MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • State
  • ಮಲೆನಾಡಿನ ಮಹಾಮಳೆಗೆ ಸೋರುತಿದೆ ಅಪ್ಪುಗೆ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಸರ್ಕಾರಿ ಶಾಲೆ!

ಮಲೆನಾಡಿನ ಮಹಾಮಳೆಗೆ ಸೋರುತಿದೆ ಅಪ್ಪುಗೆ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಸರ್ಕಾರಿ ಶಾಲೆ!

ಇದು ಸಾಮಾನ್ಯ ಶಾಲೆ ಅಲ್ಲ, ಜೊತೆಗಿರದ ಜೀವ ಎಂದೆಂದಿಗೂ ಜೀವಂತ ಎಂದು ಅಭಿಮಾನಿಗಳು ಆರಾಧಿಸುವ ಅಜಾತಶತ್ರು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ಗೆ ಬಾಲನಟನಾಗಿ ನಟಿಸಿದ ಮೊದಲ ಚಿತ್ರದಲ್ಲೇ ರಾಷ್ಟ್ರಪಶಸ್ತಿ ತಂದುಕೊಟ್ಟು, ಭಾರತೀಯ ಚಿತ್ರರಂಗದಲ್ಲಿ ಇತಿಹಾಸದ ಪುಟ ಸೇರಿದ ಸರ್ಕಾರಿ ಶಾಲೆ ಇದು. ಇಂದು ಮಹಾಮಳೆಗೆ ಸೋರುತಿದೆ..! ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು

2 Min read
Suvarna News
Published : Aug 04 2024, 01:22 PM IST| Updated : Aug 05 2024, 10:22 AM IST
Share this Photo Gallery
  • FB
  • TW
  • Linkdin
  • Whatsapp
15

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನ ಭಾಗದಲ್ಲಿ ನಿರಂತರವಾ್ಗಿ ಸುರಿಯುತ್ತಿರುವ ಮಳೆಯಿಂದ ಜನಜೀವನ ಒಂದಡೆ ತತ್ತರಿಸಿ ಹೋಗುತ್ತಿದ್ದರೆ ಮತ್ತೊಂದಡೆ ಸರ್ಕಾರಿ ಶಾಲಾ , ಕಾಲೇಜ್ ಕಟ್ಟಡಗಳಿಗೂ ಹಾನಿ ಆಗಿದೆ. ಅದರಲ್ಲೂ ರಾಜ್ಯದಲ್ಲೇ ಅತ್ಯಂತ ಎತ್ತರದ ಪ್ರದೇಶದಲ್ಲಿರುವ ಮುಳ್ಳಯ್ಯನಗಿರಿ ತಪ್ಪಲಿನ ಅನೇಕ ಗ್ರಾಮಗಳ ಮಕ್ಕಳ ವಿದ್ಯೆಗೆ ಆಸರೆ ಆಗಿರುವ ಸರ್ಕಾರಿ ಶಾಲೆಯ ಮಾಳಿಗೆ ಸೋರುತಿಹುದು, ಅದರ ರಕ್ಷಣೆಗೆ ಟಾರ್ಪಲ್ ವ್ಯವಸ್ಥೆ ಮಾಡಲಾಗಿದೆ.

25

ಬೆಟ್ಟದ ಹೂವು ಅಂದ್ರೆ ತಟ್ಟನೆ ನೆನಪಾಗೋದೇ ಪುನೀತ್ ರಾಜ್ಕುಮಾರ್. ಚಿಕ್ಕಮಗಳೂರಿನ ಅತ್ತಿಗುಂಡಿ ಗ್ರಾಮ. ರಾಜ್ಯದಲ್ಲೇ ಅತ್ಯಂತ ಎತ್ತರದ ಪ್ರದೇಶ ಮುಳ್ಳಯ್ಯನಗಿರಿ ತಪ್ಪಿಲಿನಲ್ಲಿರುವ ಗ್ರಾಮವೇ ಅತ್ತಿಗುಂಡಿ. ಸರಿಸುಮಾರು 100 ಮನೆಗಳು 500ಕ್ಕೂ ಹೆಚ್ಚು ಜನ ವಾಸವಿದ್ದಾರೆ.

35

ಇದೇ ಗ್ರಾಮದಲ್ಲಿ ಬೆಟ್ಟದ ಹೂವು ಚಿತ್ರದ ಚಿತ್ರಕರಣವಾಗಿದ್ದು , ಈ ಚಿತ್ರದಲ್ಲಿ ರಾಮುವಿನ ಪಾತ್ರದಲ್ಲಿ ಎಳೆ ವಯಸ್ಸಿಗೆ ಕುಟುಂಬದ ನೊಗ ಹೊತ್ತು ಜನಮನಗೆದ್ದಿದ್ದ ರಾಮು ಅಲಿಯಾಸ್ ಪುನೀತ್ ರಾಜ್ಕುಮಾರ್ ಹೋಗುತ್ತಿದ್ದ ಶಾಲೆ ಮಾಳಿಗೆ. ಕಳೆದ ಒಂದೂವರೆ ತಿಂಗಳಿನಿಂದ ಮುಳ್ಳಯ್ಯನಗಿರಿಯ ಪಶ್ಚಿಮಘಟ್ಟಗಳ ತಪ್ಪಲಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಈ ಲೆಜೆಡ್ ಶಾಲೆ ಮಾಲಿಗೆ ಸೋರುತ್ತಿದೆ. 

45

ಶಾಲೆಯ ಮೇಲ್ಛಾವಣಿಯ ಮೇಲ್ಭಾಗದಲ್ಲಿ ನೀರು ಒಳ ಬರಬಾರದು ಎಂದು ಟಾರ್ಪಲ್ ಮುಚ್ಚಿದ್ದಾರೆ. ಆ ಟಾರ್ಪಲ್ನಿಂದ ಈ ಶಾಲೆ ಇಂದಿಗೂ ಉಸಿರಾಡುತ್ತಿದೆ. ಶಾಲೆಯಲ್ಲಿ 1 ರಿಂದ 5ನೇ ತರಗತಿವರೆಗೆ 12ಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದಾರೆ. ಎಲ್ಲರೂ ಕೂಲಿ ಕಾರ್ಮಿಕರ ಮಕ್ಕಳು. ಅವರಲ್ಲಿ ಅಂದು ಪುನೀತ್ ಜೊತೆ ಶಾಲೆಯಲ್ಲಿ ಕೂತು ಪಾಠ ಕೇಳಿದವರ ಮೊಮ್ಮಕ್ಕಳು ಇದ್ದಾರೆ. ಶೂನ್ಯ ದಾಖಲಾತಿಯಿಂದ ಈ ಶಾಲೆ ಎರಡು ವರ್ಷಗಳ ಕಾಲ ಬೀಗ ಕೂಡ ಹಾಕಲಾಗಿತ್ತು. ಆದರೆ, ಸ್ಥಳಿಯರು ಹಾಗೂ ಶಾಲಾ ಆಡಳಿತ ಮಂಡಳಿಯವರು ಪುನೀತ್ ರಾಜ್ಕುಮಾರ್ ಓದಿದ ಶಾಲೆ. ರಾಷ್ಟ್ರ ಪ್ರಶಸ್ತಿ ವಿಜೇತದ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಶಾಲೆ ಎಂದು ಪುನೀತ್ ರಾಜ್ಕುಮಾರ್ ನೆನಪಿಗಾಗಿ 12 ಜನ ಮಕ್ಕಳನ್ನ ಸೇರಿಸಿ ಶಾಲೆಗೆ ಮರುಜೀವ ನೀಡಿ ಪುನೀತ್ ಭಾವಚಿತ್ರವನ್ನು ಶಾಲೆಯಲ್ಲಿ ಇಟ್ಟಿದ್ದಾರೆ.

55

ಮಲೆನಾಡಿನಲ್ಲಿ ಮಳೆಯಿಂದ 409 ಅಂಗನವಾಡಿ ಕಟ್ಟಡ , 204 ಸರ್ಕಾರಿ ಶಾಲೆ ಕಟ್ಟಡ ,24 ಕಾಲೇಜ್ ಕಟ್ಟಡಗಳಿಗೆ ಹಾನಿ ಆಗಿದೆ.ಹಾನಿಗೆ ಒಳಾಗಿರುವ ಶಾಲೆಗಳಲ್ಲಿ ಈ ಶಾಲೆಯೂ ಒಂದಾಗಿದ್ದು  ಮಳೆಯಿಂದ ಶಾಲೆಯ ಮಾಲಿಗೆ ಸೋರುತ್ತಿದೆ. ಹಾಗಾಗಿ, ಸ್ಥಳಿಯರು ಸರ್ಕಾರ ಹಾಗೂ ಅಧಿಕಾರಿಗಳಿಗೆ ಈ ಶಾಲೆಯನ್ನ ಉಳಿಸಿ ಕೊಡುವಂತೆ ಮನವಿ ಮಾಡುತ್ತಿದ್ದಾರೆ. ಇದು ಎಲ್ಲಾ ಸರ್ಕಾರಿ ಶಾಲೆಯಂತಲ್ಲ. ಹಳ್ಳಿಗರ ಜೊತೆ ಭಾವನಾತ್ಮಕ ಸಂಬಂಧ ಹೊಂದಿರುವ ಶಾಲೆ. ಪುನೀತ್ ರಾಜ್ಕುಮಾರ್ ನೆನಪಿನ ಶಾಲೆ. ಹಾಗಾಗಿ, ಸರ್ಕಾರ ಈ ಶಾಲೆಗೆ ಇರುವ ಸಮಸ್ಯೆ ಮೇಲ್ಛಾವಣಿ ಸಮಸ್ಯೆ ಜೊತೆ ಶೌಚಾಲಯದ ಸಮಸ್ಯೆಯನ್ನ ನೀಗಿಸಿ ಶಾಲೆಯನ್ನ ಉಳಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ.
 

About the Author

SN
Suvarna News
ಚಿಕ್ಕಮಗಳೂರು
ಪುನೀತ್ ರಾಜ್‌ಕುಮಾರ್

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved