- Home
- Entertainment
- TV Talk
- ಶಾಪಿಂಗ್ ಮಾಲ್ ಸಿಸಿಟಿವಿಯಲ್ಲಿ ಸೆರೆಯಾಯ್ತು ಆ ಗಂಡ-ಹೆಂಡ್ತಿ ಕಳ್ಳ ಡ್ಯಾನ್ಸ್! ಆಗಿದ್ದೊಂದು, ಕಂಡಿದ್ದು ಇನ್ನೊಂದು!
ಶಾಪಿಂಗ್ ಮಾಲ್ ಸಿಸಿಟಿವಿಯಲ್ಲಿ ಸೆರೆಯಾಯ್ತು ಆ ಗಂಡ-ಹೆಂಡ್ತಿ ಕಳ್ಳ ಡ್ಯಾನ್ಸ್! ಆಗಿದ್ದೊಂದು, ಕಂಡಿದ್ದು ಇನ್ನೊಂದು!
ಶಾಪಿಂಗ್‌ಗೆ ಹೋದವರು ತಮಗೆ ಏನು ಬೇಕೋ ಅದನ್ನು ತಗೊಂಡು ಬರೋದುಂಟು. ಇಲ್ಲೊಂದು ಜೋಡಿ ಬಟ್ಟೆ ಅಂಗಡಿಗೆ ಹೋಗಿ ಡ್ಯಾನ್ಸ್ ಮಾಡುತ್ತ ಮೈಮರೆತಿದೆ. ಈ ವಿಡಿಯೋ ಈಗ ವೈರಲ್ ಆಗ್ತಿದೆ.

ಗಂಡ ಮತ್ತು ಹೆಂಡತಿ ಶಾಪಿಂಗ್‌ಗೆ ಹೋಗಿ, ಹೊಸ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿ ಹಾಡೊಂದು ಪ್ಲೇ ಆಗಿದೆ. ಆ ವೇಳೆ ಅವರು ಒಟ್ಟಿಗೆ ಡ್ಯಾನ್ಸ್ ಮಾಡಿರುವ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಇವರ ಡ್ಯಾನ್ಸ್ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿತ್ತು. ಆ ವಿಡಿಯೋ ಎಲ್ಲೆಡೆ ವೈರಲ್ ಆಗ್ತಿದ್ದು, ಈ ಬಗ್ಗೆಯೇ ದೊಡ್ಡ ಚರ್ಚೆ ಶುರುವಾಗಿದೆ. ವಿಡಿಯೋ ಮಾಡುವವರು ಶೋರೂಂನ ಮಾಲೀಕರು. ಆ ಹುಡುಗ ವೈರಲ್ ಆಗಬೇಕು ಅಂತ ಚಪ್ಪಲಿ ಹಾಕಿಕೊಳ್ಳದೆ ಡ್ಯಾನ್ಸ್ ಮಾಡುತ್ತಿದ್ದಾನೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಇದು ಸುಳ್ಳೋ? ಸತ್ಯವೋ ಅಂತ ಇನ್ನೂ ಕೆಲವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ತಿದ್ದಾರೆ.
ಇವರ ಜೀವನ ಖುಷಿಯಿಂದ ತುಂಬಿದೆ, ತುಂಬಾ ಮುದ್ದಾಗಿದೆ! ಡ್ಯಾನ್ಸ್ ಮಾಡುವಾಗ ಹೆಚ್ಚು ಆರಾಮಾಗಿರಬೇಕು ಎಂದು ಆ ಹುಡುಗ ತನ್ನ ಶೂಗಳನ್ನು ತೆಗೆದಿಟ್ಟಿರಬಹುದು.
ಈ ವಿಡಿಯೋ ತುಂಬಾ ಮುದ್ದಾಗಿದೆ, ಈ ಜೋಡಿ ತಮ್ಮ ಜೀವನದ ಉಳಿದ ಭಾಗವನ್ನು ಕೂಡ ಹೀಗೆ ಕಳೆಯಲಿ, ಟಚ್‌ವುಡ್ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಆನ್‌ಲೈನ್‌ನಲ್ಲಿ ಕಾಣುವ ಎಲ್ಲವನ್ನೂ ನಂಬಬೇಡಿ. ನೀವು ಕೊನೆಯ ಬಾರಿಗೆ ಬರಿಗಾಲಿನಲ್ಲಿ ಶಾಪಿಂಗ್‌ಗೆ ಯಾವಾಗ ಹೋಗಿದ್ದೀರಿ? ಎಂದು ಇನ್ನೋರ್ವರು ಹೇಳಿದ್ದರು.
ಅವರದ್ದೇ ಆದ ಪ್ರಪಂಚದಲ್ಲಿ ಇದ್ದಾರೆ. ಆ ಹುಡುಗನನ್ನು ಪಡೆಯಲು ಆ ಹುಡುಗಿ, ಆ ಹುಡುಗಿ ಪಡೆಯಲು ಆ ಹುಡುಗ ಇಬ್ಬರೂ ಅದೃಷ್ಟ ಮಾಡಿದ್ದಾರೆ. ನಿಜಕ್ಕೂ ಈ ವಿಡಿಯೋ ನೋಡಿ ಖುಷಿ ಆಯ್ತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
“ಇದು ನಾನು ಮತ್ತು ನನ್ನ ಗಂಡ. ಈ ವಿಡಿಯೋ ಬಗ್ಗೆ ಪ್ರತಿಯೊಬ್ಬರಿಗೂ ವಿಭಿನ್ನ ಅಭಿಪ್ರಾಯವಿದೆ. ಆದರೆ ನಾನು ನಮ್ಮ ಶೋರೂಂನ ಒಂದು ಔಟ್‌ಫಿಟ್‌ನ ಶೂಟಿಂಗ್ ಮಾಡುತ್ತಿದ್ದೆ, ತುಂಬ ಹೊತ್ತು ಕೆಲಸ ಮಾಡಿ ತುಂಬ ದಣಿದಿದ್ದೆ, ಆದ್ದರಿಂದ ನನ್ನನ್ನು ಚಿಯರ್ ಮಾಡಲು ನನ್ನ ಗಂಡ ನನಗಾಗಿ ಡ್ಯಾನ್ಸ್ ಮಾಡಿದ. ವೈರಲ್ ಆಗಬೇಕು ಅಥವಾ ಬೇರೆ ಯಾವುದೋ ಉದ್ದೇಶಕ್ಕಾಗಿ ಡ್ಯಾನ್ಸ್ ಮಾಡಿರಲಿಲ್ಲ. ಇದು ಕೇವಲ ನಮ್ಮ ಟೈಮ್ ಆಗಿತ್ತು ಅಷ್ಟೇ. ಯಾರೋ ನಮ್ಮ ವೀಡಿಯೊವನ್ನು ಅಪ್‌ಲೋಡ್ ಮಾಡಿದರು, ಅದು ವೈರಲ್ ಆಯಿತು. ಯಾರೆಲ್ಲ ನಮಗೆ ಆಶೀರ್ವಾದ ಮತ್ತು ಪ್ರೀತಿಯನ್ನು ನೀಡಿದ್ದೀರೋ ಅವರಿಗೆಲ್ಲ ಧನ್ಯವಾದಗಳು. ತಮ್ಮ ಜೀವನದಲ್ಲಿ ನೆಗೆಟಿವಿಟಿಯಿಂದ ಇರೋರು ಕೂಡ ಎಲ್ಲರಿಂದ ಪ್ರೀತಿಯನ್ನು ಪಡೆಯಲಿ, ಬಹುಶಃ ಅವರು ತಮ್ಮ ಮನಸ್ಥಿತಿಯನ್ನು ಬದಲಾಯಿಸಬಹುದು” ಎಂದು ಪೂಜಾ ಮೆಹ್ತಾ ಹೇಳಿದ್ದಾರೆ.