ಬೆಳ್ಳಂಬೆಳಗ್ಗೆ ಮುಖ್ಯಮಂತ್ರಿ ಬಿ ಎಸ್ ವೈ ಭೇಟಿ ಮಾಡಿದ ವಿನಯ್ ಗುರೂಜಿ
ಇಂದು ಬೆಳ್ಳಂಬೆಳಗ್ಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಗೌರಿಗದ್ದೆಯ ಅವಧೂತರಾದ ವಿನಯ್ ಗುರೂಜಿ ಭೇಟಿ ಮಾಡಿದರು. ಭೇಟಿ ಮಾಡಿ ಪ್ರಮುಖ ವಿಚಾರದ ಬಗ್ಗೆ ಮುಖ್ಯಮಂತ್ರಿಗಳ ಬಳಿ ಮಾತನಾಡಿದರು.
ಇಂದು ಬೆಂಗಳೂರಿನಲ್ಲಿ ಶ್ರೀ ಅವಧೂತ ವಿನಯ್ ಗುರೂಜಿಯಿಂದ ಸಿಎಂ ಭೇಟಿ
ಮಹಾತ್ಮ ಗಾಂಧಿ ಸೇವಾ ಟ್ರಸ್ಟ್ ವತಿಯಿಂದ ಸಿಎಂ ಯಡಿಯೂರಪ್ಪ ಭೇಟಿ
ಸಿಎಂ ಹಾಗೂ ವಿನಯ್ ಗುರೂಜಿ ಭೇಟಿ ವೇಳೆ ಪ್ರಮುಖ ವಿಚಾರ ಒಂದರ ಪ್ರಸ್ತಾಪ
ಮುಖ್ಯಮಂತ್ರಿ ಯಡಿಯೂರಪ್ಪ ಬಳೀ ಗಂಭೀರ ವಿಚಾರದ ಬಗ್ಗೆ ಚರ್ಚಿಸಿದ ವಿನಯ್ ಗುರೂಜಿ
ಬೆಂಗೇರಿ ಮತ್ತು ಗರಗ ಖಾದಿ ಗ್ರಾಮೋದ್ಯೋಗ ಸಂಸ್ಥೆಗಳಲ್ಲಿ ರಾಷ್ಟ್ರಧ್ವಜ ತಯಾರಿ ಮಾಡುವ ಉದ್ಯೋಗಿಗಳಿಗೆ ಮೂಲಭೂತ ಸೌಕರ್ಯ, ವೇತನ ಅನುದಾನ ಸಮರ್ಪಕ ವಾಗಿ ಒದಗಿಸಿಕೊಡಲು ಮನವಿ ಮಾಡಿದರು
ಮನವಿಗೆ ಮಾನ್ಯ ಯಡಿಯೂರಪ್ಪನವರು ಸಕಾರಾತ್ಮಕವಾಗಿ ಸ್ಪಂದಿಸಿ ಅನುದಾನ ಒದಗಿಸಿಕೊಡುವ ಭರವಸೆ ನೀಡಿದರು
ಸಂದರ್ಭದಲ್ಲಿ ವಿಧಾನಪರಿಷತ್ ಮಾಜಿ ಶಾಸಕರಾದ ಶ್ರೀ ಟಿ ಎ ಶರವಣ,ಶ್ರೀ ಬೇಳೂರು ರಾಘವೇಂದ್ರ ಶೆಟ್ಟಿ ಹಾಗೂ ಟ್ರಸ್ಟಿನ ಇತರ ಸದಸ್ಯರು ಉಪಸ್ಥಿತರಿದ್ದರು.
ಭೇಟಿ ಬಳಿಕ ಸಿಎಂಗೆ ಶಾಲು ಹೊದಿಸಿ ಆಶೀರ್ವಾದ ನೀಡಿದರು.