- Home
- Viral News
- Viral video: ಗಲಾಟೆ ಮಾಡ್ತಿದ್ದ ಮಗುವಿಗೆ ಚಾಕೊಲೇಟ್ ಬದಲು ಐಫೋನ್ ಕೊಟ್ಟ ಅಮ್ಮ, ನದಿಗೆ ಎಸೆದ ಕಂದಮ್ಮ
Viral video: ಗಲಾಟೆ ಮಾಡ್ತಿದ್ದ ಮಗುವಿಗೆ ಚಾಕೊಲೇಟ್ ಬದಲು ಐಫೋನ್ ಕೊಟ್ಟ ಅಮ್ಮ, ನದಿಗೆ ಎಸೆದ ಕಂದಮ್ಮ
ಸಾಮಾನ್ಯವಾಗಿ ಮಕ್ಕಳು ಅಳುವುದನ್ನು ನಿಲ್ಲಿಸಲು ಅಥವಾ ಅವರನ್ನು ಸಮಾಧಾನಪಡಿಸಲು ಪೋಷಕರು ಮೊಬೈಲ್ ಫೋನ್ ಕೈಗೆ ಕೊಡುವುದು ಸಾಮಾನ್ಯ. ಆದರೆ ಇದೇ ಅಭ್ಯಾಸ ಕೆಲವೊಮ್ಮೆ ಕಷ್ಟವಾಗುತ್ತೆ ಎಂಬುದಕ್ಕೆ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋ ಸಾಕ್ಷಿಯಾಗಿದೆ.

ಮಗು ಕೈಗೆ ಐಫೋನ್ ಕೊಟ್ಟ ತಾಯಿ
ಬೊಟಿಂಗ್‌ಗೆ ತೆರಳಿದ್ದ ತಾಯಿ ತನ್ನ ಪುಟ್ಟ ಮಗುವನ್ನು ಸಮಾಧಾನಪಡಿಸಲು ಐಫೋನ್ ಅನ್ನು ಕೈಗೆ ಕೊಟ್ಟಿದ್ದಳು. ಆದರೆ ಮಗು ಫೋನ್ ಹಿಡಿದು ಆಟವಾಡುವ ಬದಲು, ಕ್ಷಣಾರ್ಧದಲ್ಲೇ ಅದನ್ನು ಕೆರೆಯ ನೀರಿಗೆ ಎಸೆದಿದೆ. ಈ ದೃಶ್ಯವನ್ನು ಅಲ್ಲಿದ್ದವರು ವಿಡಿಯೋ ಮಾಡಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಐಫೋನ್ ಕಸಿದುಕೊಂಡು ನೇರವಾಗಿ ನೀರಿಗೆ ಎಸೆದ ಮಗು
ವಿಡಿಯೋದಲ್ಲಿ ತಾಯಿ ಮಗುವನ್ನು ಮಡಿಲಲ್ಲಿ ಹಿಡಿದು ದೋಣಿಯಲ್ಲಿ ಕುಳಿತಿರುವುದು ಕಾಣಿಸುತ್ತದೆ. ಕೆಲವೇ ಕ್ಷಣಗಳಲ್ಲಿ ಮಗು ತಾಯಿಯ ಕೈಯಲ್ಲಿದ್ದ ಐಫೋನ್ ಕಸಿದುಕೊಂಡು ನೇರವಾಗಿ ನೀರಿಗೆ ಎಸೆಯುತ್ತದೆ. ಇದನ್ನು ಕಂಡ ತಾಯಿ ಕೆಲ ಕ್ಷಣಗಳ ಕಾಲ ಅಚ್ಚರಿಗೊಂಡು ಕುಳಿತಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನ ಪ್ರತಿಕ್ರಿಯೆ
ಈ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ಮಗುವಿನ ಕೃತ್ಯ ನೋಡಿ ನಗುತ್ತಿದ್ದರೆ, ಇನ್ನೂ ಕೆಲವರು ದೋಣಿಯಲ್ಲಿ ಪ್ರಯಾಣಿಸುತ್ತಿದ್ದ ಮಗುವಿಗೆ ಲೈಫ್ ಜಾಕೆಟ್ ಧರಿಸದಿರುವ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಮಗುವಿನ ಸುರಕ್ಷತೆಯನ್ನು ಮೊದಲ ಆದ್ಯತೆಯಾಗಿ ನೋಡಬೇಕಿತ್ತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಲೈಫ್ ಜಾಕೆಟ್ ಇಲ್ಲ
"ಫೋನ್ ಹೋಗಿದ್ದು ಬೇರೆ ವಿಷಯ, ಆದರೆ ಮಗುವಿಗೆ ಲೈಫ್ ಜಾಕೆಟ್ ಇಲ್ಲದಿರುವುದು ದೊಡ್ಡ ಚಿಂತೆಯ ವಿಷಯ" ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ದೋಣಿ ವಿಹಾರ, ಬೋಟಿಂಗ್ ಅಥವಾ ಜಲಕ್ರೀಡೆಗಳ ವೇಳೆ ಮಕ್ಕಳಿಗೆ ಸುರಕ್ಷತಾ ಜಾಕೆಟ್ ಕಡ್ಡಾಯವಾಗಿ ಹಾಕಿಸಬೇಕು ಎಂಬ ಚರ್ಚೆಯೂ ಈ ವಿಡಿಯೋ ಬಳಿಕ ಮತ್ತೆ ಶುರುವಾಗಿದೆ.
ಒಟ್ಟಿನಲ್ಲಿ, ಕೆಲವು ಸೆಕೆಂಡುಗಳ ಈ ವಿಡಿಯೋ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಮಕ್ಕಳ ಕೈಗೆ ದುಬಾರಿ ಗ್ಯಾಜೆಟ್‌ಗಳನ್ನು ನೀಡುವ ಮುನ್ನ ಎರಡು ಬಾರಿ ಯೋಚಿಸಬೇಕು ಎಂಬ ಸಂದೇಶವನ್ನೂ ನೀಡಿದೆ.