ಬೆಂಗಳೂರು ನಗರ ಮುಳುಗಿಸಿದ್ದೀರಿ, ನಿಮಗೆ ನಾಚಿಕೆ ಆಗುತ್ತಿಲ್ಲವೇ? ಬೆಂಗಳೂರಿಗರ ಆಕ್ರೋಶ!
ಬೆಂಗಳೂರು ಮತ್ತೆ ಪ್ರವಾಹದಿಂದ ತತ್ತರಿಸಿದೆ. ಆಡಳಿತ ವೈಫಲ್ಯ, ಭ್ರಷ್ಟಾಚಾರ, ಮತ್ತು ಮೂಲಸೌಕರ್ಯಗಳ ಕೊರತೆಯಿಂದಾಗಿ ನಗರ ಜಲಾವೃತವಾಗಿದೆ. ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಸಹನೆಯ ಕಟ್ಟೆಯೊಡೆದ ಬೆಂಗಳೂರು ನಿವಾಸಿಗನೊಬ್ಬನ ಮನದಾಳದ ಆಕ್ರೋಶದ ಮಾತುಗಳು...

ಪ್ರಿಯ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ನಗರ ಯೋಜಕರು (ಇನ್ನೂ ಯಾರಾದರೂ ಇದ್ದರೆ)
ಮತ್ತೊಂದು ವರ್ಷ, ಮತ್ತೊಂದು ಪ್ರವಾಹ. ಮತ್ತೊಂದು ಫೋಟೋ ಆಪ್. ಬೆಂಗಳೂರನ್ನು ತಮ್ಮ ವೈಯಕ್ತಿಕ ಹಿತಾಸಕ್ತಿಯ ಮಂಡಳಿಯಂತೆ ಪರಿಗಣಿಸುವ ನಾಯಕರಿಂದ ಮತ್ತೊಂದು ಸುತ್ತಿನ ಕರುಣಾಜನ ಕಥೆ, ಮೊಸಳೆ ಕಣ್ಣೀರು ಮತ್ತು ವಿಪತ್ತು ನಿರ್ವಹಣೆಗೆ ಭೇಟಿ. ಇದನ್ನು ಬಿಟ್ಟರೆ ನಿಮ್ಮಿಂದ ಏನಾದರೂ ನಿರೀಕ್ಷಿಸಬಹುದೇ?
ಕಳೆದ ಬಾರಿ ಬೆಂಗಳೂರು ಪ್ರವಾಹ ಬಂದಾಗ ಹೊಸ ಸರ್ಕಾರ, ಸಿದ್ಧತೆ ಮಾಡಿಕೊಂಡಿರಲಿಲ್ಲ, ನೀರಿಗೆ ಮುಳುಗುವುದು ಗೊತ್ತಿರಲಿಲ್ಲ. ಹೀಗೆ ನೋರೆಂಟು ನೆಪ ಹೇಳಿದ ಜನಪ್ರತಿನಿಧಿಗಳು, ಸರ್ಕಾರದ ಪ್ರತಿನಿಧಿಗಳು ಒಂದು ವರ್ಷವಾದರೂ ಏನು ಮಾಡುತ್ತಿದ್ದೀರಿ. ಇದೀಗ ಪುನಃ ಪ್ರವಾಹ ಬಂದಿದೆ. ಬೆಂಗಳೂರು ಜನರ ಬದುಕು ನೀರಿನಲ್ಲಿ ಮುಳುಗಿ ಹೋಗಿದೆ.
ಇದೀಗ ಬೆಂಗಳೂರಿಗೆ ಬಂದಿರುವುದು ನೀರಿ ಪ್ರವಾಗ ಮಾತ್ರವಲ್ಲ, ನಮ್ಮ ಗಂಟಲುಗಳನ್ನು ಉಸಿರುಗಟ್ಟಿಸುವ, ನಮ್ಮ ಮನೆಗಳಿಗೆ ನುಸುಳುವ ನಮ್ಮ ಜನರನ್ನು ಕೊಲ್ಲುವ ಆಡಳಿತ ವೈಫಲ್ಯದ ಸಾಮೂಹಿಕ ಹೊಲಸು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೀವು ಭಾರತದ ತಂತ್ರಜ್ಞಾನ ರಾಜಧಾನಿಯನ್ನು ಪ್ರವಾಹಪೀಡಿತ ಪ್ರದೇಶವನ್ನಾಗಿ ಪರಿವರ್ತಿಸಿದ್ದೀರಿ. ಶತಕೋಟಿ ಡಾಲರ್ ವ್ಯವಹಾರಗಳಿಗೆ ಶಕ್ತಿ ನೀಡುವ, ಸ್ಟಾರ್ಟ್‌ಅಪ್ ಮತ್ತು ಉದ್ಯಮಗಳಿಗೆ ಆಶ್ರಯ ನೀಡುವ ನಗರವು ಈಗ ವೆನಿಸ್‌ನಂತೆ ಕಾಣುತ್ತದೆ. ಇದೀಗ ನಗರದಲ್ಲಿ ಗುಂಡಿಗಳು, ತೇಲುವ ಕಸ, ಮುಳುಗಿರುವ ಬಸ್‌ಗಳು ಮತ್ತು ಕುಸಿಯುತ್ತಿರುವ ಗೋಡೆಗಳು ಕಾಣಿಸುತ್ತಿವೆ.
ಇಲ್ಲಿ ಜನರು ಸತ್ತರು, ಸಾವಿರಾರು ಜನರು ಮೊಣಕಾಲು ಆಳದ ನೀರಿನಲ್ಲಿ ಸಿಲುಕಿಕೊಂಡರು. ವೃದ್ಧ ನಿವಾಸಿಗಳನ್ನು ಟ್ರ್ಯಾಕ್ಟರ್‌ಗಳಲ್ಲಿ ಸ್ಥಳಾಂತರಿಸಲಾಯಿತು. ಬಿಎಂಟಿಸಿ ಪ್ರಯಾಣಿಕರು ಮುಳುಗುತ್ತಿರುವ ಬಸ್‌ಗಳಿಂದ ತಪ್ಪಿಸಿಕೊಳ್ಳಲು ಕಿಟಕಿಗಳಿಂದ ಜಿಗಿದು ಹೊರಬರಬೇಕಾಯಿತು. ಇದು ನಿಮ್ಮ ಭಾರತದ ‘ಸಿಲಿಕಾನ್ ವ್ಯಾಲಿ’ಯನ್ನು ಬ್ರ್ಯಾಂಡ್ ಬೆಂಗಳೂರು ಮಾಡುವ ದೂರದೃಷ್ಟಿಯೇ? ಎಂದು ಪ್ರಶ್ನೆ ಮಾಡಲಾಗುತ್ತಿದೆ?
ಭಾರೀ ಮಳೆ, ಹವಾಮಾನ ಬದಲಾವಣೆ ನೆಪ ಹೇಳಬೇಡಿ:
ಎಲ್ಲ ಜನಪ್ರತಿನಿಧಿಗಳು ನಿಮ್ಮ ಕುರಿತ ಸುದ್ದಿ ಪ್ರಕಟಣೆ ಮಾಡುವವರಿಂದ ಮೊಸಳೆ ಕಣ್ಣೀರಿನ ಹಾಗೂ ಜವಾಬ್ದಾರಿ ಹೊತ್ತಾಕುವ ಮಾತುಗಳನ್ನು ಹೇಳಬೇಡಿ. ನಾವು ಇದೆಲ್ಲವನ್ನೂ ಮೊದಲು ಕೇಳಿದ್ದೇವೆ. ಪ್ರತಿ ಬಾರಿ ಮಳೆ ಬಂದಾಗ, ನಗರವು ನೀರಿನ ಪ್ರವಾಹದಿಂದ ಮುಚ್ಚಲ್ಪಡುತ್ತದೆ. ಇದೆಲ್ಲಾ ಏಕೆ? ಏಕೆಂದರೆ ಚರಂಡಿಗಳು ಕಟ್ಟಿಕೊಂಡಿವೆ, ಕೆರೆಗಳು ಒತ್ತುವರಿಗೊಂಡಿವೆ. ರಸ್ತೆಗಳು ತಮಾಷೆ ಮಾಡುವಂತಾಗಿವೆ. ಅವುಗಳನ್ನು ಸರಿಪಡಿಸುವ ನಿಮ್ಮ ಇಚ್ಛಾಶಕ್ತಿ ಅಸ್ತಿತ್ವದಲ್ಲಿ ಇದೆಯೇ?
ನೀವು ರೂ. 20,000 ಕೋಟಿಗೂ ಅಧಿಕ ಹಣವನ್ನು ಮೂಲ ಸೌಕರ್ಯವನ್ನು ಅಭಿವೃದ್ಧಿ ಮಾಡಲು ಬಳಸಲಾಗಿದೆ. ಈವರೆಗೆ 197 ಕಿ.ಮೀ ಚರಂಡಿಗಳನ್ನು ನಿರ್ಮಿಸಲಾಗಿದೆ. ಆದರೂ, 2025 ರಲ್ಲಿ ನಾವು ಕಚೇರಿಗೆ ತಲುಪಲು ರಬ್ಬರ್ ದೋಣಿಗಳನ್ನು ಬಳಸಬೇಕಾಗುದೆ.
ಸಿಲ್ಕ್ ಬೋರ್ಡ್ ಪ್ರದೇಶ ನೀರಿನ ನರಕವಾಗಿ ಉಳಿದಿದೆ. ಕಬ್ಬನ್ ಪಾರ್ಕ್ ಸೇರಿ ನಗರದಲ್ಲಿ ಧರೆಗೆ ಬೀಳುತ್ತಿರುವ ಮರಗಳು ನಿಮ್ಮ ನಿರ್ಲಕ್ಷ್ಯದ ಕಥೆಗಳನ್ನು ಹೇಳುತ್ತವೆ. ಮಳೆಯಾದಾಗಲೆಲ್ಲಾ ಲೇಔಟ್‌ಗಳು ಪ್ರವಾಹಕ್ಕೆ ಒಳಗಾಗುತ್ತವೆ. ಇದು ನಿಮ್ಮ ಪರಂಪರೆಯೇ? ಇದಕ್ಕಾಗಿ ಕೋಟಿಗಳು ಖರ್ಚಾಗಿವೆಯೇ?
'ಮಳೆಯನ್ನು ಪ್ರಕೃತಿ ನಿಯಂತ್ರಿಸುತ್ತದೆ, ನಾವು ನಿಯಂತ್ರಿಸಬಹುದಾದವುಗಳನ್ನು ನಿಯಂತ್ರಿಸುತ್ತಿದ್ದೇವೆಯೇ? ಹಾಗಾದರೆ, ನೀವು ನಿಯಂತ್ರಿಸಬಹುದಾದ ಕಾರ್ಯಗಳಾದರೂ ಯಾವುವು? ಮಂತ್ರಿಗಳ ಟ್ವಿಟರ್ ಖಾತೆಯೇ? ಪತ್ರಿಕಾಗೋಷ್ಠಿಗಳೇ?
ನಿಮ್ಮಿಂದ ಸ್ಪಷ್ಟವಾಗಿ ಬಡಾವಣೆಗಳಿಗೆ ನುಗ್ಗುವ ನೀರು ನಿಲ್ಲಿಸಲಾಗುವುದಿಲ್ಲ, ವಿಪತ್ತು ನಿರ್ವಹಣೆಗೆ ನಿಮ್ಮ ಬಳಿ ಸಿದ್ಧತೆ ಇಲ್ಲ, ಈಗಲೂ ಸ್ಪಷ್ಟವಾದ ನಗರ ಯೋಜನೆ ಮಾಡುವುದಿಲ್ಲ. ಇವೆಲ್ಲವನ್ನೂ ಮಾಡುವವರು ಯಾರು? ಎಂದು ಪ್ರಶ್ನೆ ಮಾಡಿದ್ದಾರೆ.
ರಾಜ್ಯ ಸರ್ಕಾರ ಇದನ್ನು 'ದುಃಖದ ವಿಷಯ' ಎನ್ನುತ್ತದೆ.
ನಿಜವಾಗಿಯೂ ಇದು ದುಃಖದ ವಿಷಯವೇನಾ? ಒಬ್ಬ ಮಹಿಳೆ ಸಾವಿಗೆ ಸಿಲುಕಿದ್ದಾಳೆ. ಒಬ್ಬ ಅಪಾರ್ಟ್‌ಮೆಂಟ್ ಮಾಲೀಕ, ಒಬ್ಬ ಬಾಲಕ ಸಾವಿಗೀಡಾಗಿದ್ದಾರೆ. ಸಾವಿರಾರು ಜನರು ಸ್ಥಳಾಂತರಗೊಂಡಿದ್ದಾರೆ. ನಗರದ ಜನತೆ ಒಂದೆಡೆಯಿಂದ ಮತ್ತೊಂದು ಕಡೆಗೆ ಹೋಗಲು ಪರದಾಡುತ್ತಿದ್ದಾರೆ. ಕಷ್ಟಪಟ್ಟು ದುಡಿದು ನಿಮಗೆ ತೆರಿಗೆ ಕಟ್ಟಿದರೆ ನಮಗೆ ಸಿಗುವುದೆಲ್ಲಾ ದುಃಖವೇ? ನಿಮ್ಮಿಂದ ನಮಗೆ ಸಿಗಬೇಕಾಗಿರುವುದು ಕೇವಲ ಸಂತಾಪ ಅಲ್ಲ, ನಾವು ಕಟ್ಟಿದ ತೆರಿಗೆಗೆ ಹೊಣೆಗಾರಿಕೆ ಹೊತ್ತುಕೊಳ್ಳುವವರು ಬೇಕು. ಬೆಂಗಳೂರು ನಿಮ್ಮ ಹುಸಿ ಸಹಾನುಭೂತಿಯ ವೇದಿಕೆಯಲ್ಲ, ಇದು ಬೆಂಗಳೂರು, ಇದು ನಮ್ಮ ಮನೆ. ಇದನ್ನು ಉಳಿಸಿಕೊಡಿ...
ಯಾವಾಗಲೂ ತಪ್ಪು ಮಾಡುವ ಬಿಬಿಎಂಪಿ, ಬಿಡಿಎ, ಬಿಡಬ್ಲ್ಯೂಎಸ್‌ಎಸ್‌ಬಿ
ಸ್ಥಳೀಯವಾಗಿ ಮೂಲ ಸೌಕರ್ಯಗಳನ್ನು ಒದಗಿಸಲು ಸ್ಥಾಪಿಸಲಾದ ಸ್ಥಳೀಯ ಆಡಳಿತ ಮಂಡಳಿಗಳು, ಪ್ರಾಧಿಕಾರಗಳಾಗಿರುವ ಬಿಬಿಎಂಪಿ, ಬಿಡಿಎ, ಬಿಡಬ್ಲ್ಯೂಎಸ್‌ಎಸ್‌ಬಿ ನಿರಂತರವಾಗಿ ತಪ್ಪು ಮಾಡುವ ಮಂಡಳಿಗಳಾಗಿಯೇ ಉಳಿದುಕೊಂಡಿವೆ. ನೀವು ವರ್ಷಗಳ ಹಿಂದೆ ತಮಾಷೆಯಾಗಿ ಚರಂಡಿ ನೀರಿನಲ್ಲಿ ನಿಂತು ಎಲ್ಲವನ್ನೂ ಸರಿ ಮಾಡ್ತೇವೆ ಎಂದು ಹೇಳಿದ್ದು ಜೋಕ್ ಎಂಬಂತೆ ಕಾಣಿಸುತ್ತದೆ.
ನಗರದ ರಾಜಕಾಲುವೆ ಮತ್ತು ಚರಂಡಿಗಳನ್ನು ಹಲವು ಬಾರಿ ತೆರವುಗೊಳಿಸಲು ನಿಮಗೆ ಸೂಚಿಸಲಾಗಿದೆ. ಅವು ಇನ್ನೂ ಹೂಳಿನಿಂದ ಏಕೆ ತುಂಬಿವೆ? ಪ್ರತಿ ವರ್ಷ ಹೂಳೆತ್ತುವ ಕೆಲಸ ನೆಡೆಯುತ್ತಿದೆ ಮತ್ತು ಇನ್ನೂ ಏಕೆ ಮುಗಿದಿಲ್ಲ? ನಿಮಗೆ ಹೆಚ್ಚಿನ ಸಮಯ ಬೇಕಾಗಿಲ್ಲ. ನಿಮಗೆ ಸಾಮರ್ಥ್ಯ ಮತ್ತು ಬೆನ್ನೆಲುಬು ಬೇಕು.
ಇದು ಕೇವಲ ಪ್ರಕೃತಿಯ ವಿಕೋಪವಲ್ಲ, ಇದು ಮಾನವ ನಿರ್ಮಿತ ನರಕ:
ಬೆಂಗಳೂರು ಪ್ರವಾಹ ಸೃಷ್ಟಿಗೆ ಕೇವಲ ಪ್ರಕೃತಿ ವಿಕೋಪವಷ್ಟೇ ಕಾರಣವಲ್ಲ. ಇದಕ್ಕೆ ದಶಕಗಳ ಭ್ರಷ್ಟಾಚಾರ, ಹಣವನ್ನು ನುಂಗಿ ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಮುಚ್ಚಿಹಾಕುವಿಕೆ ಮತ್ತು ಕ್ರಿಮಿನಲ್ ಆರೋಪಿಗಳನ್ನು ಶಿಕ್ಷಿಸಲು ನಿರಾಸಕ್ತಿ ಇಂತಹ ಅನೇಕ ತಪ್ಪುಗಳ ಹನಿಗಳೆಲ್ಲವೂ ಸೇರಿ ಇದೀಗ ಬೆಂಗಳೂರು ನಗರದಲ್ಲಿ ಪ್ರವಾಹವಾಗಿ ಉಕ್ಕಿ ಹರಿಯುತ್ತಿದೆ. ಇದೀಗ ನಾವು ಮೌನವಾಗಿರುವುದನ್ನು ಮುಗಿಸಿದ್ದೇವೆ.
ನಾವು ಇದನ್ನು ಮುಗಿಸಿದ್ದೇವೆ!
ನಾವು ಕಸದ ದುರ್ವಾಸನೆ ಸಹಿಸಿಕೊಳ್ಳುವುದನ್ನು ಮುಗಿಸಿದ್ದೇವೆ.
ನಾವು ಏನೇ ನಡೆದರೂ ಅದಕ್ಕೆ ಹೊಂದಿಕೊಳ್ಳುವುದನ್ನು ಮುಗಿಸಿದ್ದೇವೆ.
ನೀವು ಫೋಟೋ ಶೋಅಪ್ ಮಾಡಿಕೊಂಡು ಭಾಷಣ ಮಾಡಿ ಹೋಗಲು ಹಾಗೂ ನಮ್ಮ ನಗರವು ಮುಳುಗಲು ಬಿಟ್ಟು ಸುಮ್ಮನೆ ಕೂರುವುದನ್ನು ಮುಗಿಸಿದ್ದೇವೆ.
ನಿಮ್ಮ ವಾಸ್ತವಿಕತೆಯ ಪರಿಶೀಲನೆ ಇಲ್ಲಿದೆ.
ಬೆಂಗಳೂರು ದಿನೇ ದಿನೇ ರಕ್ತಸ್ರಾವವಾಗುತ್ತಿದೆ. ಆಕಾಶದಿಂದ ಮಾತ್ರವಲ್ಲ, ನಿಮ್ಮ ದ್ರೋಹದಿಂದಲೂ ರಕ್ತ ಸುರಿಸುತ್ತಿದ್ದೇವೆ.
ಕೋಪದಿಂದ, ಬೇಸತ್ತ ಬೆಂಗಳೂರಿಗ...
(ನಿಮ್ಮ ವಿಫಲ ಆಡಳಿತದ ದುಷ್ಪರಿಣಾಮ ಎದುರಿಸಿದ ಲಕ್ಷಾಂತರ ಜನರಲ್ಲಿ ಒಬ್ಬರು)
ಇಲ್ಲಿ ಬರೆಯಲಾದ ಎಲ್ಲ ಅಂಶಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಗೊಂಡ ಆಕ್ರೋಶದ ಮಾತುಗಳ ಸರಮಾಲೆಯ ಜೋಡಣೆಯಾಗಿದೆ..