್ಲಿತ್ತು 4 ಅನಕೊಂಡದಷ್ಟು ಉದ್ದ ಹುಳ, ತೆವಳುತ್ತಾ ಗುಪ್ತಾಂಗ ತಲುಪಿತ್ತು!
ನೀವು ಅನಕೊಂಡ ಸಿನಿಮಾ ನೋಡಿರುತ್ತೀರಿ. ಇವು ವಿಶ್ವದ ಅತೀ ದೊಡ್ಡ ಹಾವುಗಳಲ್ಲೊಂದು. ವಿಶ್ವದ ವಿಶಾಲಕಾಯ ಹಾವಾಗಿದ್ದು, ಈವರೆಗೆ ಪತ್ತೆಯಾದ ಅತಿ ದೊಡ್ಡ ಅನಕೊಂಡದ ಉದ್ದ 30 ಅಡಿಯಾಗಿದೆ. ಸಾಮಾನ್ಯವಾಗಿ ಹೆಣ್ಣು ಅನಕೊಂಡ 15 ಅಡಿ ಹಾಗೂ ಗಮಡು ಅನಕೊಂಡ 9 ಅಡಿ ಉದ್ದವಿರುತ್ತದೆ. ಆದರೆ ಥಾಯ್ಲೆಂಡ್‌ನಲ್ಲಿ ವ್ಯಕ್ತಿಯೊಬ್ಬನ ಹೊಟ್ಟೆಯಿಂದ ವೈದ್ಯರು 59 ಅಡಿ ಉದ್ದದ ಹುಳುವನ್ನು ಹೊರ ತೆಗೆದಿದ್ದಾರೆ. ಅಂದರೆ ಸುಮಾರು ನಾಲ್ಕು ಅನಕೊಂಡಾದಷ್ಟು ಉದ್ದದ ಹುಳ ಇದಾಗಿತ್ತು. 67 ವರ್ಷದ ಈ ವ್ಯಕ್ತಿಗೆ ಕಳೆದ ಕೆಲ ದಿನಗಳಿಂದ ಹೊಟ್ಟೆ ನೋವಿನ ಸಮಸ್ಯೆ ಇತ್ತು. ಅಲ್ಟ್ರಾಸೌಂಡ್ ಟೆಸ್ಟ್ ನಡೆಸಿದಾಗ ಅವಿತು ಕುಳಿತಿದ್ದ ಈ ಹುಳ ವೈದ್ಯರನ್ನು ಬೆಚ್ಚಿ ಬೀಳುವಂತೆ ಮಾಡಿದೆ.

ಈ ಘಟನೆ ಥಾಯ್ಲೆಂಡ್‌ನ ನೋಂಗ್‌ಖಾಯಿ ಪ್ರಾಂತ್ಯದಲ್ಲಿ ನಡೆದಿದೆ. ಇಲ್ಲಿನ 67 ವರ್ಷದ ವ್ಯಕ್ತಿಯೊಬ್ಬನ ಹೊಟ್ಟೆಯಿಂದ ವೈದ್ಯರು 59 ಅಡಿ ಉದ್ದದ ಹುಳವನ್ನು ತೆಗೆದಿದ್ದಾರೆ. ಈ ಹುಳ ದೀರ್ಘ ಕಾಲದಿಂದ ಈ ವ್ಯಕ್ತಿಯ ಹೊಟ್ಟೆಯಲ್ಲಿತ್ತು ಎಂಬುವುದು ವೈದ್ಯರ ಮಾತಾಗಿದೆ.

ದ ಸನ್‌ನಲ್ಲಿ ಪ್ರಕಟವಾದ ವರದಿಯನ್ವಯ ಈ ವ್ಯಕ್ತಿಯ ಹೊಟ್ಟೆ ಬಹಳ ದೊಡ್ಡದಾಗಿತ್ತು. ಅಲ್ಲದೇ ಅವರು ಬಹಳಷ್ಟು ಸಮಸ್ಯೆ ಎದುರಿಸುತ್ತಿದ್ದರು. ಆದರೆ ದಿನಗಳೆದಂತೆ ನೋವು ಹೆಚ್ಚಾದ ಪರಿಣಾಮ ಆತ ಪ್ಯಾರಾಸಿಟಿಕ್ ಡಿಸೀಸ್ ರಿಸರ್ಚ್ ಸೆಂಟರ್‌ಗೆ ತೆರಳಿ ತಪಾಸಣೆ ನಡೆಸಿದ್ದಾರೆ.

ಈ ವರದಿ ಕಂಡು ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ. ವ್ಯಕ್ತಿಯ ಹೊಟ್ಟೆಯಿಂದ ಹಿಡಿದು ಗುಪ್ತಾಂಗದ ನಡುವೆ 59 ಅಡಿ ಉದ್ದದ ಹುಳ ಕುಳಿತಿತ್ತು. ಅದರ ಗಾತ್ರ ಅದೆಷ್ಟು ದೊಡ್ಡದಿತ್ತೆಂದರೆ ಹೊಟ್ಟೆಯಿಂದ ಹಿಡಿದು ಗುಪ್ತಾಂಗದವರೆಗೆ ತಲುಪಿತ್ತು.

ಇದನ್ನು ಹೊರ ತೆಗೆಯಲು ವೈದ್ಯರು ದೀರ್ಘ ಕಾಲದ ಆಪರೇಷನ್ ನಡೆಸಿದ್ದಾರೆ. ಹಲವಾರು ತಾಸು ಈ ಸರ್ಜರಿ ನಡೆದಿದ್ದು, ಅಂತಿಮವಾಗಿ ಗುದದ್ವಾರದ ಮೂಲಕ ಹುಳ ಹೊರೆಗೆಯಲಾಗಿದೆ. ಹುಳ ಅದೆಷ್ಟು ಉದ್ದವಿತ್ತೆಂದರೆ ವೈದ್ಯರೂ ಹೊರಗೆಳೆದು ಸುಸ್ತಾಗಿದ್ದಾರೆ.

ಈ ಬಗ್ಗೆ ಮಾಹಿತಿ ನಿಡಿರುವ ವೈದ್ಯರು ಹುಳಗಳು ಮನುಷ್ಯನ ಹೊಟ್ಟೆಯಲ್ಲಿ ಸುಮರು 30 ವರ್ಷ ಜೀವಂತವಾಗಿರುತ್ತವೆ. ಇವು ಹೊಟ್ಟೆಯಲ್ಲಿರುವ ಮಾಂಸ ತಿಂದು ಬದುಕುತ್ತವೆ. ಇದನ್ನು ಔಷಧಿ ಮೂಕಕ ಹೊಟ್ಟೆಯಿಂದ ಹೊರ ಹಾಕಬಹುದು. ಮೆಡಿಕಲ್‌ಗಳಲ್ಲೂ ಮಾತ್ರೆಗಳು ಸಿಗುತ್ತವೆ ಎಂದಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ