PM Narendra Modi In Karnataka: ಮೋದಿ ಮೇನಿಯಾದಲ್ಲಿ ಮುಳುಗಿದ ಬೆಂಗಳೂರು!
ಪ್ರಧಾನಿ ನರೇಂದ್ರ ಮೋದಿಯ ಬೆಂಗಳೂರು ಭೇಟಿ ಭರ್ಜರಿಯಾಗಿ ಸಾಗಿದೆ. ಪ್ರಧಾನಿ ಹೋದ ಪ್ರದೇಶದಲ್ಲೆಲ್ಲಾ ಬಿಜೆಪಿ ಕಾರ್ಯಕರ್ತರು ಹಾಗೂ ಜನರು ಮೋದಿ ಮೋದಿ ಎಂದು ಹರ್ಷೋದ್ಘಾರ ಮಾಡಿದ್ದಾರೆ. ಕನಕದಾಸ, ವಾಲ್ಮೀಕಿ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದರು.

ದೇಶದ ಐದನೇ ವಂದೇ ಭಾರತ್ ರೈಲು ಅನಾವರಣ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2 ಉದ್ಘಾಟನೆ ಹಾಗೂ ಕೆಂಪೇಗೌಡ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮಕ್ಕಾಗಿ ಪ್ರಧಾನಿ ಮೋದಿ ಶುಕ್ರವಾರ ಬೆಂಗಳೂರಿಗೆ ಆಗಮಿಸಿದರು.
ದೇಶದ ಐದನೇ ವಂದೇ ಭಾರತ್ ರೈಲು ಅನಾವರಣ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2 ಉದ್ಘಾಟನೆ ಹಾಗು ಕೆಂಪೇಗೌಡ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮಕ್ಕಾಗಿ ಪ್ರಧಾನಿ ಮೋದಿ ಶುಕ್ರವಾರ ಬೆಂಗಳೂರಿಗೆ ಆಗಮಿಸಿದರು.
ಕನಕದಾಸರ ಮೂರ್ತಿಗೆ ಪುಷ್ಪನಮನ ಸಲ್ಲಿಸುವ ವೇಳೆ, ಪುತ್ಥಳಿಯ ಪೀಠಕ್ಕೆ ಏರುವಾಗ ತಾವು ಧರಿಸಿದ್ದ ಶೂ ತೆಗೆದ ಪ್ರಧಾನಿ ಮೋದಿ, ಹೆಗಲಿಗೆ ಕಂಬಳಿ ಹೊದ್ದು ಪುಷ್ಪ ನಮನ ಮಾಡಿದರು. ಬಳಿಕ ವಾಲ್ಮೀಕಿ ಪ್ರತಿಮೆಗೂ ಪುಷ್ಪ ನಮನ ಮಾಡಿದರು.
ಹೆಬ್ಬಾಳದಿಂದ ವಿಧಾನಸೌಧಕ್ಕೆ ಆಗಮಿಸುವ ವೇಳೆ ಪ್ರಧಾನಿ ಮೋದಿ, ಶಾಸಕರ ಭವನಕ್ಕೆ ತೆರಳಿ ಅಲ್ಲಿದ್ದ ಕನಕದಾಸ ಹಾಗೂ ವಾಲ್ಮೀಕಿ ಪ್ರತಿಮೆಗಳಿಗೆ ಪುಷ್ಪನಮನ ಸಲ್ಲಿಸಿದರು.
ಅದಾದ ಬಳಿಕ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ದೇಶದ ಐದನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಅನಾವರಣ ಮಾಡಿದರು. ಈ ರೈಲು ಮೈಸೂರು-ಬೆಂಗಳೂರು-ಚೆನ್ನೈ ಮಾರ್ಗದಲ್ಲಿ ಸಂಚಾರ ಮಾಡಲಿದೆ.
ವಂದೇ ಭಾರತ್ ರೈಲಿನೊಂದಿಗೆ ಭಾರತ್ ಗೌರವ್ ಕಾಶಿ ದರ್ಶನ್ ವಿಶೇಷ ರೈಲಿಗೂ ಮೋದಿ ಚಾಲನೆ ನೀಡಿದರು. ಇದು ಕಾಶಿ ಯಾತ್ರಾರ್ಥಿಗಳಿಗಾಗಿ ಮುಜರಾಯಿ ಇಲಾಖೆ ಹಾಗು ರೈಲ್ವೆ ಇಲಾಖೆ ಸಹಯೋಗದ ವಿಶೇಷ ರೈಲು ಎನಿಸಿದೆ.
ರೈಲುಗಳಿಗೆ ಹಸಿರು ನಿಶಾನೆ ತೋರಿದ ಬಳಿಕ, ಮರಳಿ ಮೇಖ್ರಿ ಸರ್ಕಲ್ ಕಡೆಗೆ ಮೋದಿ ಪ್ರಯಾಣಿಸಿದರು. ಈ ವೇಳೆ ಮೆಜೆಸ್ಟಿಕ್ ಬಳಿ ನೆರೆದಿದ್ದ ಜನರಿಗೆ ಮೋದಿ ಕೈಬೀಸಿದರು.
ಮೆಜೆಸ್ಟಿಕ್ ಬಳಿ ಬಂದ ವೇಳೆ, ಕಾರ್‌ಅನ್ನು ನಿಲ್ಲಿಸುವಂತೆ ಹೇಳಿದ ಪ್ರಧಾನಿ ನರೇಂದ್ರ ಮೋದಿ ರಸ್ತೆಯ ಎರಡೂ ಬದಿಯ ಕಡೆಗೆ ಸಾಗಿ ಜನರತ್ತ ಕೈಬೀಸಿದರು.
ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಹಸಿರು ನಿಶಾನೆ ತೋರುವ ಮುನ್ನ ಪ್ರಧಾನಿ, ರೈಲಿನ ಒಳಹೊಕ್ಕು ಸಿಬ್ಬಂದಿಗಳೊಂದಿಗೆ ಮಾತುಕತೆ ನಡೆಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ