- Home
- Entertainment
- TV Talk
- ಛೀ...Bigg Boss ಮನೇಲಿ ಎಂಥ ಹೆಂಗಸರಿದ್ದಾರಪ್ಪಾ..; ಮತ್ತೊಂದು ಹೆಣ್ಣಿಗೆ ಹೀಗೆಲ್ಲ ಮಾಡೋದಾ!
ಛೀ...Bigg Boss ಮನೇಲಿ ಎಂಥ ಹೆಂಗಸರಿದ್ದಾರಪ್ಪಾ..; ಮತ್ತೊಂದು ಹೆಣ್ಣಿಗೆ ಹೀಗೆಲ್ಲ ಮಾಡೋದಾ!
Bigg Boss 19 Show: ಬಿಗ್ ಬಾಸ್ ಮನೆಯಲ್ಲಿ ಜಗಳ, ಸ್ನೇಹ, ಪ್ರೀತಿ ಎಲ್ಲವೂ ಇರುವುದು. ಸಾಕಷ್ಟು ಕಾಂಟ್ರವರ್ಸಿಗಳು ಸೃಷ್ಟಿ ಮಾಡುವ ಈ ಶೋನಲ್ಲಿ ಹೆಣ್ಣು ಮಕ್ಕಳೇ ಸೇರಿಕೊಂಡು, ಇನ್ನೋರ್ವ ಹೆಣ್ಣನ್ನು ನಿಂದಿಸಿದ್ದಾರೆ. ಬಾಡಿಶೇಮಿಂಗ್ ಮಾಡಿದವರನ್ನು ಈಗ ನಿರೂಪಕರು ತರಾಟೆಗೆ ತೆಗೆದುಕೊಂಡಿದ್ದಾರೆ.

ಅಶ್ನೂರ್ ಬಗ್ಗೆ ಹೀಗೆ ಮಾತಾಡಿದ್ರಾ?
'ಬಿಗ್ ಬಾಸ್ 19' ಸ್ಪರ್ಧಿ ಅಶ್ನೂರ್ ಅವರಿಗೆ ಈಗ 21 ವರ್ಷ. ಬಾಲನಟಿಯಾಗಿ ಹಿಂದಿ ಧಾರಾವಾಹಿಗಳಲ್ಲಿ ನಟಿಸಿದ್ದ ಅವರೀಗ ಹಿಂದಿ ಬಿಗ್ ಬಾಸ್ ಸ್ಪರ್ಧಿ. ಈಗ ಈ ಶೋನಲ್ಲಿ ಕುನಿಕಾ ಸದಾನಂದ್, ನೀಲಂ ಗಿರಿ, ತಾನ್ಯಾ ಮಿತ್ತಲ್ ಅವರು ಅಶ್ನೂರ್ ದೇಹ, ತೂಕದ ಬಗ್ಗೆ ಮಾತನಾಡಿದ್ದರು. ಈಗ ಇವರ ವಿರುದ್ಧ ಬಾಲಿವುಡ್ ತಾರೆಯರು ಕೂಡ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
13 ವರ್ಷದ ಮೊಮ್ಮಗಳಿಗೆ ಗೊತ್ತಿದೆ
ಬಿಗ್ ಬಾಸ್ ಮನೆಯಲ್ಲಿ ಮೂವರು ಮಹಿಳೆಯರು ಅಶ್ನೂರ್ ಬಗ್ಗೆ ಮಾತನಾಡಿದ್ದಾರೆ. 21 ವರ್ಷದ ಅಶ್ನೂರ್‌ಗೆ ಡಿಟಾಕ್ಸ್ ಡಯಟ್ ಇದ್ದರೂ ಕೂಡ ಸಣ್ಣಗಾಗಿಲ್ಲ, ಇದಕ್ಕೆ ಕಾರಣ ಏನು ಎಂದು ಮಾತನಾಡಿಕೊಂಡಿದ್ದಾರೆ. ನನ್ನ 13 ವರ್ಷದ ಮೊಮ್ಮಗಳಿಗೆ ಏನು ತಿನ್ನಬೇಕು, ಏನು ತಿನ್ನಬಾರದು ಎಂಬುದು ಗೊತ್ತು ಎಂದು ಕುನಿಕಾ ಹೇಳಿದ್ದಾರೆ.
27 ವರ್ಷದ ಥರ ಕಾಣ್ತೀಯಾ
ಇದಕ್ಕೂ ಮೊದಲು ಸಹಸ್ಪರ್ಧಿ ಅಭಿಷೇಕ್ ಅವರು ಅಶ್ನೂರ್ ಬಳಿ, ನೀನು 27 ವಯಸ್ಸಿನವರ ಥರ ಕಾಣುತ್ತೀಯಾ, ನಿನ್ನ ತೂಕ ಎಷ್ಟು ಎಂದೆಲ್ಲ ಪ್ರಶ್ನೆ ಮಾಡಿದ್ದರು. ಆಗಲೂ ಅಶ್ನೂರ್, ಈ ಟಾಪಿಕ್ ಬೇಡ ಎಂದು ಹೇಳಿದ್ದರು.
ಅಶ್ನೂರ್ ಆನೆ, ಡೈನೋಸರ್ ಅಂತೆ
ವೀಕೆಂಡ್ ಎಪಿಸೋಡ್‌ನಲ್ಲಿ ಸಲ್ಮಾನ್ ಖಾನ್ ಅವರು ತಾನ್ಯಾ ಮಿತ್ತಲ್, ನೀಲಂ ಗಿರಿ ಅವರಿಗೆ, “ಅಶ್ನೂರ್ ಬಗ್ಗೆ ಏನು ಅನಿಸುತ್ತದೆ?” ಎಂದು ಕೇಳಿದ್ದಾರೆ. ಆಗ ಅವರು, “ಸುಂದರ, ರಾಣಿ ಥರ ಕಾಣ್ತಾರೆ” ಎಂದು ಹೇಳಿದ್ದಾರೆ. ಆ ಬಳಿಕ ಸಲ್ಮಾನ್ ಖಾನ್, “ಅಶ್ನೂರ್ ಡೈನೋಸರ್, ಆನೆ, ಬಲೂನ್ ಎಂದೆಲ್ಲ ಕರೆದಿದ್ದೆ” ಎಂದು ಹೇಳಿದ್ದಾರೆ.
ನಾಚಿಕೆ ಆಗಬೇಕು
ಅದನ್ನು ಕೇಳಿಸಿಕೊಂಡ ಅಶ್ನೂರ್ ಅವರು, “ತಾನ್ಯಾ, ನಿನಗೆ ನಾಚಿಕೆ ಆಗಬೇಕು” ಎಂದಿದ್ದಾರೆ. ಅಶ್ನೂರ್ ಹಾಕುತ್ತಿರುವ ಅವರಿಗೆ ಬಟ್ಟೆ ಸೂಟ್ ಆಗೋದಿಲ್ಲ ಎಂದು ತಾನ್ಯಾ ಕೂಡ ಹೇಳಿದ್ದಾರೆ. ಬಾಯಿ ತೆಗೆದರೆ ಸುಳ್ಳು ಹೇಳಿ, ಬಡಾಯಿ ಕೊಚ್ಚಿಕೊಳ್ಳುವ ತಾನ್ಯಾ, ತಾನು ಐಶ್ವರ್ಯಾ ರೈಗಿಂತ ಚೆನ್ನಾಗಿದ್ದೇನೆ ಎಂದು ಕೂಡ ಹೇಳಿದ್ದರು.