ವೇತನವೇ ಪಡೆಯದೆ ಕನ್ನಡ ಕಲಿಸ್ತಾರೆ ಈ ಶಿಕ್ಷಕರು..!
ದುಬೈನಲ್ಲೂ ಕನ್ನಡ ಶಾಲೆ | ಇದು ಕನ್ನಡದ ಅತಿದೊಡ್ಡ ಹೊರನಾಡು ಕನ್ನಡಿಗರ ಶಾಲೆ
ಇದು ಕನ್ನಡದ ಅತಿದೊಡ್ಡ ಹೊರನಾಡು ಕನ್ನಡಿಗರ ಶಾಲೆ
ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಫೀಸ್ ಇಲ್ಲ, ಶಿಕ್ಷಕರಿಗೆ ಸಂಬಳವೂ ಇಲ್ಲ
ದುಬೈನಲ್ಲಿ ಅಪರೂಪದ ಕಾರ್ಯ ನಡೆಸುತ್ತಿರುವ ಕನ್ನಡ ಮಿತ್ರರು ಸಂಘಟನೆ
2014ರಲ್ಲಿ ಈ ಶಾಲೆ 40 ವಿದ್ಯಾರ್ಥಿಗಳೊಂದಿಗೆ ಆರಂಭವಾಗಿತ್ತು. ಈ ವರ್ಷ ಬರೋಬ್ಬರಿ 303 ವಿದ್ಯಾರ್ಥಿಗಳ ಪ್ರವೇಶಾತಿ ನಡೆದಿದೆ
ದಾಖಲೆ ಪ್ರಮಾಣದಲ್ಲಿ ಪ್ರವೇಶಾತಿ ಬಯಸಿದ ಕನ್ನಡ ನಾಡಿನ ಮಕ್ಕಳು. ವಾರಾಂತ್ಯದಲ್ಲಿ ಶುಕ್ರವಾರದಂದು ಇಲ್ಲಿ ಕನ್ನಡ ಪಾಠ ನಡೆಯುತ್ತದೆ
ಕೆಲಸ ಅರಸಿ ಯುಎಇನಲ್ಲಿ ನೆಲೆಸಿರುವ ಕುಟುಂಬಸ್ಥರ ಮಕ್ಕಳೇ ಇಲ್ಲಿ ವಿದ್ಯಾರ್ಥಿಗಳು. ಪೋಷಕರೇ ಶಿಕ್ಷಕರಾಗಿ ಕನ್ನಡ ಕಲಿಸುತ್ತಾರೆ. ವರ್ಣಮಾಲೆಯಿಂದ ಪ್ರೌಢ ಕ್ಷಣದವರೆಗೂ ಕನ್ನಡ ಪಾಠ ಮಾಡುತ್ತಾರೆ