ಲಾಕ್‌ಡೌನ್ ಎಫೆಕ್ಟ್: ಬಡವರ ನೋವಿಗೆ ಮಿಡಿದ ಹುಚ್ಚ ವೆಂಕಟ್, ದಿನಸಿ ಕಿಟ್ ವಿತರಣೆ
ಬೆಂಗಳೂರು(ಜೂ.03): ಮಾರಕ ಕೊರೋನಾ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರ ದೇಶಾದ್ಯಂತ ಲಾಕ್‌ಡೌನ್ ಜಾರಿ ಮಾಡಿತ್ತು. ಈ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಚಿಕನ್, ಮಟನ್, ಫಿಶ್, ಪಾನಿಪುರಿ ಅಂಗಡಿ ನಡೆಸುತ್ತಿದ್ದವರ ನೆರವಿಗೆ ಹುಚ್ಚ ವೆಂಕಟ್ ಧಾವಿಸಿದ್ದಾರೆ. ದುಡಿಯಲು ದುಡಿಮೆಯಿಲ್ಲದೆ ಕೈಯಲ್ಲಿ ದುಡ್ಡಿಲ್ಲದೆ ಕಷ್ಟದಲ್ಲಿದ್ದ ಜನರಿಗೆ ಸಹಾಯ ಮಾಡುವ ಮೂಲಕ ಹುಚ್ಚ ವೆಂಕಟ್ ಮಾನವೀಯತೆ ಮೆರೆದಿದ್ದಾರೆ.
ಲಾಕ್‌ಡೌನ್ ಸಂದರ್ಭದಲ್ಲಿ ಪಡಬಾರದ ಕಷ್ಟ ಅನುಭವಿಸಿದ ಪಾನಿಪುರಿ ಅಂಗಡಿ ಮಾಲೀಕನಿಗೆ ದಿನ ಕಿಟ್ ನೀಡಿದ ಹುಚ್ಚ ವೆಂಕಟ್
ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿದ್ದ ಚಿಕನ್ ಅಂಗಡಿ ಮಾಲೀಕನ ನೋವಿಗೆ ಹುಚ್ಚ ವೆಂಕಟ್ ಸ್ಪಂದನೆ
ಮೀನುಗಾರರ ಸಂಕಷ್ಟಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸ್ಪಂದಿಸಿ ವಿಶೇಷ ಪ್ಯಾಕೇಜ್ ಘೋಷಿಸಲು ಹುಚ್ಚ ವೆಂಕಟ್ ಮನವಿ
ಮೀನುಗಾರರ ಸಂಕಷ್ಟಕ್ಕೆ ಸ್ಪಂದಿಸಿ ದಿನಸಿ ಕಿಟ್ ನೀಡಿ ಅವರ ಸೇವೆಯನ್ನ ಸ್ಮರಿಸಿದ ಹುಚ್ಚ ವೆಂಕಟ್
ಜೀವನ ನಿರ್ವಹಣೆಗೆ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವಕರಿಗೆ ಸಹಾಹ ಹಸ್ತ ಚಾಚಿದ ವೆಂಟಕ್