ಟೋಕಿಯೋ ಒಲಿಂಪಿಕ್ಸ್: ಪದಕಕ್ಕೆ ಗುರಿಯಿಟ್ಟ ಕರ್ನಾಟಕ ನಾಲ್ವರು ಕ್ರೀಡಾಪಟುಗಳು
ಬೆಂಗಳೂರು: ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದಿಂದ ಈ ಬಾರಿ 120ಕ್ಕೂ ಅಧಿಕ ಕ್ರೀಡಾಪಟುಗಳು ಪಾಲ್ಗೊಳ್ಳುತ್ತಿದ್ದಾರೆ. ಈ ಮೂಲಕ ಹಿಂದೆಂದಿಗಿಂತಲೂ ಅತಿಹೆಚ್ಚು ಅಥ್ಲೀಟ್‌ಗಳು ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಇನ್ನು ಇದೇ ವೇಳೆ ಕರ್ನಾಟಕದಿಂದ ನಾಲ್ವರು ಕ್ರೀಡಾಪಟುಗಳು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ನಾಲ್ವರ ಕಿರು ಪರಿಚಯ ಇಲ್ಲಿದೆ ನೋಡಿ
1. ಶ್ರೀಹರಿ ನಟರಾಜ್, ಈಜು
ಪುರುಷರ 100 ಮೀ. ಬ್ಯಾಕ್‌ಸ್ಟ್ರೋಕ್ ಈಜು ಸ್ಪರ್ಧೆಯಲ್ಲಿ ಶ್ರೀಹರಿ ನಟರಾಜ್ ಕಣಕ್ಕಿಳಿಯಲಿದ್ದಾರೆ. ಕೊನೆ ಕ್ಷಣದಲ್ಲಿ ‘ಎ’ ವಿಭಾಗದ ಸಮಯ ಸಾಧಿಸಿ ಟೋಕಿಯೋ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಪಡೆದರು.
2. ಫೌಹಾದ್ ಮಿರ್ಜಾ, ಈಕ್ವೆಸ್ಟ್ರಿಯನ್
ಒಲಿಂಪಿಕ್ಸ್ ರ‍್ಯಾಂಕಿಂಗ್‌ನ ‘ಜಿ’ ಗುಂಪಿನಲ್ಲಿ (ಆಗ್ನೇಯ ಏಷ್ಯಾ-ಓಷಿಯಾನಿಯಾ) ಅಗ್ರ 2ರಲ್ಲಿ ಸ್ಥಾನ ಪಡೆದು ಒಲಿಂಪಿಕ್ಸ್‌ಗೆ ಅರ್ಹತೆ. 2 ದಶಕಗಳ ಬಳಿಕ ಈಕ್ವೆಸ್ಟ್ರಿಯನ್‌ನಲ್ಲಿ ಭಾರತಕ್ಕೆ ಒಲಿಂಪಿಕ್ಸ್ ಅರ್ಹತೆ ಗಳಿಸಿಕೊಟ್ಟ ಕೀರ್ತಿ ಫೌಹಾದ್ ಮಿರ್ಜಾ ಅವರದ್ದು.
3. ಅದಿತಿ ಅಶೋಕ್, ಗಾಲ್ಫ್
2ನೇ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಸ್ಪರ್ಧೆ. ನೇರವಾಗಿ ಅರ್ಹತೆ ಪಡೆದ 60 ಆಟಗಾರರು ಪೈಕಿ ಒಬ್ಬರು ಎನ್ನುವ ಹಿರಿಮೆ ಅದಿತಿ ಅವರದ್ದು. ಈಗಾಗಲೇ ಅದಿತಿ ಹಲವು ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಸ್ಪರ್ಧಿಸಿರುವ ಅನುಭವ ಹೊಂದಿದ್ದಾರೆ.
4. ಕೆ.ಸಿ.ಗಣಪತಿ, ಸೈಲಿಂಗ್
ಸೈಲಿಂಗ್ 49ಇಆರ್ ವಿಭಾಗದಲ್ಲಿ ವರುಣ್ ಥಾಕ್ಕರ್ ಜೊತೆ ಸ್ಪರ್ಧೆ. ಏಷ್ಯಾ-ಆಫ್ರಿಕಾ ಒಲಿಂಪಿಕ್ಸ್ ಅರ್ಹತಾ ಟೂರ್ನಿಯಲ್ಲಿ ಮೊದಲ ಸ್ಥಾನ. ಮೊದಲ ಬಾರಿಗೆ ಒಲಿಂಪಿಕ್ಸ್‌ಗೆ ಅರ್ಹತೆ. 2018ರ ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು.