Photo Gallery: ಕರ್ನಾಟಕ-ಆಂಧ್ರ ಗಡಿಯಲ್ಲಿ ರೋಚಕ ಪ್ಯಾರಾ ಮಿಲಿಟರಿ ಸಮರಾಭ್ಯಾಸ!
ಬಳ್ಳಾರಿತಾಲೂಕಿನ ಆಂಧ್ರದ ಗಡಿ ಭಾಗದಲ್ಲಿ ಇಂದು ಪ್ಯಾರ ಮಿಲ್ಟ್ರಿ ಪಡೆ ಸಮರಾಭ್ಯಾಸವನ್ನು ನಡೆಸಿತು.ಕಮಾಂಡೆಟ್ ನಿಖಿಲ್ ಅವರ ನೇತೃತ್ವದಲ್ಲಿ ಈ ತರಬೇತಿ ನಡೆಯುತ್ತಿದೆ. ಹಾರುವ ವಿಮಾನದಿಂದ ಜಿಗಿಯುತ್ತಿರುವ ಯೋಧರ ಸಾಹಸ ರೋಮಾಂಚನಗೊಳಿಸಿದೆ.

ಬಳ್ಳಾರಿತಾಲೂಕಿನ ಆಂಧ್ರದ ಗಡಿ ಭಾಗದಲ್ಲಿ ಇಂದು ಪ್ಯಾರ ಮಿಲ್ಟ್ರಿ ಪಡೆ ಸಮರಾಭ್ಯಾಸವನ್ನು ನಡೆಸಿತು.ಕಮಾಂಡೆಟ್ ನಿಖಿಲ್ ಅವರ ನೇತೃತ್ವದಲ್ಲಿ ಈ ತರಬೇತಿ ನಡೆಯುತ್ತಿದೆ.
ಬಳ್ಳಾರಿ ತಾಲೂಕಿನ ಜೋಳದರಾಶಿ, ಕೆ.ವೀರಾಪುರ, ಚೇಳಗುರ್ಕಿ ಮತ್ತು ಆಂದ್ರದ ಡೊಣೆಕಲ್ ಮಧ್ಯದ ಬಯಲು ಪ್ರದೇಶದಲ್ಲಿ ನಡೆಯುತ್ತಿರುವ ಸಮರಾಭ್ಯಸ ಮೈನವಿರೇಳಿಸುವಂತಿದೆ.
ಬೆಂಗಳೂರಿನಿಂದ ಸೈನಿಕ ತರಬೇತಿ ಪಡೆಯುತ್ತಿರುವ ಯೋಧರನ್ನು ಹೊತ್ತು ತರುವ ವಿಮಾನ 35 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿರುತ್ತಿವೆ. ಹಾರುವ ವಿಮಾನಗಳಿಂದ ಪ್ಯಾರಶೂಟ್ ಕಟ್ಟಿಕೊಂಡು ಯೋಧರು ಹೊರಗೆ ಜಿಗಿಯುತ್ತಾರೆ...
ಪ್ಯಾರಶೂಟ್ ಓಪನ್ ಮಾಡಿಕೊಂಡು 12 ರಿಂದ 13 ನಿಮಿಷದೊಳಗೆ ಕೆಳಗೆ ಬರುತ್ತಾರೆ. ಒಂದು ಬಾರಿಗೆ 20 ರಿಂದ 25 ಜನ ಒಂದು ವಿಮಾನದಿಂದ ಕೆಳಗೆ ಒಬ್ಬೊಬ್ಬರಾಗಿ ಹಾರುವ ದೃಶ್ಯ ರೋಮಾಂಚನಗೊಳಿಸಿದೆ
250 ಕ್ಕೂ ಹೆಚ್ಚು ಜನರಿಗೆ ಇಂದು ತರಬೇತಿ ನೀಡುವ ಗುರಿ ಇದ್ದು ಬೆಳಿಗ್ಗೆ 11 ಗಂಟೆ ವೇಳೆಗೆ ನಾಲ್ಕು ಬಾರಿ ನಡೆದಿದೆ. ಹೆಚ್ಚಿನ ಮರ ಗಿಡಗಿಳ್ಳಿಲ್ಲದೆ ಸಂಪೂರ್ಣ ಬಯಲು ಪ್ರದೇಶ ಆಗಿರುವುದರಿಂದ ಈ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ