MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • State
  • ಚಿಕ್ಕಮಗಳೂರಲ್ಲಿ ಮತ್ತೊಬ್ಬ ಕೇರಳ ಬಾಲಕಿ ನಾಪತ್ತೆಯಾಗಿ 2ನೇ ದಿನ: ಸಚಿವ ಈಶ್ವರ ಖಂಡ್ರೆ ಖಡಕ್ ಆದೇಶ! ಏನಿದೆ ಇದರಲ್ಲಿ?

ಚಿಕ್ಕಮಗಳೂರಲ್ಲಿ ಮತ್ತೊಬ್ಬ ಕೇರಳ ಬಾಲಕಿ ನಾಪತ್ತೆಯಾಗಿ 2ನೇ ದಿನ: ಸಚಿವ ಈಶ್ವರ ಖಂಡ್ರೆ ಖಡಕ್ ಆದೇಶ! ಏನಿದೆ ಇದರಲ್ಲಿ?

ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಪ್ರವಾಸಕ್ಕೆ ಬಂದಿದ್ದ ಕೇರಳದ ಬಾಲಕಿ ಶ್ರೀನಂದಾ, ರೀಲ್ಸ್ ಮಾಡಿದ ಕೆಲವೇ ಕ್ಷಣಗಳಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದಾಳೆ. ಬಾಲಕಿಯ ಪತ್ತೆಗೆ ಅರಣ್ಯ ಸಚಿವರು ಆಧುನಿಕ ತಂತ್ರಜ್ಞಾನ ಬಳಸಿ ಪೊಲೀಸರು ಮತ್ತು ಅರಣ್ಯ ಇಲಾಖೆ ತೀವ್ರ ಶೋಧ ನಡೆಸಲು ಆದೇಶಿಸಿದ್ದಾರೆ.

2 Min read
Author : Sathish Kumar KH
Published : Apr 08 2026, 09:37 PM IST
Share this Photo Gallery
  • FB
  • TW
  • Linkdin
  • Whatsapp
16
ಕೇರಳದ ಮತ್ತೊಬ್ಬ ಹುಡುಗಿಯನ್ನ ಸೀರಿಯಸ್ ಆಗಿ ಹುಡುಕಿ
Image Credit : Asianet News

ಕೇರಳದ ಮತ್ತೊಬ್ಬ ಹುಡುಗಿಯನ್ನ ಸೀರಿಯಸ್ ಆಗಿ ಹುಡುಕಿ

ಚಿಕ್ಕಮಗಳೂರು: ಕಾಫಿನಾಡಿನ ಪ್ರಸಿದ್ಧ ಪ್ರವಾಸಿ ತಾಣ ಚಂದ್ರದ್ರೋಣ ಪರ್ವತ ಶ್ರೇಣಿಯ ಮುಳ್ಳಯ್ಯನಗಿರಿ ಮತ್ತು ದತ್ತಪೀಠದ ನಡುವೆ ಕೇರಳ ಮೂಲದ ಬಾಲಕಿ ಶ್ರೀನಂದಾ (15) ನಾಪತ್ತೆಯಾಗಿರುವ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ. ಬಾಲಕಿಯ ಪತ್ತೆಗಾಗಿ ಅರಣ್ಯ ಇಲಾಖೆ ಸಂಪೂರ್ಣ ಸಹಕಾರ ನೀಡಬೇಕು ಮತ್ತು ಆಧುನಿಕ ತಂತ್ರಜ್ಞಾನ ಬಳಸಬೇಕು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.

26
ಸಚಿವ ಈಶ್ವರ ಖಂಡ್ರೆ ಮಹತ್ವದ ಆದೇಶ:
Image Credit : Asianet News

ಸಚಿವ ಈಶ್ವರ ಖಂಡ್ರೆ ಮಹತ್ವದ ಆದೇಶ:

ಬಾಲಕಿ ನಾಪತ್ತೆಯಾದ ಪ್ರದೇಶವು ತಾಂತ್ರಿಕವಾಗಿ ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರದಿದ್ದರೂ, ಮಾನವೀಯ ದೃಷ್ಟಿಯಿಂದ ಮತ್ತು ಆ ಪ್ರದೇಶದ ಭೌಗೋಳಿಕ ಪರಿಸ್ಥಿತಿಯನ್ನು ಅರಿತು ಅರಣ್ಯ ಇಲಾಖೆ ಶೋಧ ಕಾರ್ಯದಲ್ಲಿ ಭಾಗಿಯಾಗಬೇಕು ಎಂದು ಸಚಿವರು ಸೂಚಿಸಿದ್ದಾರೆ.

Related Articles

Related image1
ಶರಣ್ಯ ಬಳಿಕ ಕೇರಳದ ಮತ್ತೊಬ್ಬ ಯುವತಿ ನಾಪತ್ತೆ; ಡ್ರೋನ್ ಕ್ಯಾಮೆರಾಗೂ ಕಾಣದ ಬಾಲಕಿ ಪತ್ತೆ ಕಾರ್ಯಾಚರಣೆ ವಿವರ ಇಲ್ಲಿದೆ
Related image2
ಮಡಿಕೇರಿ ಬೆನ್ನಲ್ಲೇ ಚಿಕ್ಕಮಗಳೂರು ಚಂದ್ರದ್ರೋಣ ಪರ್ವತದಲ್ಲಿ ಪ್ರವಾಸಿ ಯುವತಿ ನಾಪತ್ತೆ
36
ಆಧುನಿಕ ಉಪಕರಣಗಳನ್ನು ಬಳಸಿ
Image Credit : Asianet News

ಆಧುನಿಕ ಉಪಕರಣಗಳನ್ನು ಬಳಸಿ

‘ಚಂದ್ರದ್ರೋಣ ಪರ್ವತ ಪ್ರದೇಶವು ಬೆಟ್ಟ-ಗುಡ್ಡಗಳು, ಕಡಿದಾದ ಇಳಿಜಾರು ಮತ್ತು ದಟ್ಟ ಗಿಡಗಂಟೆಗಳಿಂದ ಕೂಡಿದೆ. ಇಂತಹ ಪ್ರದೇಶದಲ್ಲಿ ಕಾರ್ಯನಿರ್ವಹಿಸಲು ನುರಿತ ಅರಣ್ಯ ಸಿಬ್ಬಂದಿಯ ಅಗತ್ಯವಿದೆ. ಹೀಗಾಗಿ, ಥರ್ಮಲ್ ಡ್ರೋನ್ ಸೇರಿದಂತೆ ಆಧುನಿಕ ಉಪಕರಣಗಳನ್ನು ಬಳಸಿ ಜಿಲ್ಲಾಡಳಿತ ಮತ್ತು ಪೊಲೀಸರೊಂದಿಗೆ ಶೋಧ ಕಾರ್ಯ ನಡೆಸಬೇಕು’ ಎಂದು ಸಚಿವರು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

46
ರೀಲ್ಸ್ ಮಾಡಿದ ಕೆಲವೇ ಕ್ಷಣದಲ್ಲಿ ನಿಗೂಢ ನಾಪತ್ತೆ:
Image Credit : Asianet News

ರೀಲ್ಸ್ ಮಾಡಿದ ಕೆಲವೇ ಕ್ಷಣದಲ್ಲಿ ನಿಗೂಢ ನಾಪತ್ತೆ:

ಬಾಲಕಿ ಶ್ರೀನಂದಾ ನಾಪತ್ತೆಯಾಗುವ ಮೊದಲು ತನ್ನ ತಂದೆ ರಮೇಶ್ ಅವರ ಮೊಬೈಲ್‌ನಲ್ಲಿ ಅತ್ಯಂತ ಖುಷಿಯಿಂದ ಇದ್ದಳು ಎಂಬುದು ತಿಳಿದುಬಂದಿದೆ. ಮಾಣಿಕ್ಯಾಧಾರದ ವಿವಿಧ ಭಾಗಗಳಲ್ಲಿ ತನ್ನ ಸಂಬಂಧಿಕರೊಂದಿಗೆ ಸೇರಿ ಫೋಟೋಗಳನ್ನು ತೆಗೆಸಿಕೊಂಡಿದ್ದಳು ಮತ್ತು ಸೋಶಿಯಲ್ ಮೀಡಿಯಾಗಾಗಿ ರೀಲ್ಸ್‌ಗಳನ್ನು ಮಾಡಿಕೊಂಡಿದ್ದಳು. ಸಂಜೆ 5:30 ರಿಂದ 6:30 ರವರೆಗೆ ಕುಟುಂಬಸ್ಥರ ಜೊತೆಯೇ ಇದ್ದ ಬಾಲಕಿ, ಮಾಣಿಕ್ಯಾಧಾರದ ಮೆಟ್ಟಿಲುಗಳನ್ನು ಇಳಿಯುವಾಗ ಕ್ಷಣಾರ್ಧದಲ್ಲಿ ಕಣ್ಣರೆಯಾಗಿದ್ದಾಳೆ.

56
24 ಗಂಟೆ ಕಳೆದರೂ ಸಿಗದ ಸುಳಿವು
Image Credit : Asianet News

24 ಗಂಟೆ ಕಳೆದರೂ ಸಿಗದ ಸುಳಿವು

ಬಾಲಕಿ ನಾಪತ್ತೆಯಾಗಿ ಈಗ 24 ಗಂಟೆಗಳಿಗೂ ಹೆಚ್ಚು ಸಮಯ ಕಳೆದಿದೆ. ಸ್ಥಳೀಯ ಪೊಲೀಸರು, ಅರಣ್ಯ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳದವರು ನಿನ್ನೆಯಿಂದಲೂ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೆ, ಕಗ್ಗತ್ತಲು ಮತ್ತು ದಟ್ಟವಾದ ಮಂಜಿನ ಕಾರಣದಿಂದ ಶೋಧ ಕಾರ್ಯಕ್ಕೆ ಅಡಚಣೆಯಾಗಿತ್ತು. ಇಂದು ಮುಂಜಾನೆಯಿಂದ ಕಾರ್ಯಾಚರಣೆ ಚುರುಕುಗೊಂಡಿದ್ದು, ಅರಣ್ಯ ಇಲಾಖೆಯ ನುರಿತ ತಂಡಗಳು ಕಾಡಿನ ಪ್ರತಿ ಮೂಲೆಯಲ್ಲೂ ಹುಡುಕಾಟ ನಡೆಸುತ್ತಿವೆ.

66
ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು
Image Credit : Asianet News

ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು

ಕೇರಳದ ಪಾಲಕ್ಕಾಡ್ ಜಿಲ್ಲೆಯ ಈ ಕುಟುಂಬವು ರಜೆ ಕಳೆಯಲು ಚಿಕ್ಕಮಗಳೂರಿಗೆ ಬಂದಿತ್ತು. ಆದರೆ, ಈ ಪ್ರವಾಸ ಈಗ ದುರಂತವಾಗಿ ಪರಿಣಮಿಸಿದೆ. ಮಗಳು ನಾಪತ್ತೆಯಾದ ಹಿನ್ನೆಲೆಯಲ್ಲಿ ತಂದೆ ರಮೇಶ್ ಅವರು ಚಿಕ್ಕಮಗಳೂರು ನಗರದ ಗ್ರಾಮಾಂತರ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ. ಕಣ್ಣೆದುರೇ ಇದ್ದ ಮಗಳು ಇದ್ದಕ್ಕಿದ್ದಂತೆ ಮಾಯವಾಗಿರುವುದು ಕುಟುಂಬಸ್ಥರನ್ನು ಕಂಗಾಲಾಗಿಸಿದೆ. ಸದ್ಯ ಸಚಿವರ ಆದೇಶದ ಬೆನ್ನಲ್ಲೇ ಥರ್ಮಲ್ ಡ್ರೋನ್‌ಗಳನ್ನು ಬಳಸಲಾಗುತ್ತಿದ್ದು, ಕಾಡಿನ ಉಷ್ಣಾಂಶದ ಆಧಾರದ ಮೇಲೆ ಬಾಲಕಿ ಎಲ್ಲಿದ್ದಾಳೆ ಎಂಬುದನ್ನು ಪತ್ತೆ ಹಚ್ಚುವ ಪ್ರಯತ್ನ ನಡೆಯುತ್ತಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಕರ್ನಾಟಕ ಸುದ್ದಿ
ಚಿಕ್ಕಮಗಳೂರು
ಈಶ್ವರ ಖಂಡ್ರೆ
ಅರಣ್ಯ

Latest Videos
Recommended Stories
Recommended image1
ಮಧ್ಯಪ್ರಾಚ್ಯ ಯುದ್ಧದಿಂದ ಕರಾವಳಿ ಜಿಲ್ಲೆಯಲ್ಲಿ ಮದುವೆಗಳೇ ಕ್ಯಾನ್ಸಲ್‌! ವಿವಾಹ ನಿಶ್ಚಯ ಆದವರಿಗೆ ಆತಂಕ
Recommended image2
ಮನೆಯಲ್ಲಿ ಬ್ರಾಹ್ಮಣರನ್ನು ಇಟ್ಟುಕೊಂಡು ಅವರನ್ನೇ ಟೀಕಿಸ್ತೀರಾ?: ಮಲ್ಲಿಕಾರ್ಜುನ ಖರ್ಗೆಗೆ ಚಲವಾದಿ ನೇರ ಪ್ರಶ್ನೆ
Recommended image3
ಕರ್ನಾಟಕದಲ್ಲಿ ಅಂತರ್ಜಲ ಬಳಕೆ ಗಣನೀಯ ಇಳಿಕೆ, ಭೂಗರ್ಭದಲ್ಲಿ ಅಚ್ಚರಿಯ ತಿರುವು!
Related Stories
Recommended image1
ಶರಣ್ಯ ಬಳಿಕ ಕೇರಳದ ಮತ್ತೊಬ್ಬ ಯುವತಿ ನಾಪತ್ತೆ; ಡ್ರೋನ್ ಕ್ಯಾಮೆರಾಗೂ ಕಾಣದ ಬಾಲಕಿ ಪತ್ತೆ ಕಾರ್ಯಾಚರಣೆ ವಿವರ ಇಲ್ಲಿದೆ
Recommended image2
ಮಡಿಕೇರಿ ಬೆನ್ನಲ್ಲೇ ಚಿಕ್ಕಮಗಳೂರು ಚಂದ್ರದ್ರೋಣ ಪರ್ವತದಲ್ಲಿ ಪ್ರವಾಸಿ ಯುವತಿ ನಾಪತ್ತೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved