- Home
- News
- State
- Free Heart Treatment Hospital: ರಾಜ್ಯದಲ್ಲಿ ಹೃದಯಾಘಾತಕ್ಕೆ ಉಚಿತ ಚಿಕಿತ್ಸೆ ನೀಡುವ ಆಸ್ಪತ್ರೆ ಇದು! ಇಲ್ಲಿದೆ ಸಂಪರ್ಕ ಸಂಖ್ಯೆ, ಸೇವ್ ಮಾಡ್ಕೊಳ್ಳಿ!
Free Heart Treatment Hospital: ರಾಜ್ಯದಲ್ಲಿ ಹೃದಯಾಘಾತಕ್ಕೆ ಉಚಿತ ಚಿಕಿತ್ಸೆ ನೀಡುವ ಆಸ್ಪತ್ರೆ ಇದು! ಇಲ್ಲಿದೆ ಸಂಪರ್ಕ ಸಂಖ್ಯೆ, ಸೇವ್ ಮಾಡ್ಕೊಳ್ಳಿ!
ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಹೃದಯ ಸಮಸ್ಯೆಗಳು ಹೆಚ್ಚುತ್ತಿವೆ. ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ. ಆದರೆ ರಾಜ್ಯದ ಒಂದು ಆಸ್ಪತ್ರೆ ಉಚಿತ ಚಿಕಿತ್ಸೆ ನೀಡುತ್ತಿದೆ ಎಂಬುದು ಬಹುತೇಕ ಗೊತ್ತಿಲ್ಲ, ಉಚಿತವಾಗಿ ಚಿಕಿತ್ಸೆ ನೀಡುವ ಆಸ್ಪತ್ರೆ ಯಾವುದು? ಇಲ್ಲಿ ತಿಳಿಯೋಣ.

ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಸಾವುಗಳು
ಹಾಸನ ಜಿಲ್ಲೆಯಲ್ಲಿ 40 ದಿನಗಳಲ್ಲಿ 20ಕ್ಕೂ ಹೆಚ್ಚು ಜನ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಸಿಎಂ ಆದೇಶದ ಮೇರೆಗೆ ವಿಚಾರಣೆ ನಡೆಯುತ್ತಿದೆ. ಕೆಲವರು ಕೋವಿಡ್ ಲಸಿಕೆಯಿಂದ ಸಾವುಗಳಾಗಿವೆ ಎಂದು ಶಂಕಿಸಿದ್ದಾರೆ. ಆದರೆ ಕೇಂದ್ರ ಸರ್ಕಾರ ಇದನ್ನು ನಿರಾಕರಿಸಿದೆ. ಹಾಸನ ಜನರಲ್ಲಿ ಭಯ ಇನ್ನೂ ಕಡಿಮೆಯಾಗಿಲ್ಲ.
ಉಚಿತ ಚಿಕಿತ್ಸೆ ನೀಡುತ್ತಿರುವ ಶ್ರೀ ಮಧುಸೂದನ್ ಸಾಯಿ ಆಸ್ಪತ್ರೆ
ಈ ಸಂಕಷ್ಟದ ಸಮಯದಲ್ಲಿ, ಹಾಸನ ಜಿಲ್ಲೆಯ ಜನರಿಗೆ ಶ್ರೀ ಮಧುಸೂದನ್ ಸಾಯಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಸರೆ ನೀಡುತ್ತಿದೆ. ಈ ಸಂಸ್ಥೆ ಮುದ್ದೇನಹಳ್ಳಿಯಲ್ಲಿ 360 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಡೆಸುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ಈ ಆಸ್ಪತ್ರೆಯಲ್ಲಿ ಎಲ್ಲಾ ವೈದ್ಯಕೀಯ ಸೇವೆಗಳು ಸಂಪೂರ್ಣ ಉಚಿತವಾಗಿ ಲಭ್ಯವಿದೆ.
ಹೃದ್ರೋಗ ತಜ್ಞರಿಂದ ಚಿಕಿತ್ಸೆ
ಇಲ್ಲಿ ಹೃದಯ ವಿಭಾಗಕ್ಕೆ ಸಂಬಂಧಿಸಿದಂತೆ ದೇಶೀಯ ಮತ್ತು ಅಂತರರಾಷ್ಟ್ರೀಯ ತಜ್ಞರಿಂದ ಸೇವೆಗಳನ್ನು ಒದಗಿಸಲಾಗುತ್ತಿದೆ. ಇಲ್ಲಿ ಅತ್ಯಾಧುನಿಕ ಉಪಕರಣಗಳೊಂದಿಗೆ, ವಿಶ್ವ ದರ್ಜೆಯ ಚಿಕಿತ್ಸೆ ನೀಡಲು ಎಲ್ಲಾ ವ್ಯವಸ್ಥೆಗಳಿವೆ. ಹಾಸನ ಜಿಲ್ಲೆಯಲ್ಲಿ ಹೃದಯ ಸಂಬಂಧಿ ಕೇಸ್‌ಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಬಾಧಿತರಿಗೂ ಸಂಪೂರ್ಣ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
34,000 ಜನರಿಗೆ ಉಚಿತ ಶಸ್ತ್ರಚಿಕಿತ್ಸೆ
ಈ ಆಸ್ಪತ್ರೆಯನ್ನು ಜಾಗತಿಕ ಮಾನವತಾವಾದಿ, ಆಧ್ಯಾತ್ಮಿಕ ನಾಯಕ ಶ್ರೀ ಮಧುಸೂದನ್ ಸಾಯಿ ಅವರ ನೇತೃತ್ವದಲ್ಲಿ ನಡೆಸಲಾಗುತ್ತಿದೆ. ಅವರು ಪ್ರಾರಂಭಿಸಿದ ಶ್ರೀ ಸತ್ಯ ಸಾಯಿ ಗ್ಲೋಬಲ್ ಹ್ಯುಮಾನಿಟೇರಿಯನ್ ಮಿಷನ್ ಮೂಲಕ ಇಲ್ಲಿಯವರೆಗೆ ದೇಶಾದ್ಯಂತ 37,000 ಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ಹೃದಯ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗಿದೆ. ಇದು ದೇಶದಲ್ಲೇ ಅತ್ಯಂತ ವಿಶ್ವಾಸಾರ್ಹ ಸೇವೆಯಾಗಿ ಗುರುತಿಸಿಕೊಂಡಿದೆ.
ಅಪಾಯಿಂಟ್ಮೆಂಟ್, ಆಸ್ಪತ್ರೆಯ ವಿವರಗಳು
ಚಿಕಿತ್ಸೆಗಾಗಿ ಸಂಪರ್ಕಿಸಬೇಕಾದ ಫೋನ್ ಸಂಖ್ಯೆ
08156 275811 (ಬೆಳಿಗ್ಗೆ 10:00 ರಿಂದ ಸಂಜೆ 4:00 ರವರೆಗೆ) ಸಂಪರ್ಕಿಸಿ. ಪೂರ್ಣ ವಿವರಗಳಿಗಾಗಿ ಈ ವೆಬ್‌ಸೈಟ್ ಕ್ಲಿಕ್ ಮಾಡಿ. ಆಸ್ಪತ್ರೆಯ ವಿಳಾಸ: ಶ್ರೀ ಮಧುಸೂದನ್ ಸಾಯಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್, ಮುದ್ದೇನಹಳ್ಳಿ, ಸತ್ಯ ಸಾಯಿ ಗ್ರಾಮ, ಚಿಕ್ಕಬಳ್ಳಾಪುರ ಜಿಲ್ಲೆ, ಕರ್ನಾಟಕ.