ಮಹಿಳೆಯರನ್ನು ಕಾಡುವ ವೈಟ್ ಡಿಸ್ಚಾರ್ಜ್ : ಬಣ್ಣ ನೋಡಿ ಅರೋಗ್ಯ ಹೇಗಿದೆ ತಿಳಿಯಿರಿ
ಪಿರಿಯಡ್ಸ್ ಗೂ ಮುನ್ನ ಅಥವಾ ಪ್ರತಿದಿನ ಬಿಳಿಸ್ರಾವವಾಗುತ್ತಿರುತ್ತದೆ. ಕೆಲವರಿಗೆ ಈ ಬಗ್ಗೆ ಭಯ ಇರುತ್ತದೆ. ಈ ರೀತಿಯಾಗುವುದು ಸರೀನಾ? ತಪ್ಪ? ಎಂಬುದೇ ಗೊತ್ತಾಗುವುದಿಲ್ಲ. ಈ ವಜೈನಲ್ ಡಿಸ್ಚಾರ್ಜ್ ಬೇರೆ ಬೇರೆ ಬಣ್ಣಗಳಲ್ಲೂ ಇರುತ್ತದೆ. ಅದನ್ನು ತಿಳಿದುಕೊಳ್ಳಬೇಕು. ಯಾಕೆಂದರೆ ಒಂದೊಂದು ಬಣ್ಣ ಒಂದೊಂದು ಅರ್ಥವನ್ನು ಕೊಡುತ್ತದೆ. ಅಂದರೆ ಕೆಲವು ಬಣ್ಣದ ವಜೈನಲ್ ಡಿಸ್ಚಾರ್ಜ್ ರೋಗದ ಪರಿಣಾಮವೂ ಆಗಿರುತ್ತದೆ.

ಸಾಮಾನ್ಯ ಯೋನಿ ವಿಸರ್ಜನೆಯು ಆರೋಗ್ಯಕರ ದೈಹಿಕ ಕಾರ್ಯವಾಗಿದೆ. ಇದು ಯೋನಿಯನ್ನು ಸ್ವಚ್ಛಗೊಳಿಸುವ ಮತ್ತು ರಕ್ಷಿಸುವ ದೇಹದ ವಿಧಾನವಾಗಿದೆ. ಉದಾಹರಣೆಗೆ, ಲೈಂಗಿಕ ಪ್ರಚೋದನೆ ಮತ್ತು ಅಂಡೋತ್ಪತ್ತಿಯೊಂದಿಗೆ ಡಿಸ್ಚಾರ್ಜ್ ಹೆಚ್ಚುವುದು ಸಾಮಾನ್ಯ. ವ್ಯಾಯಾಮ, ಜನನ ನಿಯಂತ್ರಣ ಮಾತ್ರೆಗಳ ಬಳಕೆ ಮತ್ತು ಭಾವನಾತ್ಮಕ ಒತ್ತಡವು ಡಿಸ್ಚಾರ್ಜ್ ಗೆ ಕಾರಣವಾಗಬಹುದು.

ಮಹಿಳೆಯರಿಗೆ ವೈಟ್ ಡಿಸ್ಚಾರ್ಜ್(ಬಿಳಿ ಸ್ರಾವ) ಆಗುವುದು ಸಾಮಾನ್ಯ. ಆದರೆ ಇದರಲ್ಲಿ ಯಾವುದು ಸಾಮಾನ್ಯ, ಯಾವುದು ಅಸಾಮಾನ್ಯ ಅನ್ನೋದನ್ನು ಪ್ರತಿಯೊಬ್ಬ ಮಹಿಳೆ ತಿಳಿದುಕೊಳ್ಳಬೇಕು. ಯಾಕೆಂದರೆ ಉತ್ತಮ ಆರೋಗ್ಯಕ್ಕೆ ಈ ಬಗ್ಗೆ ನೀವು ತಿಳಿದುಕೊಳ್ಳುವುದು ಮುಖ್ಯವಾಗಿದೆ.
ದಪ್ಪವಾದ ವೈಟ್ ಡಿಸ್ಚಾರ್ಜ್ : ವಜೈನಲ್ ಡಿಸ್ಚಾರ್ಜ್ ದಪ್ಪವಾಗಿದ್ದು, ಬಿಳಿ ಬಣ್ಣದಿಂದ ಕೂಡಿದ್ದರೆ ಅದು ನಾರ್ಮಲ್ ಡಿಸ್ಚಾರ್ಜ್. ಇದರೊಂದಿಗೆ ತುರಿಕೆ, ಉರಿ ಮತ್ತು ಇರಿಟೇಷನ್ ನಂತಹ ಸಮಸ್ಯೆಗಳು ಕಂಡು ಬಂದರೆ ಅದು ಈಸ್ಟ್ ಇನ್ಫೆಕ್ಷನ್ ನಿಂದ ಉಂಟಾಗಿರುವ ಸಾಧ್ಯತೆ ಇದೆ.
ಹಳದಿ ಡಿಸ್ಚಾರ್ಜ್ : ಹಳದಿ ಡಿಸ್ಚಾರ್ಜ್ ಸಾಮಾನ್ಯವಲ್ಲ. ಈ ಬಗ್ಗೆ ನೀವು ಎಚ್ಚರ ವಹಿಸಬೇಕು. ಇದು ಬ್ಯಾಕ್ಟಿರಿಯಲ್ ಇನ್ಫೆಕ್ಷನ್ ಅಥವಾ ಸೆಕ್ಸುವಲ್ ಟ್ರಾನ್ಸ್ ಮಿಟೆಡ್ ಇನ್ಫೆಕ್ಷನ್ ನ ಲಕ್ಷಣವಾಗಿದೆ.
ಬ್ರೌನ್ ಡಿಸ್ಚಾರ್ಜ್ : ಸರಿಯಾಗಿ ಋತುಸ್ರಾವ ಆಗದೆ ಇದ್ದರೆ ಈ ರೀತಿಯಾಗಿ ಕಂದು ಬಣ್ಣದಲ್ಲಿ ಡಿಸ್ಚಾರ್ಜ್ ಆಗುತ್ತದೆ. ಆದರೆ ನಿರಂತರವಾಗಿ ಕಂದು ಬಣ್ಣದ ಸ್ರಾವ ಆಗುತ್ತಿದ್ದರೆ ಅದು ಸರ್ವಿಕಲ್ ಕ್ಯಾನ್ಸರ್ ನ ಲಕ್ಷಣವಾಗಿರುವ ಸಾಧ್ಯತೆ ಇದೆ. ಆದುದರಿಂದ ಈ ಲಕ್ಷಣ ಕಂಡು ಬಂದ ಕೂಡಲೇ ವೈದರನ್ನು ಕಂಡು ಪರಿಹಾರ ಕಂಡುಕೊಂಡರೆ ಉತ್ತಮ.
ಹಸಿರು ಸ್ರಾವ : ಹಸಿರು ಸ್ರಾವ ಆದರೆ ಅದನ್ನು ಕಡೆಗಣಿಸಲೇಬೇಡಿ. ಇದು ಬ್ಯಾಕ್ಟಿರಿಯಾ ಇನ್ಫೆಕ್ಷನ್ ಮತ್ತು ಸೆಕ್ಸುವಲ್ ಟ್ರಾನ್ಸ್ಮಿಟೆಡ್ ಇನ್ಫೆಕ್ಷನ್ ನ ಲಕ್ಷಣವಾಗಿದೆ. ಆದುದರಿಂದ ಈ ರೀತಿ ಸ್ರಾವ ಕಂಡು ಬಂದ ಕೂಡಲೇ ವೈದ್ಯರ ಬಳಿ ಚಿಕಿತ್ಸೆ ಪಡೆಯಿರಿ.
ಈಸ್ಟ್ ಇನ್ಫೆಕ್ಷನ್ : ಈಸ್ಟ್ ಇನ್ಫೆಕ್ಷನ್ ಉಂಟಾದರೆ ದಪ್ಪವಾದ, ಬಿಳಿ ಸ್ರಾವ , ತುರಿಕೆ, ಕೆಂಪಾಗುವುದು, ಇರಿಟೇಟಿಂಗ್, ಉರಿ ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಗುಲಾಬಿ ಬಣ್ಣ : ಡಿಸ್ಚಾರ್ಜ್ ಹಗುರವಾಗಿರಬಹುದು ಅಥವಾ ಹೆಚ್ಚು ಆಳವಾದ ಗುಲಾಬಿ ಬಣ್ಣವಾಗಿರಬಹುದು. ಇದು ಸಾಮಾನ್ಯವಾಗಿ ಸ್ವಲ್ಪ ರಕ್ತವನ್ನು ಹೊಂದಿರುತ್ತದೆ.ಗುಲಾಬಿ ವಿಸರ್ಜನೆಯು ಸಾಮಾನ್ಯವಾಗಿ ಪಿರಿಯಡ್ಸ್ ಮೊದಲು ಸ್ಪಾಟಿಂಗ್ ನೊಂದಿಗೆ ಸಂಭವಿಸುತ್ತದೆ. ಆದಾಗ್ಯೂ, ಇದು ಆರಂಭಿಕ ಗರ್ಭಧಾರಣೆಯಲ್ಲಿ ಇಂಪ್ಲಾಂಟೇಶನ್ ರಕ್ತಸ್ರಾವದ ಸಂಕೇತವಾಗಿರಬಹುದು.ಕೆಲವರು ಅಂಡೋತ್ಪತ್ತಿಯ ನಂತರ ಸ್ವಲ್ಪ ಸ್ಪಾಟಿಂಗ್ ಅನ್ನು ಅನುಭವಿಸುತ್ತಾರೆ, ಇದು ಗುಲಾಬಿ ವಿಸರ್ಜನೆಗೆ ಕಾರಣವಾಗಬಹುದು.
ಸೋಂಕುಗಳನ್ನು ತಡೆಗಟ್ಟಲು, ಉತ್ತಮ ನೈರ್ಮಲ್ಯವನ್ನು ಅಭ್ಯಾಸ ಮಾಡಿ ಮತ್ತು ಉಸಿರಾಡುವ ಸಾಧ್ಯವಾಗುವ ಹತ್ತಿ ಒಳ ಉಡುಪುಗಳನ್ನು ಧರಿಸಿ. ಡೌಚ್ ಗಳನ್ನು ಬಳಸಬೇಡಿ, ಏಕೆಂದರೆ ಉಪಯುಕ್ತ ಬ್ಯಾಕ್ಟೀರಿಯಾವನ್ನು ತೆಗೆದುಹಾಕುವ ಮೂಲಕ ಅವು ವಿಸರ್ಜನೆಯನ್ನು ಇನ್ನಷ್ಟು ಹದಗೆಡಿಸಬಹುದು. ಅಲ್ಲದೆ, ಸುರಕ್ಷಿತ ಲೈಂಗಿಕತೆಯನ್ನು ಅಭ್ಯಾಸ ಮಾಡಿ ಮತ್ತು ಎಸ್ ಟಿಐಗಳನ್ನು ತಪ್ಪಿಸಲು ಸುರಕ್ಷಿತವಾಗಿ ಸೆಕ್ಸ್ ಮಾಡಿ.
ಅಂಟಿ ಬಯೋಟಿಕ್ ಸೇವಿಸುವಾಗ ಯೀಸ್ಟ್ ಸೋಂಕುಗಳ ಸಾಧ್ಯತೆಯನ್ನು ಕಡಿಮೆ ಮಾಡಲು ಮೊಸರನ್ನು ತಿನ್ನಿ. ಯೀಸ್ಟ್ ಸೋಂಕು ಇದೆ ಎಂದು ತಿಳಿದಿದ್ದರೆ, ಅದನ್ನು ಓವರ್-ದಿ-ಕೌಂಟರ್ ಯೀಸ್ಟ್ ಇನ್ಫೆಕ್ಷನ್ ಕ್ರೀಮ್ ಅಥವಾ ಸಪೋಸಿಟರಿಯೊಂದಿಗೆ ಚಿಕಿತ್ಸೆ ನೀಡಬಹುದು.