MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Technology
  • TRAI ಹೊಸ ನಿಯಮ ಜಾರಿಯಾದರೂ ಜಿಯೋ, ವಿಐ, ಏರ್‌ಟೆಲ್ ಬಳಕೆದಾರರಿಗೆ OTP ಬರಲಿದೆ!

TRAI ಹೊಸ ನಿಯಮ ಜಾರಿಯಾದರೂ ಜಿಯೋ, ವಿಐ, ಏರ್‌ಟೆಲ್ ಬಳಕೆದಾರರಿಗೆ OTP ಬರಲಿದೆ!

ಡಿಜಿಟಲ್ ವ್ಯಾವಹಾರಗಳಲ್ಲಿ OTP ವಂಚನೆ ಹೆಚ್ಚುತ್ತಿರುವುದರಿಂದ TRAI ಹೊಸ ನಿಯಮಗಳನ್ನು ತಂದಿದೆ. ಇದರಿಂದಾಗಿ ಜಿಯೋ, Vi, ಏರ್‌ಟೆಲ್ ಬಳಸುವವರಿಗೆ ಇನ್ಮೇಲೆ OTP ಬರಲ್ಲ ಅಂತ ಸುದ್ದಿ ಹರಿದಾಡ್ತಿದೆ. ಈ ಬಗ್ಗೆ TRAI ಸ್ಪಷ್ಟನೆ ನೀಡಿದೆ. ಆ ವಿವರಗಳು ಇಲ್ಲಿವೆ.

2 Min read
Author : Sathish Kumar KH
Published : Nov 29 2024, 08:51 PM IST
Share this Photo Gallery
  • FB
  • TW
  • Linkdin
  • Whatsapp
15

ಯಾವುದೇ ಆನ್‌ಲೈನ್ ವ್ಯವಹಾರಕ್ಕೆ ಅಥವಾ ಖಾತೆ ಪರಿಶೀಲನೆಗೆ ನಮ್ಮ ಫೋನ್‌ಗೆ OTP ಬರುತ್ತೆ ಅಲ್ವಾ.. ಆದರೆ, OTP ವಂಚನೆಗಳು ಹೆಚ್ಚಾಗಿ, ಅನೇಕರು ಹಣ ಕಳೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ TRAI ಹೊಸ ನಿಯಮಗಳನ್ನು ತಂದಿದೆ ಅನ್ನೋದು ವೈರಲ್ ಆಗ್ತಿದೆ. ಆದರೆ, ಆ ಸುದ್ದಿಯ ನಿಜಾಂಶ ತಿಳಿಸಲು TRAI ಸ್ಪಷ್ಟನೆ ನೀಡಿದೆ. ಏನು ಸುದ್ದಿ ಹರಿದಾಡ್ತಿದೆ ಅಂದ್ರೆ..

ಆನ್‌ಲೈನ್ ವಂಚನೆ ತಡೆಯಲು ಜಾಹೀರಾತುಗಳ ರೂಪದಲ್ಲಿ ಬರುವ ಸಂದೇಶಗಳ ಮೂಲವನ್ನು, OTPಗಳನ್ನೂ ಸೇರಿಸಿ, ಟೆಲಿಕಾಂ ಕಂಪನಿಗಳು ಗುರುತಿಸಬೇಕು. ಈ SMSಗಳು ಎಲ್ಲಿಂದ ಬರ್ತಿವೆ ಅಂತ ತಿಳಿದುಕೊಳ್ಳಬೇಕು. ಹೀಗೆ ಮಾಡಿದ್ರೆ ಟೆಲಿಕಾಂ ಕಂಪನಿಗಳು ಹಾನಿಕಾರಕ SMSಗಳನ್ನು ತಡೆದು, ಬಳಕೆದಾರರನ್ನು ವಂಚನೆಯಿಂದ ರಕ್ಷಿಸಬಹುದು.

25

ಹೀಗೆ, ಮಾಡದಿದ್ದರೆ ಬ್ಯಾಂಕ್, ಇ-ಕಾಮರ್ಸ್, ಸಾಮಾಜಿಕ ಜಾಲತಾಣಗಳಂತಹ ಮುಖ್ಯ ಸೇವೆಗಳಿಗೆ OTPಗಳು ತಡವಾಗಿ ಬರುತ್ತವೆ ಅಥವಾ ಬ್ಲಾಕ್ ಆಗುತ್ತವೆ ಅನ್ನೋ ಸುದ್ದಿ ಹರಿದಾಡ್ತಿದೆ. ಈ ನಿಯಮಗಳನ್ನು ಹಂತ ಹಂತವಾಗಿ ಜಾರಿಗೆ ತರಲು TRAI ಸಮಯ ನೀಡಿದೆ. ನವೆಂಬರ್ 30ರವರೆಗೆ ಈ ನಿಯಮ ಪಾಲಿಸದ ಕಂಪನಿಗಳಿಗೆ ಎಚ್ಚರಿಕೆ ನೀಡಲಾಗುತ್ತದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಡಿಸೆಂಬರ್ 1ರಿಂದ ನಿಯಮ ಪಾಲಿಸದ ಕಂಪನಿಗಳ ಸಂದೇಶಗಳನ್ನು ಸಂಪೂರ್ಣವಾಗಿ ಬ್ಲಾಕ್ ಮಾಡ್ತೀವಿ ಅಂತ TRAI ಹೇಳಿದೆ ಎಂಬ ಸುದ್ದಿ ಹರಿದಾಡುತ್ತಿದೆ.

35

ಆದರೆ, ಈ ಸುದ್ದಿಯನ್ನು TRAI ತಳ್ಳಿಹಾಕಿದೆ. ತನ್ನ ಎಕ್ಸ್ ಪುಟದಲ್ಲಿ 'ಈ ಸುದ್ದಿ ಸುಳ್ಳು. SMSಗಳ ಮೂಲವನ್ನು ಗುರುತಿಸಲು ಮಾತ್ರ TRAI ಸೂಚಿಸಿದೆ. TRAI ಯಾವ ಸಂದೇಶಗಳನ್ನೂ ತಡೆಹಿಡಿಯಲ್ಲ' ಎಂದು ಸ್ಪಷ್ಟಪಡಿಸಿದೆ. ಈ ಹೊಸ ನಿಯಮಗಳ ಜಾರಿಯಿಂದ ಮುಂದೆ ಬಳಕೆದಾರರ ಸುರಕ್ಷತೆ ಹೆಚ್ಚುತ್ತದೆ ಅಂತ TRAI ಹೇಳಿದೆ. ಆದರೆ, OTP ಬರುವಲ್ಲಿ ತಾತ್ಕಾಲಿಕ ಅಡಚಣೆಗಳು ಉಂಟಾಗಬಹುದು ಅಂತ ತಿಳಿಸಿದೆ.

45

TRAI ಸಲಹೆಗಳು ಇಲ್ಲಿವೆ..

ಟೆಲಿಕಾಂ ಕಂಪನಿಗಳು ನಿಯಮಗಳ ಪ್ರಕಾರ ಕೆಲಸ ಮಾಡುತ್ತಿರುವುದರಿಂದ, ಬಳಕೆದಾರರು ತಮ್ಮ ಖಾತೆಗಳ ರಕ್ಷಣೆಗೆ OTPಗಳನ್ನೇ ಅವಲಂಬಿಸಬಾರದು. ಕ್ಯಾಪ್ಚಾಗಳನ್ನು ಬಳಸಬೇಕು.

ಟು ಫ್ಯಾಕ್ಟರ್ ವೆರಿಫಿಕೇಷನ್ (2FA) ಆನ್ ಮಾಡಿಕೊಳ್ಳಬೇಕು. ಆಗ OTPಗಳ ಜೊತೆಗೆ ಇನ್ನೊಂದು ಪರಿಶೀಲನಾ ಹಂತ ಸೇರಿಸಿದರೆ ನಿಮ್ಮ ಖಾತೆಗಳು ಸುರಕ್ಷಿತವಾಗಿರುತ್ತವೆ.

ಸೈಬರ್ ವಂಚನೆಗಳ ಬಗ್ಗೆ ಎಚ್ಚರವಿರಬೇಕು. ಅನುಮಾನಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡಬಾರದು, ನಿಮಗೆ ತಿಳಿಯದ ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಾರದು.

ನಿಮ್ಮ ಡಿವೈಸ್‌ ಸುರಕ್ಷಿತವಾಗಿರಲಿ. ನಿಮ್ಮ ಡಿವೈಸ್‌ನ ಸಾಫ್ಟ್‌ವೇರ್‌ ಅಪ್‌ಡೇಟ್ ಮಾಡಿಕೊಳ್ಳಬೇಕು. ನಿಮ್ಮ ಮೊಬೈಲ್‌ನಲ್ಲಿನ ನಿಮ್ಮ ವೈಯಕ್ತಿಕ ಆಪ್‌ಗಳಿಗೆ (ಹಣಕಾಸು ಸಂಬಂಧಿತ ಗೂಗಲ್ ಪೇ, ಬ್ಯಾಂಕಿಂಗ್ ಸೇವೆ, ಫೋನ್‌ ಪೇ, ಪೇಟಿಎಂ ಇತರೆ..) ಕ್ಲಿಷ್ಟಕರ ಪಾಸ್‌ವರ್ಡ್‌ಗಳನ್ನು ಬಳಸಬೇಕು. ಸೆಕ್ಯೂರಿಟಿ ಆಪ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳಬೇಕು ಎಂದು ತಿಳಿಸಿದೆ.

55

TRAI ಹೊಸ ನಿಯಮಗಳು ಸ್ಪ್ಯಾಮ್, ವಂಚನೆಯಿಂದ ಬಳಕೆದಾರರನ್ನು ರಕ್ಷಿಸಲು ಸಹಾಯ ಮಾಡುತ್ತವೆ. ವ್ಯಾಪಾರ ಸಂಬಂಧಿ SMSಗಳು ಬಂದಾಗ ಅವು ಎಲ್ಲಿಂದ ಬರ್ತಿವೆ ಅಂತ ಗುರುತಿಸುವುದನ್ನು ಕಡ್ಡಾಯಗೊಳಿಸುವ ಮೂಲಕ TRAI ಸುರಕ್ಷಿತ ಡಿಜಿಟಲ್ ವಾತಾವರಣ ಸೃಷ್ಟಿಸಲು ಗುರಿ ಇಟ್ಟುಕೊಂಡಿದೆ. ಇದು ಜನರ ಗೌಪ್ಯತೆ ಮತ್ತು ಹಣವನ್ನು ಕಾಪಾಡುತ್ತದೆ.

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.

Latest Videos
Recommended Stories
Recommended image1
ಮಾನವಕುಲದ ಪೂರ್ವಜರು ಮರಿ ಹಾಕುವ ಬದಲು ಮೊಟ್ಟೆ ಇಡುತ್ತಿದ್ದರೇ? 250 ಮಿಲಿಯನ್ ವರ್ಷಗಳ ಹಿಂದಿನ ಕೌತುಕ ಬಿಚ್ಚಿಟ್ಟ ಸೈಂಟಿಸ್ಟ್!
Recommended image2
Google ಜೆಮಿನಿಯನ್ನೇ ಪತ್ನಿಯೆಂದು ನಂಬಿ ಜೀವ ಕಳೆದುಕೊಂಡ ವ್ಯಕ್ತಿ! ಮೃತ ಹೆಂಡತಿಗಾಗಿ ಜೀವಕೊಟ್ಟ
Recommended image3
ಸ್ಲಿಮ್ ಡಿಸೈನ್, 32MP ಎಐ ಕ್ಯಾಮೆರಾ, ಅತೀ ಕಡಿಮೆ ಬೆಲೆಯಲ್ಲಿ ರೆಡ್ಮಿ ಎ7 ಪ್ರೋ 5ಜಿ ಫೋನ್ ಲಾಂಚ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved