ಹೆಂಡ್ತಿ ಮಾಡೋ ಈ ಐದು ತಪ್ಪುಗಳು ಗಂಡನನ್ನೇ ಬಿಕಾರಿಯನ್ನಾಗಿಸುತ್ತೆ !
ಗಂಡನಿಗೆ ಒಳ್ಳೆದಾಗ್ಲಿ ಅಂತ ಹೆಂಡ್ತಿರೋ ಅದೆಷ್ಟೇ ಬಯಸಿದ್ರೂ ಅವರು ಮಾಡೋ ಸಣ್ಣ ಪುಟ್ಟ ತಪ್ಪುಗಳಿಂದ ಗಂಡ ಮತ್ತು ಮನೆಯವರು ಸಮಸ್ಯೆಯನ್ನು ಎದುರಿಸಿ, ಬಡವರಾಗಿ ಬದುಕಬೇಕಾಗುತ್ತೆ.
ಹಿಂದೂ ಧರ್ಮ ಶಾಸ್ತ್ರಗಳಲ್ಲಿ ಹಲವು ನಿಯಮಗಳನ್ನ ತಿಳಿಸಲಾಗಿದೆ. ಅವುಗಳೇನು ಸುಮ್ನೆ ನೀಡಿದ್ದಲ್ಲ, ಹಿಂದಿನ ಜ್ಞಾನಿಗಳು ಯೋಚನೆ ಮಾಡಿಯೇ ಕೆಲವೊಂದು ನಿಯಮಗಳನ್ನ ಮಾಡಿರ್ತಾರೆ. ಅವುಗಳನ್ನ ನಾವು ಪಾಲಿಸಿದ್ರೆ ಮಾತ್ರ ಲಕ್ಷ್ಮೀ ದೇವಿಯನ್ನ ಒಲಿಸಿಕೊಂಡು, ಕೈತುಂಬಾ ಹಣ ಗಳಿಸಿಕೊಂಡು ಜೀವನ ನಡೆಸೋದಕ್ಕೆ ಸಾಧ್ಯ ಆಗುತ್ತೆ. ಇಲ್ಲಾಂದ್ರೆ ಜೀವನದಲ್ಲಿ ಬಡತನ ಆವರಿಸಿಕೊಳ್ಳುತ್ತೆ.
ಕೆಲವೊಮ್ಮೆ ನಾವು ಅದೆಷ್ಟೇ ಕಷ್ಟಪಟ್ಟು ಕೆಲಸ ಮಾಡಿದ್ರೂ ಉತ್ತಮ ಫಲತಾಂಶ ಸಿಗೋದೇ ಇಲ್ಲ ಅಲ್ವಾ? ಇದಕ್ಕೆ ಕಾರಣ ಏನು ಅಂತಾನೂ ನಮಗೆ ಗೊತ್ತಾಗೋದಿಲ್ಲ. ಆದ್ರೆ ಮನೆಯಲ್ಲಿ ನಾವು ಮಾಡುವಂತಹ ಕೆಲವೊಂದು ಕೆಲಸಗಳು, ನಮ್ಮ ಪರಿಶ್ರಮದ ಮೇಲೆ ಕೆಟ್ಟ ಪರಿಣಾಮ(bad effect) ಬೀರುತ್ತೆ. ಮದುವೆಯಾದ ಮೇಲಂತೂ ಗಂಡ ಮಾಡೋ ಕರ್ಮದ ಫಲ ಹೆಂಡತಿಗೆ ಸಿಗುತ್ತೆ, ಹೆಂಡತಿ ಮಾಡೋ ಕೆಟ್ಟ ಕೆಲಸದ ಫಲ ಗಂಡನಿಗೆ ಸಿಗುತ್ತೆ. ಹೆಂಡತಿ ಮಾಡುವಂತಹ ಯಾವ ತಪ್ಪಿನಿಂದ ಗಂಡ ಕಡು ಬಡವನಾಗ್ತಾನೆ ಅನ್ನೋದನ್ನ ಹೇಳ್ತೀವಿ ಕೇಳಿ.
ಮಹಿಳೆಯರು ಪ್ರತಿದಿನ ಸೂರ್ಯೋದಯಕ್ಕೂ ಮುನ್ನ ಎದ್ದು, ಮನೆಯ ಎಲ್ಲಾ ಕೆಲಸವನ್ನು ಮಾಡಬೇಕು. ಯಾವ ಮನೆಯಲ್ಲಿ ಮಹಿಳೆ ತಡವಾಗಿ ಎದ್ದೇಳ್ತಾಳೋ, ಆ ಮನೆಯ ಮೇಲೆ ಲಕ್ಷ್ಮೀ ದೇವಿ ಕೋಪ ಮಾಡ್ಕೊಳ್ತಾಳೆ. ಇಂತಹ ಮಹಿಳೆಯರ ಪತಿ ಶ್ರೀಮಂತರಾಗೋದಕ್ಕೆ ಸಾಧ್ಯವೇ ಇಲ್ಲ.
ಸ್ತ್ರೀಯರು ಶಾಂತ ಸ್ವಭಾವದವರಾಗ್ಬೇಕು. ಮಾತಿನಲ್ಲಿ ನಯ, ವಿನಯ ಇರಬೇಕು. ಹಾಗಿದ್ರೆ ಮನೆ ನೆಮ್ಮದಿಯಾಗಿರುತ್ತೆ. ಯಾವ ಮಹಿಳೆ ಇನ್ನೊಬ್ಬರ ಮನಸ್ಸಿಗೆ ನೋವಾಗುವಂತೆ ಕೆಟ್ಟ ಶಬ್ಧಗಳನ್ನು ಉಪಯೋಗಿಸಿ ಮಾತನಾಡುತ್ತಾಳೋ ಆ ಮನೆಯಲ್ಲಿ ಪ್ರತಿದಿನ ಜಗಳ ತಪ್ಪಿದ್ದಲ್ಲ. ಇಂಥಹ ಮನೆಯಲ್ಲಿ ಧನ ಲಕ್ಷ್ಮೀ ಇರೋದು ಇಲ್ಲ. ಮಹಿಳೆಯ ಈ ಕೆಟ್ಟ ಸ್ವಭಾವದ ಕರ್ಮಫಲವನ್ನ ಇಡೀ ಮನೆ ಜನರು ಅನುಭವಿಸುತ್ತಾರೆ. ಆ ಮನೆಯಲ್ಲಿ ಬಡತನ ತುಂಬುವಂತೆ ಆಗುತ್ತದೆ.
ಇನ್ನು ಅಗತ್ಯಕ್ಕಿಂತ ಹೆಚ್ಚು ತಿಂಡಿ, ಊಟ ಮಾಡೋ ಹೆಂಗಸರು ಸಹ ಗಂಡನನ್ನ ಬಿಕಾರಿಯನ್ನಾಗಿ ಮಾಡುತ್ತಾರೆ. ಹೌದು, ಯಾವ ಮನೆಯಲ್ಲಿ ಮಹಿಳೆ ಅಗತ್ಯಕ್ಕಿಂತ ಹೆಚ್ಚು ತಿನ್ನುತ್ತಾಳೋ ಆ ಮನೆಯಲ್ಲಿ ಲಕ್ಷ್ಮೀ ಇರೋದಕ್ಕೆ ಇಷ್ಟ ಪಡುವುದಿಲ್ಲ. ಇದರಿಂದ ಮನೆಯ ಸದಸ್ಯರು ಹಣಕಾಸಿಗೆ ಸಂಬಂಧಿಸಿದ (money problem) ಸಮಸ್ಯೆಗಳನ್ನ ಎದುರಿಸುತ್ತಾರೆ.
ಮನೆಯನ್ನ ಕ್ಲೀನ್ (cleaning house) ಆಗಿ ಇಟ್ಟುಕೊಳ್ಳದೇ ಇರುವುದು ಸಹ ಹೆಂಗಸರು ಮಾಡೋ ದೊಡ್ಡ ತಪ್ಪು. ಪ್ರತಿದಿನ ಬೆಳಗ್ಗೆ ಎದ್ದು ಮನೆಯನ್ನು ಸಂಪೂರ್ಣವಾಗಿ ಶುಚಿಯಾಗಿಟ್ಟುಕೊಳ್ಳಲೇಬೇಕು. ಯಾವ ಮನೆ ಶುಚಿಯಾಗಿರಲ್ವೋ ಅಲ್ಲಿ ಲಕ್ಷ್ಮೀ ದೇವಿ ಹೆಚ್ಚು ಸಮಯ ಉಳಿಯುವುದಿಲ್ಲ. ಇದರಿಂದ ಆ ಮನೆಯ ಜನರ ಕೈಯಲ್ಲಿ ಹಣ ಉಳಿಯದೇ ಸಮಸ್ಯೆ ಅನುಭವಿಸಬೇಕಾಗಿ ಬರುತ್ತೆ.
ಮಹಿಳೆಯರು ಸಾಮಾನ್ಯವಾಗಿ ಮಾಡುವ ತಪ್ಪು ಅಂದ್ರೆ ಊಟ, ತಿಂಡಿಯ ಬಳಿಕ ಎಂಜಲು ಪಾತ್ರೆಗಳನ್ನು ಹಾಗೇ ಬಿಟ್ಟು ಬರುವುದು, ರಾತ್ರಿ ಊಟ ಮಾಡಿದ ಪಾತ್ರೆಗಳನ್ನು ಸಹ ಹಾಗೇ ಸಿಂಕಲ್ಲಿ ಬಿಟ್ಟು ಮಲಗುವುದು. ಇದರಿಂದ ಲಕ್ಷ್ಮೀ ದೇವಿ (Goddess Lakshmi) ಶಾಪ ಕೊಡುತ್ತಾಳೆ. ಯಾವತ್ತೂ ರಾತ್ರಿ ಎಂಜಲು ಪಾತ್ರೆ ಇಟ್ಟು, ನಾಳೆ ತೊಳೆದರಯತು ಅಂತ ಉದಾಸೀನ ಮಾಡಬೇಡಿ. ಲಕ್ಷ್ಮೀ ದೇವಿ ಮುನಿಸಿಕೊಂಡರೆ ನೀವು ಅತಿ ಕೆಟ್ಟದಾದ ದಾರಿದ್ರ್ಯವನ್ನ ಎದುರಿಸಬೇಕಾಗಿ ಬರುತ್ತೆ.