ಸನ್ನಿ ಸಾವಿಗೆ ಕಣ್ಣೀರಿಟ್ಟ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಕುಟುಂಬ
ಸಾಕು ಪ್ರಾಣಿಗಳೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಮಾಲೀಕ ಮತ್ತು ಸಾಕು ಪ್ರಾಣಿಯ ನಡುವೆ ಅವಿನಾಭಾವ ಸಂಬಂಧ ಬೆಳೆದಿರುತ್ತದೆ. ನಾಯಿ- ಬೆಕ್ಕುಗಳನ್ನು ಸಾಕುವವರಿಗೆ ಆ ಪ್ರಾಣಿಗಳೇ ಸರ್ವಸ್ವವೂ ಆಗಿರುತ್ತವೆ. ಅದರಲ್ಲೂ ಶ್ವಾನ ಮನುಷ್ಯನ ಅತಿ ನಿಯತ್ತಿನ ಪ್ರಾಣಿ. ಓರ್ವ ಕುಟುಂಬ ಸದಸ್ಯನಂತೆ ಶ್ವಾನವನ್ನು ಕಾಣುತ್ತಾರೆ. ಅದರಂತೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಕುಟುಂಬದ ಸದಸ್ಯನಂತಿದ್ದ ಮುದ್ದಿನ ನಾಯಿ ಮೃತಪಟ್ಟಿದೆ. ಇದಕ್ಕೆ ಬೊಮ್ಮಾಯಿ ಕಣ್ಣೀರಾಗಿದ್ದಾರೆ.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಸಾಕು ನಾಯಿ ಮೃತಪಟ್ಟಿದ್ದು, ಕುಟುಂಬಸ್ಥರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
ವಯೋಸಹಹವಾಗಿ ಸಾವನ್ನಪ್ಪಿರುವ ನೆಚ್ಚಿನ ನಾಯಿ ಸನ್ನಿಯನ್ನು ನೆನೆದು ಗೃಹ ಸಚಿವರು ಹಾಗೂ ಕುಟುಂಬದ ಸದಸ್ಯರು ಕಣ್ಣೀರಿಟ್ಟಿದ್ದಾರೆ.
ಬಸವರಾಜ ಬೊಮ್ಮಾಯಿ ಕುಟುಂಬದ ಸದಸ್ಯರು ತೀವ್ರ ದುಃಖದಿಂದ ಅಗಲಿದ ನೆಚ್ಚಿನ ನಾಯಿ ಸನ್ನಿಯನ್ನು ಅಪ್ಪಿಕೊಂಡು ಕಣ್ಣೀರಿಟ್ಟರು.
ಬಸವರಾಜ ಬೊಮ್ಮಾಯಿ ಕುಟುಂಬದ ಸದಸ್ಯರು ಸಂಪ್ರದಾಯಬದ್ಧವಾಗಿ ನಾಯಿ ಸನ್ನಿಗೆ ಅಂತಿಮ ವಿದಾಯ ಹೇಳಿದ್ದಾರೆ.
ನೆಚ್ಚಿನ ನಾಯಿಯ ಸಾವಿನ ಬಗ್ಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಟ್ವಟ್ಟರ್‌ನಲ್ಲಿ ಹಂಚಿಕೊಂಡಿದ್ದು, ನಮ್ಮ ಮನೆಯ ಮುದ್ದಿನ ನಾಯಿ ಸನ್ನಿ ವಯೋಸಹಜದಿಂದ ಸಾವನ್ನಪ್ಪಿದ್ದು, ತೀವ್ರ ದುಃಖ ತರಿಸಿದೆ. ಕುಟುಂಬದ ಓರ್ವ ಸದಸ್ಯನನ್ನು ಕಳೆದುಕೊಂಡಂತಾಗಿದೆ. ಮನೆಯ ಹಾಗೂ ಮನೆಗೆ ಬರುವ ಎಲ್ಲರೊಂದಿಗೆ ಅತ್ಯಂತ ಪ್ರೀತಿಯಿಂದ ಬೆರೆಯುತ್ತಿತ್ತು. ಓಂ ಶಾಂತಿ ಎಂದು ಬರೆದುಕೊಂಡಿದ್ದಾರೆ.