ಬೆಂಗಳೂರು, ಮೈಸೂರಲ್ಲಿ ಭಾನುವಾರ ಮಳೆ ಬರುತ್ತಾ? ಹವಾಮಾನ ಇಲಾಖೆ ಮುನ್ಸೂಚನೆ ಏನಿದೆ?
ಕರ್ನಾಟಕದಲ್ಲಿ ಇವತ್ತು ಭಾನುವಾರ ಬಿಸಿಲು ಜಾಸ್ತಿ ಇರುತ್ತದೆ. ದಕ್ಷಿಣ ಒಳನಾಡಿನ ಬೆಂಗಳೂರು ಹಾಗೂ ಕರಾವಳಿಯ ಮಂಗಳೂರಿನ ಕೆಲವು ಕಡೆ ಮಳೆ ಬರಬಹುದು. ಗುಡುಗು-ಸಿಡಿಲು ಜೊತೆಗೆ ಮಳೆ ಬರುವ ಸಾಧ್ಯತೆ ಇದೆ.

ಕರ್ನಾಟಕದ ಬಹುತೇಕ ಭಾಗಗಳಲ್ಲಿ ಭಾನುವಾರ ಬಿಸಿಲು ವಾತಾವರಣವಿರುತ್ತದೆ. ಇನ್ನು ಕರಾವಳಿ ಸೇರಿದಂತೆ ಕೆಲವು ಸೀಮಿತ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ಗುಡುಗು-ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಬೇಸಿಗೆಯಲ್ಲಿ ದೇಹ ನಿರ್ಜಲೀಕರಣ ಆಗಲಿದ್ದು, ಜನರು ಹೆಚ್ಚಾಗಿ ನೀರು ಕುಡಿಯಬೇಕು. ಸಂಜೆ ಮಳೆ ಬರುವ ವಾತಾವರಣ ಇದ್ದಾಗ ಎಚ್ಚರವಹಿಸಬೇಕು.
ಬೆಂಗಳೂರು: ಗರಿಷ್ಠ ಉಷ್ಣತೆ: 33°C, ಕನಿಷ್ಠ ಉಷ್ಣತೆ: 22°C, ರಿಯಲ್ ಫೀಲ್: 36°C ಇದೆ.
ಬೆಂಗಳೂರಿನಲ್ಲಿ ಬೆಳಗ್ಗೆಯೇ ಕೆಲವೆಡೆ ತಂಪಾದ ಮತ್ತು ಮೋಡ ಕವಿದ ವಾತಾವರಣವಿದ್ದು, ನಂತರ ಬಿಸಿಲಿನ ಝಳ ಝಳಪಿಸಿದೆ. ಮಧ್ಯಾಹ್ನದ ನಂತರ ನಗರದ ವಿವಿಧೆಡೆ ಮಳೆ ಬರಬಹುದು.
ಮೈಸೂರು:
ಗರಿಷ್ಠ ಉಷ್ಣತೆ: 35°C
ಕನಿಷ್ಠ ಉಷ್ಣತೆ: 22°C,
ಯಲ್ ಫೀಲ್: 38°C.
ಬಿಸಿಲು, ಮೋಡ ಇರುತ್ತದೆ, ಮಳೆ ಇಲ್ಲ.
ಹುಬ್ಬಳ್ಳಿ-ಧಾರವಾಡ:
ಗರಿಷ್ಠ ಉಷ್ಣತೆ: 36°C,
ಕನಿಷ್ಠ ಉಷ್ಣತೆ: 23°C,
ರಿಯಲ್ ಫೀಲ್: 37°C.
ಬಿಸಿಲು, ಮೋಡ ಇರುತ್ತೆ, ಮಳೆ ಇಲ್ಲ.
ಮಂಗಳೂರು:
ಗರಿಷ್ಠ ಉಷ್ಣತೆ: 32°C,
ಕನಿಷ್ಠ ಉಷ್ಣತೆ: 25°C,
ರಿಯಲ್ ಫೀಲ್: 38°C
ಬಿಸಿಲು, ಮೋಡ, ಸಂಜೆ ಮಳೆ ಬರಬಹುದು.