ಉಪಚುನಾವಣೆ: ಮತದಾನ ಆರಂಭ, ಸಸಿ ನೀಡಿ ಮಹಿಳಾ ಮತದಾರರಿಗೆ ಸ್ವಾಗತ..!
ಬೆಂಗಳೂರು(ಏ.17): ಬೆಳಗಾವಿ ಲೋಕಸಭಾ, ಬೀದರ್ ಜಿಲ್ಲೆಯ ಬಸವಕಲ್ಯಾಣ ಹಾಗೂ ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಇಂದು(ಶನಿವಾರ) ಮತದಾನ ಆರಂಭವಾಗಿದೆ. ಬೆಳಿಗ್ಗೆ 7 ಗಂಟೆಗೆ ಆರಂಭವಾದ ಮತದಾನ ಸಂಜೆ 7 ರವರೆಗೆ ನಡೆಯಲಿದೆ. ಮಹಾಮಾರಿ ಕೊರೋನಾನಂತಕದ ಮಧ್ಯೆಯೂ ಮತದಾರರು ಬಹಳ ಉತ್ಸಾಹದಿಂದ ಬಂದು ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಇವರ ಜೊತೆಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳೂ ಕೂಡ ತಮ್ಮ ಪರಿವಾರ ಸಮೇತ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದಾರೆ.
ಮತದಾನ ಮಾಡಿದ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಂಗಲ ಸುರೇಶ ಅಂಗಡಿ
ಬೆಳಗಾವಿ ಸದಾಶಿವನಗರದಲ್ಲಿ ಮತದಾನ ಕೇಂದ್ರದಲ್ಲಿ ತಮ್ಮ ಮಕ್ಕಳ ಜೊತೆ ಆಗಮಿಸಿ ಮತ ಚಲಾಯಿಸಿದ ಮಂಗಲ ಅಂಗಡಿ
ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಿಂಧನೂರು ತಾಲೂಕಿನ ತುರುವಿಹಾಳ ಪಟ್ಟಣ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ಮಾಡಿದ ಬಸನಗೌಡ ತುರ್ವಿಹಾಳ
ಮಸ್ಕಿ ಪಟ್ಟಣದ ಕೇಂದ್ರ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿರುವ ತೆರೆದ ಸಖಿ (ಪಿಂಕ್) ಮತಗಟ್ಟೆ
ಮಸ್ಕಿ ವಿಧಾನಸಭಾ ಕ್ಷೇತ್ರದ 305 ಮತಗಟ್ಟೆಗಳಲ್ಲಿ ಮತದಾನಕ್ಕೆ ಅವಕಾಶ, ಬಹಳ ಉತ್ಸಾಹದಿಂದ ಮತಹಾಕಲು ಬರುತ್ತಿರುವ ಮತದಾರ ಪ್ರಭುಗಳು
ಮಹಿಳಾ ಮತದಾರರಿಗೆ ಸಸಿ ನೀಡುವ ಮೂಲಕ ಸ್ವಾಗತಿಸಿ ಚುನಾವಣಾ ಸಿಬ್ಬಂದಿ
ಕೊರೋನಾ ಹಿನ್ನೆಲೆಯಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ವಹಿಸಿ ಮತದಾನ