₹10 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸೂಪರ್ ಫೀಚರ್ಸ್ Moto 5G ಸ್ಮಾರ್ಟ್ ಫೋನ್!
ಮೊಟೊರೊಲದಿಂದ ಹೊಸ 5G ಫೋನ್ ಬಿಡುಗಡೆಯಾಗಿದೆ. Moto G35 ಹೆಸರಿನ ಈ ಫೋನಿನಲ್ಲಿ ಅದ್ಭುತ ಫೀಚರ್ಸ್ ಇವೆ. ಆದರೆ ಬೆಲೆ ಕೇಳಿದ್ರೆ ಶಾಕ್ ಆಗ್ತೀರ! Moto G35 ಫೀಚರ್ಸ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ ಬನ್ನಿ.
ಮೊಟೊರೊಲ ಕಂಪನಿ ಶತಮಾನಗಳಷ್ಟು ಹಳೆಯದು. ಕಾಲಕ್ಕೆ ತಕ್ಕಂತೆ ತನ್ನ ಉತ್ಪನ್ನಗಳನ್ನು ಅಪ್‌ಡೇಟ್ ಮಾಡಿಕೊಳ್ಳುತ್ತಾ ದಿಗ್ಗಜ ಕಂಪನಿಯಾಗಿ ಬೆಳೆದಿದೆ. ಈಗ Moto G35 5G ಮೊಬೈಲ್ ಅನ್ನು ಬಿಡುಗಡೆ ಮಾಡಿದೆ. ಈ ಫೋನಿನ ಫೀಚರ್ಸ್ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ.
Moto G35 5G ಫೋನಿನಲ್ಲಿ 120 Hz ರಿಫ್ರೆಶ್ ರೇಟ್ ಇರುವ 6.72 ಇಂಚಿನ ಟಚ್‌ಸ್ಕ್ರೀನ್ ಡಿಸ್‌ಪ್ಲೇ ಇದೆ. ಡಿಸ್‌ಪ್ಲೇ ರಕ್ಷಣೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಇದೆ. 4GB RAM, Android 14, 5000 mAh ಬ್ಯಾಟರಿ ಇದೆ.
Moto G35 5G ಫೋನಿನಲ್ಲಿ 50 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ, 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾ ಮತ್ತು ಸೆಲ್ಫಿಗಾಗಿ ಸಿಂಗಲ್ ಫ್ರಂಟ್ ಕ್ಯಾಮೆರಾ ಇದೆ.
Moto G35 5G ಫೋನ್ ಹಲೋ UI ಆಂಡ್ರಾಯ್ಡ್ 14ನಲ್ಲಿ ಕೆಲಸ ಮಾಡುತ್ತದೆ. 128 GB ಮೆಮೊರಿ ಕಾರ್ಡ್ ಹಾಕಬಹುದು. ಡ್ಯುಯಲ್ ಸಿಮ್, 185 ಗ್ರಾಂ ತೂಕ, ಕೆಂಪು, ಹಸಿರು, ಕಪ್ಪು ಬಣ್ಣಗಳಲ್ಲಿ ಲಭ್ಯ. IP52 ಲೇಯರ್ ಇದೆ.
Moto G35 5G ಫೋನಿನಲ್ಲಿ Wi-Fi, GPS, Bluetooth v5.00, NFC, USB ಟೈಪ್-C, FM ರೇಡಿಯೋ, 4G ಇದೆ. ಫೋನಿನಲ್ಲಿ ಆಕ್ಸಿಲರೋಮೀಟರ್, ಆ್ಯಂಬಿಯೆಂಟ್ ಲೈಟ್ ಸೆನ್ಸರ್, ಕಂಪಾಸ್, ಗೈರೋಸ್ಕೋಪ್, ಪ್ರಾಕ್ಸಿಮಿಟಿ ಸೆನ್ಸರ್, ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು ಫೇಸ್ ಅನ್‌ಲಾಕ್ ಫೀಚರ್ ಇದೆ. ಬೆಲೆ ₹9,999.