ಎಲೆಕ್ಷನ್: ಮೂರು ಪಾಲಿಕೆಯಲ್ಲಿನ ಮತದಾನದ ಫೋಟೋಸ್
ಬೆಂಗಳೂರು(ಸೆ.03): ರಾಜ್ಯದ ಪ್ರಮುಖ ನಗರಗಳಾಗಿರುವ ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಬೆಳಗಾವಿ ಮಹಾನಗರ ಪಾಲಿಕೆಗೆ ಇಂದು(ಶುಕ್ರವಾರ) ಮತದಾನ ಆರಂಭವಾಗಿದ್ದು. ಬೆಳಗ್ಗೆ 7 ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ. ಹುಬ್ಬಳ್ಳಿ-ಧಾರವಾಡ ಪಾಲಿಕೆಯಲ್ಲಿ ಕಳೆದ ಎರಡು ಬಾರಿಯೂ ಅಧಿಕಾರ ನಡೆಸಿರುವ ಬಿಜೆಪಿಗೆ ಹ್ಯಾಟ್ರಿಕ್‌ಗೆಲುವಿನ ಕನಸು ಬಿದ್ದಿದೆ. ಆದರೆ ಕಾಂಗ್ರೆಸ್‌ಹೋರಾಟಕ್ಕಿಳಿದಿದೆ. ಇನ್ನು ಬೆಳಗಾವಿ ಮಹಾನಗರ ಪಾಲಿಕೆ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜಕೀಯ ಪಕ್ಷಗಳು ಚಿಹ್ನೆಯಡಿ ಸ್ಪರ್ಧೆ ಮಾಡುತ್ತಿವೆ. ಹಾಗಾಗಿ ಚುನಾವಣಾ ಕಣ ರಂಗು ಪಡೆದಿದೆ. ಇನ್ನು ಕಲಬುರಗಿಯಲ್ಲಿ ಕಾಂಗ್ರೆಸ್‌ಗೆಲುವಿನ ನಾಗಾಲೋಟ ಮುಂದುವರಿಸಲು ಸಾಹಸ ಪಡುತ್ತಿದೆ. ಬಿಜೆಪಿಗೆ ಗೆಲುವಿನ ಹಠ ಹಿಡಿದಿದೆ. ಜೆಡಿಎಸ್‌ಕಿಂಗ್‌ಮೇಕರ್‌ಆಗುವತ್ತ ಚಿತ್ತ ಹರಿಸಿದೆ.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ತಮ್ಮ ಕುಟುಂಬಸ್ಥರೊಂದಿಗೆ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಅವರು ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಭಾರಿಸುತ್ತದೆ ಅಂತ ಹೇಳಿದ್ದಾರೆ.
ಬೆಳಗಾವಿ ಬಿಜೆಪಿ ಸಂಸದೆ ಮಂಗಳಾ ಅಂಗಡಿ ಅವರು ತಮ್ಮ ಪುತ್ರಿಯರೊಂದಿಗೆ ಆಗಮಿಸಿ ತಮ್ಮ ಮತದಾನ ಹಕ್ಕನ್ನು ಚಲಾಯಿಸಿದ್ದಾರೆ. ಇದೇ ವೇಳೆ ಮಾತನಾಡಿದ ಅವರು ಬಿಜೆಪಿ ಜನರು ಆಶೀರವದಿಸಲಿದ್ದಾರೆ ಎಂಬ ವಿಶ್ವಾಸವನ್ನ ವ್ಯಕ್ತಪಡಿಸಿದ್ದಾರೆ.
ಸರದಿ ನಾಲಿನಲ್ಲಿ ನಿಂತು ಜನರು ಮತದಾನ ಮಾಡಿದ್ದಾರೆ. ಮತದಾನದ ವೇಳೆ ಮಾಸ್ಕ್ ಧರಿಸುವುದನ್ನ ಕಡ್ಡಾಯಗೊಳಿಸಲಾಗಿದೆ. ಹೀಗಾಗಿ ಪ್ರತಿಯೊಬ್ಬರು ಮಾಸ್ಕ್ ಧರಿವುದರ ಜೊತೆಗೆ ಸಾಮಾಜಿಕ ಅಂತರವನ್ನ ಕಾಯ್ದುಕೊಂಡಿದ್ದಾರೆ.
ವಯಸ್ಸಿನ ನೆಪ ಹೇಳಿ ಮನೆಯಲ್ಲೇ ಕೂಡದೆ ಮತದಾನ ಮಾಡಲು ಬಂದಿದ್ದ ವೃದ್ಧೆ. ಇದೇ ವೇಳೆ ವೃದ್ಧೆಗೆ ಪೊಲೀಸ್ ಸಿಬ್ಬಂದಿ ವ್ಹೀಲ್ ಚೇರ್ ಮೂಲಕ ಮತದಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ.
ಮತದಾನದ ಹಕ್ಕು ಚಲಾಯಿಸಿದ ಕ್ಯಾಮೆರಾ ಕಡೆ ಪೋಸ್ ಕೊಟ್ಟ ಮಹಿಳೆ. ಇಂದಿನ ಮತದಾನದ ವೇಳೆ ಎಲ್ಲರೂ ಉತ್ಸಾಹದಿಂದ ಬಂದು ಮತ ಚಲಾಯಿಸಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕುಟುಂಬದ ಅವರು ಹುಬ್ಬಳ್ಳಿ ನಗರದಲ್ಲಿ ಸಮೇತರಾಗಿ ಆಗಮಿಸಿ ಮತದಾನ ಮಾಡಿದ್ದಾರೆ. ನಿನ್ನೆ ಪ್ರಹ್ಲಾದ ಜೋಶಿ ಅವರ ಪುತ್ರಿಯ ವಿವಾಹ ಆರತಕ್ಷತೆ ಸಮಾರಂಭ ನಡೆದಿತ್ತು. ಈ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬೊಮ್ಮಾಯಿ ಸೇರಿದಂತೆ ಗಣ್ಯಾತಿಗಣ್ಯರು ಆಗಮಿಸಿದ್ದರು.