ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ವಿನಯ್ ಗುರೂಜಿಯಿಂದ ಮರಳು ರವಾನೆ
ಆಗಸ್ಟ್ 5 ರಂದು ನಡೆಯುವ ರಾಮಮಂದಿರ ಭೂಮಿ ಪೂಜೆಗೆ ಕಾಫಿನಾಡಿನ ಪುಣ್ಯ ಕ್ಷೇತ್ರಗಳಿಂದ ಮಣ್ಣು ಹಾಗೂ ಮರಳನ್ನ ರವಾನೆ ಮಾಡಲು ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಮುಂದಾಗಿದ್ದಾರೆ. ಅದರಂತೆ ಗೌರಿಗದ್ದೆಯಿಂದ ದತ್ತಾತ್ರೇಯರ ಆಶೀರ್ವಾದದ ಮರಳನ್ನು ಅವಧೂತ ವಿನಯ್ ಗುರೂಜಿ ಭಿಕ್ಷೆ ಪಾತ್ರೆಗೆ ಮರಳು ಹಾಕಿ ಆಶೀರ್ವಾದ ಮಾಡಿ ಕಳುಹಿಸಿದ್ದಾರೆ.
ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಆಗಸ್ಟ್ ಮೊದಲ ವಾರದಲ್ಲಿ ಭೂಮಿ ಪೂಜೆ ನಡೆಯಲಿದ್ದು, ಈ ಕಾರ್ಯಕ್ಕೆ ಚಿಕ್ಕಮಗಳೂರು ಗೌರಿಗದ್ದೆಯಿಂದ ದತ್ತಾತ್ರೇಯರ ಆರ್ಶೀವಾದದ ಮರಳನ್ನು ಕಳುಹಿಸಿಕೊಡಲಾಯಿತು.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗೌರಿಗದ್ದೆಯಿಂದ ದತ್ತಾತ್ರೇಯರ ಆಶೀರ್ವಾದದ ಮರಳನ್ನು ಅವಧೂತ ವಿನಯ್ ಗುರೂಜಿ ಭಿಕ್ಷೆ ಪಾತ್ರೆಗೆ ಮರಳು ಹಾಕಿ ಆಶೀರ್ವಾದ ಮಾಡಿ ಕಳುಹಿಸಿದರು
ಗೌರಿಗದ್ದೆಯ ಜೌಧಂಬರ ವೃಕ್ಷದ ಕೆಳಗೆ ರಾಮೇಶ್ವರದಿಂದ ತಂದ ಮರಳಿನಲ್ಲಿ ಲಿಂಗ ಪೂಜೆ ಮಾಡಿ ವಿನಯ್ ಗುರೂಜಿ ಆಶೀರ್ವದಿಸಿ ಅಯೋಧ್ಯೆಗೆ ಕಳಿಸಿ ಕೊಟ್ಟಿದ್ದಾರೆ.
ರಾಮೇಶ್ವರದಿಂದ ವಿನಯ್ ಗುರೂಜಿ ಪ್ರತಿ ವರ್ಷವೂ ಮರಳನ್ನ ತಂದು ಆ ಮರಳಿನಲ್ಲಿ ಜೌಧಂಬರ ವೃಕ್ಷದ ಕೆಳಗೆ ಲಿಂಗ ಪ್ರತಿಷ್ಠಾಪಿಸಿ ಪ್ರತಿದಿನವೂ ಪೂಜೆ ಸಲ್ಲಿಸುತ್ತಾರೆ. ಪ್ರತಿ ದಿನ ಪೂಜೆ ಸಲ್ಲಿಸುತ್ತಿದ್ದ ಮರಳಿನಲ್ಲಿಯೇ ಮಾಡಿದ ಲಿಂಗದ ಮರಳನ್ನು ಅಯೋಧ್ಯೆಗೆ ವಿನಯ್ ಗುರೂಜಿ ಕಳುಹಿಸಿದರು,
ಕಲಿಯುಗದ 19ನೇ ದತ್ತಕ್ಷೇತ್ರದ ಗೌರಿಗದ್ದೆಯ ಸ್ವರ್ಣ ಪೀಠೀಕಪುರದಿಂದಲೂ ಮಣ್ಣು ರವಾನಿಸಲಾಗಿದೆ. ಇದೇ ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ನಡೆಯುವ ಭೂಮಿ ಪೂಜೆಗೆ ಮರಳು ಹಾಗೂ ಮಣ್ಣು ತಲುಪಲಿದೆ.
ಪವಿತ್ರ ಮರಳನ್ನು ಬಜರಂಗದಳದ ಪ್ರಮುಖ ಕಾರ್ಕಳ ಸುನೀಲ್.ಕೆ ಮೂಲಕ ಅಯೋಧ್ಯೆಗೆ ಕಳುಹಿಸಿ ಕೊಡಲಾಯಿತು.