ಪೊಲೀಸ್ ಆಗ್ಬೇಕೆಂದು ಬಂದ 14 ವರ್ಷದ ಬಾಲಕನಿಗೆ ರವಿ ಚೆನ್ನಣ್ಣನವರ್ ಕೊಟ್ಟ ಟ್ರೈನಿಂಗ್..!
ರವಿ ಡಿ ಚನ್ನಣ್ಣನವರ್ ಅಂದ್ರೆ ಅದೇನೋ ಯುವಕರಿಗೆ ಒಂಥರಾ ಹುಮ್ಮಸ್ಸು . ಅವರ ಮಾತುಗಳು ಯುವಕರ ಮೊಬೈಲ್ ಫೋನ್ ಸೇರಿಕೊಂಡಿವೆ. ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಅವರು ಉಚಿತ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್(ಯು.ಪಿ.ಎಸ್.ಸಿ) ಪರೀಕ್ಷೆಗೆ ತರಬೇತಿ ಕೊಡಿಸುತ್ತಾರೆ. ಇದನ್ನ ಅರಿತ 14 ವರ್ಷದ ವಿದ್ಯಾರ್ಥಿಯೊಬ್ಬ ಪೊಲೀಸ್ ಆಗಬೇಕೆಂಬ ಹೆಬ್ಬಯಕೆ ಹಾಗೂ ಅದಮ್ಯ ಆಸೆ, ಕನವರಿಕೆ ಇಟ್ಟುಕೊಂಡು ರವಿ ಡಿ ಚೆನ್ನಣ್ಣನವರ್, ಐ.ಪಿ.ಎಸ್ ರವರನ್ನು ಭೇಟಿ ಮಾಡಿದ್ದಾನೆ. ಬಳಿಕ ರವಿ ಡಿ ಚೆನ್ನಣ್ಣನವರ್ ಮಾಡಿದ್ದೇನು..? ಎನ್ನುವುದು ಫೋಟೋಗಳ ಸಮೇತ ಈ ಕೆಳಗಿನಂತಿದೆ ನೋಡಿ
ಪೊಲೀಸ್ ಆಗಬೇಕೆಂಬ ಹೆಬ್ಬಯಕೆ ಹಾಗೂ ಅದಮ್ಯ ಆಸೆ, ಕನವರಿಕೆ ಇಟ್ಟುಕೊಂಡ 14 ವರ್ಷದ ರೋಹಿತ್ ಎಂಬ ಯುವಕನೊಬ್ಬ ಮಾರ್ಗದರ್ಶನ ಪಡೆಯಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ ಚೆನ್ನಣ್ಣನವರ್ ಅವರನ್ನ ಭೇಟಿ ಮಾಡಿದರು.
ಆ ಯುವಕನಲ್ಲಿರುವ ಉತ್ಸಾಹ, ಇಲಾಖೆ ಸೇರುವ ತುಡಿತ ಮತ್ತು ಅಭಿಮಾನ ಇಮ್ಮಡಿಗೊಳಿಸಲು ಕೂಡಲೇ ಅಪರಾಧ ಕೃತ್ಯ ಒಂದರ ಸ್ಥಳಕ್ಕೆ ಕರೆದುಕೊಂಡು ಹೋದರು.
ಅಪರಾಧ ಕೃತ್ಯ ಒಂದರ ಸ್ಥಳಕ್ಕೆ ಆ ಯುವಕನೊಂದಿಗೆ ಸ್ಥಳ ಪರಿಶೀಲಿಸಿ ಯುವಕನಿಗೆ ಪೊಲೀಸರ ದೈನಂದಿನ ಕೆಲಸ, ಸವಾಲುಗಳ ಬಗ್ಗೆ ಪರಿಚಯಿಸಿದರು.
ಪೊಲೀಸರ ಶಿಸ್ತು, ಕರ್ತವ್ಯ ನಿಷ್ಠೆ ಮತ್ತು ವಿಧೇಯತೆ ಬಗ್ಗೆ ಆತ್ಮೀಯತೆಯಿಂದ ಕೂಲಂಕುಷವಾಗಿ ವಿವರಿಸಿದರು.
ಪೊಲೀಸರೆಂದರೆ ಭಯವಲ್ಲ ಭರವಸೆ ಎಂದು ಪ್ರಾಕ್ಟಿಕಲ್ ಆಗಿ ಮಾರ್ಗದರ್ಶನ ನೀಡಿದರು.
ಪೊಲೀಸ್ ಆಗಬೇಕೆಂಬ ಹೆಬ್ಬಯಕೆ ಹಾಗೂ ಅದಮ್ಯ ಆಸೆ, ಕನವರಿಕೆ ಇಟ್ಟುಕೊಂಡ ಬಂದ 14 ವರ್ಷದ ರೋಹಿತ್ ಜೊತೆ ರವಿ ಡಿ ಚೆನ್ನಣ್ಣನವರ್ ಸೆಲ್ಫಿ ತೆಗೆದುಕೊಂಡರು.