ಬೆಂಗಳೂರಿಗೆ ಬಂತು ಕೊರೋನಾ ತಡೆಗೆ ರಾಮಬಾಣ, ಪರಿಶೀಲಿಸಿದ ಆರೋಗ್ಯ ಸಚಿವ

First Published Jan 12, 2021, 5:24 PM IST

ದೇಶಕ್ಕೆ ಇಂದು (ಜನವರಿ 13) ಮಹತ್ವದ ದಿನ. ಯಾಕಂದ್ರೆ ಮಹಾಮಾರಿ ಕೊರೋನಾವನ್ನು ಸಂಹಾರ ಮಾಡುವ ಲಸಿಕೆ ರಾಜ್ಯಗಳಿಗೆ ಸರಬರಾಜು ಆಗಿದೆ. ಅದರಂತೆ ಕರ್ನಾಟಕಕ್ಕೂ ಬಂದು ತಲುಪಿದ್ದು, ಇದನ್ನು ಖುದ್ದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಪರಿಶೀಲನೆ ಮಾಡಿದರು.

ಪುಣೆಯಿಂದ ಇಂದು (ಮಂಗಳವಾರ) 11:30ಕ್ಕೆ ಬೆಂಗಳೂರಿಗೆ ಬಂದು ತಲುಪಿದೆ.

ಬೆಂಗಳೂರಿನ ಆನಂದ್‍ರಾವ್ ವೃತ್ತದ ಬಳಿಯಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಟ್ಟಡದಲ್ಲಿ ಈ ಲಸಿಕೆಗಳನ್ನು ದಾಸ್ತಾನು ಮಾಡಲಾಗಿದೆ.

ಮೊದಲ ಕಂತಿನ 7.95 ಲಕ್ಷ ಲಸಿಕೆ ಬಂದಿದೆ,

ಮೊದಲ ಕಂತಿನ 7.95 ಲಕ್ಷ ಲಸಿಕೆ ಬಂದಿದೆ,

ಆನಂದ್ ರಾವ್ ವೃತ್ತದ ಬಳಿಯಿರುವ ಸಂಗ್ರಹ ಕೇಂದ್ರಕ್ಕೆ ಭೇಟಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರು ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲಿದರು.

ಲಸಿಕೆಯನ್ನು ಸುರಕ್ಷಿತವಾಗಿ ಸಂಗ್ರಹಿಸಲಾಗಿದ್ದು ಜಿಲ್ಲಾ ಕೇಂದ್ರಗಳಿಗೆ ರವಾನಿಸಲಾಗುವುದು ಎಂದು ಸುಧಾಕರ್ ತಿಳಿಸಿದರು.

ಎರಡನೇ ಕಂತು ಬೆಳಗಾವಿಗೆ ಆಗಮಿಸಲಿದೆ ಎಂದರು.

ಎರಡನೇ ಕಂತು ಬೆಳಗಾವಿಗೆ ಆಗಮಿಸಲಿದೆ ಎಂದರು.

ಒಂದು ವಯಲ್‍ನಲ್ಲಿ 5 ಎಂಎಲ್ ಇರಲಿದ್ದು, 0.5 ಎಂಎಲ್‍ನಂತೆ 10 ಜನರಿಗೆ ಲಸಿಕೆ ನೀಡಲು ಒಂದು ವಯಲ್‍ನ್ನು ಬಳಸಲಾಗುತ್ತದೆ ಎಂದು ಮಾಹಿತಿ ನೀಡಿದರು.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?