- Home
- Karnataka Districts
- Udupi
- ಉಡುಪಿಯಲ್ಲಿ ಕೊರಗಜ್ಜನ ಪವಾಡ: ಸತ್ಯವಾಯ್ತು ದೈವದ ಕಾರ್ಣಿಕ ನುಡಿ, ಕಳ್ಳ ಸಿಕ್ಕಿಬಿದ್ದ!
ಉಡುಪಿಯಲ್ಲಿ ಕೊರಗಜ್ಜನ ಪವಾಡ: ಸತ್ಯವಾಯ್ತು ದೈವದ ಕಾರ್ಣಿಕ ನುಡಿ, ಕಳ್ಳ ಸಿಕ್ಕಿಬಿದ್ದ!
ಉಡುಪಿ ಜಿಲ್ಲೆಯ ಮುದ್ರಾಡಿಯ ಆದಿಶಕ್ತಿ ದೇಗುಲದಲ್ಲಿ ಕಳ್ಳತನವಾಗಿತ್ತು. ಕೊರಗಜ್ಜನ ದೈವವಾಣಿಯಂತೆ ಕಳ್ಳ ಮತ್ತೆ ಬಂದು ಸಿಕ್ಕಿಬಿದ್ದಿದ್ದಾನೆ. ಈ ಘಟನೆ ಭಕ್ತರಲ್ಲಿ ಅಚ್ಚರಿ ಮೂಡಿಸಿದೆ.

ತುಳುನಾಡಿನ ಕಾರಣಿಕ ದೈವವೆಂದೇ ಜನಜನಿತವಾಗಿರುವ ಕೊರಗಜ್ಜನ ಪವಾಡಗಳು ಕೇಳಿ ಬರುತ್ತಲೇ ಇರುತ್ತದೆ. ಈಗ ಇಂತಹದ್ದೇ ಮತ್ತೊಂದು ಘಟನೆ ನಡೆದಿದೆ. ಉಡುಪಿ ಜಿಲ್ಲೆ ಹೆಬ್ರಿ ತಾಲೂಕು ಮುದ್ರಾಡಿಯ ಆದಿಶಕ್ತಿ ದೇಗುಲದಲ್ಲಿ ದೈವದ ಮತ್ತೊಂದು ಅದ್ಭುತ ಪವಾಡ ನಡೆದಿದೆ. ಹುಂಡಿ ಕದ್ದ ಕಳ್ಳನೇ ಮತ್ತೊಮ್ಮೆ ಬಂದು ಸಿಕ್ಕಿ ಬಿದ್ದಿದ್ದಾನೆ. ಮುದ್ರಾಡಿಯಲ್ಲಿ ಆದಿಶಕ್ತಿ ದೇಗುಲದ ಕಲ್ಲುರ್ಟಿ , ಕೊರಗಜ್ಜ ಸನ್ನಿದಾನವಿದೆ
ಮೇ 25ರಂದು, ಮುದ್ರಾಡಿ ದೇಗುಲದ ಕಲ್ಲುರ್ಟಿ ಮತ್ತು ಕೊರಗಜ್ಜ ದೈವಗಳ ಸನ್ನಿಧಾನದಲ್ಲಿದ್ದ ಹುಂಡಿಯನ್ನು ಕಳ್ಳನು ಕದಿಯುತ್ತಾನೆ. ಈ ಘಟನೆ ಭಕ್ತರಲ್ಲಿ ಬೇಸರ ಉಂಟುಮಾಡಿದರೂ, ದೈವದ ವಿಶ್ವಾಸದಿಂದ ಧರ್ಮದರ್ಶಿ ಸುಕುಮಾರ್ ಮೋಹನ್ ಅವರು ದೈವದ ಮೊರೆ ಹೋದರು.
“ಹತ್ತು ದಿನಗಳಲ್ಲಿ ಕಳ್ಳ ಪತ್ತೆಯಾಗುತ್ತಾನೆ, ಮತ್ತೆ ಬಂದು ಸಿಕ್ಕಿಬೀಳುತ್ತಾನೆ” ಎಂದು ಕೊರಗಜ್ಜ ದೈವದ ಆಶ್ವಾಸನೆ ನೀಡಿತು. ಇದು ಭಕ್ತರಲ್ಲಿ ಹೊಸದೊಂದು ವಿಶ್ವಾಸವನ್ನು ಹುಟ್ಟಿಸಿತು. ಆ ದೈವವಾಣಿ ನಿಜವಾಯಿತು! ಕೇವಲ ಮೂರೇ ದಿನಗಳಲ್ಲಿ, ಕಳ್ಳ ಮತ್ತೊಮ್ಮೆ ತಾನೇ ಬಂದಿದ್ದಾನೆ! ಇದೇ ದೇಗುಲಕ್ಕೆ ಎರಡನೇ ಬಾರಿಗೆ ಕದಿಯಲು ಯತ್ನಿಸುತ್ತಿದ್ದ ವೇಳೆ ಭಕ್ತರಿಗೂ ಅನುಮಾನ ಬಂದು, ಆತನನ್ನು ಹಿಡಿಯಲು ಮುಂದಾಗಿದ್ದಾರೆ
ಆದರೂ ತಪ್ಪಿಸಿಕೊಂಡು ಓಡಿದ ಆತನನ್ನು ಕೊನೆಗೂ ಆಗುಂಬೆ ಚೆಕ್ ಪೋಸ್ಟ್ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತನಾಗಿರುವ ವ್ಯಕ್ತಿ ದಾವಣಗೆರೆ ಮೂಲದ ಸಲ್ಮಾನ್ ಎಂದು ಗುರುತಿಸಲಾಗಿದೆ. ಈ ಘಟನೆ ದೈವದ ಶಕ್ತಿ, ಭಕ್ತರ ನಂಬಿಕೆ ಮತ್ತು ಸತ್ಯದ ಜಯವನ್ನೇ ಪ್ರತಿಬಿಂಬಿಸಿದೆ. ಕೊರಗಜ್ಜ ದೈವ ನೀಡಿದ ಆಶ್ವಾಸನೆ ನಿಜವಾಗಿರುವುದನ್ನು ನೋಡಿ ಭಕ್ತರು ಸಂತಸ ವ್ಯಕ್ತಪಡಿಸಿದ್ದಾರೆ.
ಕೊನೆಗೂ ಸತ್ಯಕ್ಕೆ ಜಯವಾಗಿದೆ. ದೈವದ ಮಾತು, ನುಡಿ, ಕಳೆ ವ್ಯರ್ಥವಾಗುವುದಿಲ್ಲ ಎಂಬುದನ್ನು ಈ ಪವಾಡ ಇನ್ನೊಮ್ಮೆ ಸಾಬೀತು ಮಾಡಿದೆ.