ಪ್ರೀತಿ ಅಂದ್ರೇನು ಅಂತ ಗೊತ್ತಾಗಿದ್ದೆ ನಿನ್ನಿಂದ… ಗಂಡನ ಜೊತೆಗಿನ ಸಿರಿ ಫೋಟೋಸೇ ವೈರಲ್
ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ, ಬಿಗ್ ಬಾಸ್ ಸ್ಪರ್ಧಿ ಸಿರಿ ಇದೀಗ ತಮ್ಮ ಪತಿ ಜೊತೆಗಿನ ಮುದ್ದಾದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಕನ್ನಡ ಕಿರುತೆರೆಯ ಜನಪ್ರಿಯ ಸೀರಿಯಲ್‌ಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ನಟಿ ಮತ್ತು ಬಿಗ್ ಬಾಸ್ ಸ್ಪರ್ಧಿ ಸಿರಿಜಾ ಇತ್ತೀಚೆಗೆ ತಮ್ಮ ಗೆಳೆಯ ಪ್ರಭಾಕರ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಡನ್ ಆಗಿ, ಸಿಂಪಲ್ ಆಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಇವರ ಮದ್ವೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಹಲವು ವರ್ಷಗಳಿಂದ ಮದುವೆ ವಿಚಾರದಿಂದ ದೂರ ಉಳಿದಿದ್ದ ಸಿರಿ, ಬಿಗ್ ಬಾಸ್ (Bigg Boss) ಮನೆಯಲ್ಲೂ ತಮಗೆ ಮದುವೆಯಾಗೋದಕ್ಕೆ ಸರಿಯಾದ ಹುಡುಗ ಸಿಗಬೇಕು ಅಷ್ಟೇ, ಮದುವೆ ಆಗಲ್ಲ ಅಂತ ಏನಿಲ್ಲ ಎಂದಿದ್ದರು. ಇದೀಗ ಬಿಗ್ ಬಾಸ್‌ನಿಂದ ಹೊರ ಬಂದ ಸ್ವಲ್ಪ ಸಮಯದಲ್ಲಿ ಹೆಚ್ಚು ಸದ್ದು ಮಾಡದೇ ಸರಳ ವಿವಾಹವಾಗಿದ್ದರು.
ಇದೀಗ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಪತಿ ಜೊತೆಗಿನ ಮುದ್ದಾದ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಸಿರಿಜಾ (Sirija) ಆಫ್ ವೈಟ್ ಬಣ್ಣದ ಲೆಹೆಂಗಾ ಧರಿಸಿದ್ದು, ಪ್ರಭಾಕರ್ ಅದಕ್ಕೆ ಮ್ಯಾಚ್ ಆಗುವಂತಹ ವೈಟ್ ಪ್ಯಾಂಟ್, ಬ್ಲ್ಯಾಕ್ ಟೀ ಶರ್ಟ್ ಮೇಲೆ ಆಫ್ ವೈಟ್ ಜಾಕೆಟ್ ಧರಿಸಿದ್ದಾರೆ.
ಇಬ್ಬರು ಮುದ್ದು ಮುದ್ದಾಗಿ ಪೋಸ್ ಕೊಟ್ಟಿರುವ ಸುಂದರ ಫೋಟೋಗಳನ್ನು ಅಪ್ ಲೋಡ್ ಮಾಡಿರುವ ಸಿರಿ 'ನನಗೆ ಪ್ರೀತಿ ಅಂದ್ರೆ ಏನು ಅಂತ ಗೊತ್ತಾಗಿದ್ದೆ ನಿನ್ನಿಂದ' (If I know what love is, it is because of you) ಎಂದು ಬರೆದುಕೊಂಡಿದ್ದಾರೆ.
ಈ ಹೊಸ ಜೋಡಿಗಳ ಮುದ್ದಾದ ಫೋಟೋಗಳನ್ನು ಅಭಿಮಾನಿಗಳು ಇಷ್ಟಪಟ್ಟಿದ್ದು, ಮುದ್ದಾದ ಜೋಡಿ, ಯಾವಾಗ್ಲೂ ಖುಷಿಯಾಗಿರಿ, ಇಬ್ಬರು ಜೊತೆಯಾಗಿ ತುಂಬಾ ಸುಂದರವಾಗಿ ಕಾಣಿಸ್ತೀರಿ, ನಿಮ್ಮ ಪಡೆಯೋಕೆ ಸರ್ ಅದೃಷ್ಟ ಮಾಡಿದ್ದಾರೆ. ನಿಮ್ಮ ವೈವಾಹಿಕ ಜೀವನ ಸುಂದರವಾಗಿರಲಿ ಎಂದೆಲ್ಲಾ ಹಾರೈಸಿದ್ದಾರೆ.
ಸಿರಿ ಮತ್ತು ಪ್ರಭಾಕರ್ (Prabhakar) ಅವರ ವಿವಾಹ ಜೂನ್ 13 ರಂದು ನಡೆದಿದೆ. ಸಿರಿ ಅವರ ಪತಿ ಮಂಡ್ಯ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ಉದ್ಯಮಿಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಅಷ್ಟೇ ಅಲ್ಲದೇ ಪ್ರಭಾಕರ್ ಕೂಡ ಹಿಂದೆ ಧಾರಾವಾಹಿಯೊಂದರಲ್ಲಿ ಸಿರಿ ಜೊತೆ ಅಭಿನಯಿಸಿದ್ದರು.
ಇನ್ನು ಸಿಂಪಲ್ ಸುಂದರಿ ಸಿರಿಜಾ ರಂಗೋಲಿ, ಮನೆಯೊಂದು ಮೂರು ಬಾಗಿಲು, ಬದುಕು, ರಾಮಚಾರಿ ಸೇರಿ ಹಲವು ಸೀರಿಯಲ್‌ಗಳಲ್ಲಿ ನಟಿಸಿದ್ದು, ಬಿಗ್ ಬಾಸ್ ಸೀಸನ್ 10 ರ ಮೂಲಕ ಮತ್ತಷ್ಟು ಜನಪ್ರಿಯತೆ ಪಡೆದರು. ಇವರನ್ನ ಮತ್ತೆ ತೆರೆ ಮೇಲೆ ನೋಡೋದಕ್ಕೆ ಅಭಿಮಾನಿಗಳು ಕಾಯ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.