ಎತ್ತುಗಳ ಮೇಲೆ ದರ್ಶನ ಕೈದಿ ಸಂಖ್ಯೆ, ಡಿ ಬಾಸ್ ಬರೆದು ಕಾರಹುಣ್ಣಿಮೆ ಆಚರಿಸಿದ ಅಭಿಮಾನಿಗಳು!
ಕಾರ ಹುಣ್ಣಿಮೆ ಆಚರಣೆ ಸಂದರ್ಭದಲ್ಲಿ ಎತ್ತುಗಳ ಮೇಲೆ ದರ್ಶನ ಕೈದಿ ಸಂಖ್ಯೆ ಹಾಗೂ ಡಿ ಬಾಸ್ ಎಂದು ಬರೆದು ಅಭಿಮಾನಿಗಳು ದರ್ಶನ ಬಗ್ಗೆ ಅಭಿಮಾನ ಪ್ರದರ್ಶಿಸಿರುವ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಗುಡಸ್ ಗ್ರಾಮದಲ್ಲಿ ನಡೆದಿದೆ.

ಕಾರ ಹುಣ್ಣಿಮೆ ನಿಮಿತ್ತ ಎತ್ತುಗಳನ್ನು ಓಡಿಸುವುದು ಸರ್ವೆ ಸಾಮಾನ್ಯ ಆದರೆ ಗುಡಸ್ ಗ್ರಾಮದಲ್ಲಿ ಒಂದು ಎತ್ತಿನ ಮೇಲೆ ನಟ ದರ್ಶನ್ ಅವರು ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ಕೈದಿ ಸಂಖ್ಯೆ 6106, ಇನ್ನೊಂದು ಎತ್ತಿನ D BOSS ಎಂದು ಬರೆದು ನಟ ದರ್ಶನ್ ಮೇಲಿರುವ ಅಭಿಮಾನ ಪ್ರದರ್ಶಿಸಿದ್ದಾರೆ.
ಪ್ರತಿ ವರ್ಷದಂತೆ ಊರಿನ ಜನರೆಲ್ಲ ಸೇರಿ ಕಾರ ಹುಣ್ಣಿಮೆ ನಿಮಿತ್ತ ಎತ್ತುಗಳಿಗೆ ಬಣ್ಣ ಬಳಿದು, ಸಿಂಗಾರ ಮಾಡಿ ಓಡಿಸುವುದು ಸಹಜ. ಆದರೆ ಈ ಬಾರಿ ಎತ್ತುಗಳ ಮೇಲೆ ಜೈಲು ಸೇರಿದ ನಟ ದರ್ಶನ್ ಅವರ ಕೈದಿ ಸಂಖ್ಯೆ D BOSS
ಕಾರ ಹುಣ್ಣಿಮೆ ಹಬ್ಬದ ನಿಮಿತ್ತ ಎತ್ತುಗಳಿಗೆ ಮೈತೊಳೆದು ಮೈಮೇಲೆ ಕೊಂಬುಗಳಿಗೆ ಬಣ್ಣಗಳಿಂದ ಅಲಂಕರಿಸಿರುವ ಅಭಿಮಾನಿಗಳು ಬಳಿಕ ಮೈಮೇಲೆ ಕೈದಿ ನಂಬರ್ ಬರೆಯಲಾಗಿದೆ, ಇನ್ನೊಂದೆಡೆ ಡಿ ಬಾಸ್ ಎಂದು ಬರೆಯಲಾಗಿದೆ.
ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕಾರಣದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದಂತೆ ದರ್ಶನ್‌ಗೆ ಕೈದಿ ನಂಬರ್ ನೀಡಲಾಗಿತ್ತು. ಆದರೆ ಇದೇ ನಂಬರ್ ಮೈಮೇಲೆ ಬಟ್ಟೆಗಳ ಮೇಲೆ ಹಚ್ಚೆ ಹಾಕಿಸುವ ಮೂಲಕ ಅಭಿಮಾನ ಮೆರೆಯುತ್ತಿರುವ ಯುವಕರು. ಇದೀಗ ಪ್ರಾಣಿಗಳ ಮೇಲೆಯೂ ದರ್ಶನ್ ಕೈದಿ ನಂಬರ್ ಬರೆದಿರುವುದು ಎಲ್ಲೆ ವೈರಲ್ ಆಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ