'ಕೊರೋನಾ ಕಷ್ಟ ಕಡಿಮೆ ಮಾಡುವ 22 ಉತ್ಪನ್ನ ಬಿಡುಗಡೆ'

First Published 10, Sep 2020, 7:56 AM

ಬೆಂಗಳೂರು(ಸೆ.10): ಮಾಹಾಮಾರಿ ಕೋವಿಡ್‌ ನಿಯಂತ್ರಣ ಮಾಡಲು ನೆರವಾಗುವ ಮತ್ತು ಸೋಂಕು ಸಂಕಷ್ಟದ ನಡುವೆಯೂ ಶಾಲಾ-ಕಾಲೇಜುಗಳನ್ನು ಆತಂಕ ಇಲ್ಲದೆ ಆರಂಭಿಸಲು ನೆರವಾಗುವ, ಜಿಯೋ-ಫೆನ್ಸಿಂಗ್‌ ಮೂಲಕ ಜನದಟ್ಟಣೆಯನ್ನು ನಿಯಂತ್ರಿಸಲು ಅನುಕೂಲವಾಗುವಂತಹ 22 ನವೀನ ಉತ್ಪನ್ನಗಳನ್ನು ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಲೋಕಾರ್ಪಣೆಗೊಳಿಸಿದ್ದಾರೆ.

ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಆವಿಷ್ಕಾರ ಮತ್ತು ತಂತ್ರಜ್ಞಾನ ಸಂಸ್ಥೆಯ ಆಶ್ರಯದಲ್ಲಿ ಬೆಂಗಳೂರು ಬಯೋ ಇನ್ನೋವೇಷನ್‌ ಸೆಂಟರ್‌ ಮೇಲ್ವಿಚಾರಣೆಯಡಿ 6 ಉತ್ಪನ್ನಗಳು ಅಭಿವೃದ್ಧಿಗೊಂಡಿದ್ದರೆ, ಕರ್ನಾಟಕ ನವೋದ್ಯಮ ಕೋಶದ ಮೇಲ್ವಿಚಾರಣೆಯಡಿ 16 ಉತ್ಪನ್ನಗಳನ್ನು ಅಭಿವೃದ್ಧಿಗೊಳಿಸಲಾಗಿದೆ.

ವಿಧಾನಸೌಧದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಉತ್ಪನ್ನಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ಐಟಿ-ಬಿಟಿ ಇಲಾಖೆಯ ನವೋದ್ಯಮಗಳು ಈ ಉತ್ಪನ್ನಗಳನ್ನು ಅಭಿವೃದ್ಧಿ ಪಡಿಸಿವೆ. ಕೆಲವು ಉತ್ಪನ್ನಗಳಿಗೆ ಐಸಿಎಂಆರ್‌ನ ಅಂಗೀಕಾರ ಲಭಿಸಿದೆ. ಕೊರೋನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಈ ಉತ್ಪನ್ನಗಳು ಮಹತ್ವದ ಪಾತ್ರವಹಿಸಲಿದೆ ಎಂದು ಹೇಳಿದರು.

ನ್ಯೂಕ್ಲಿಯೋಡಿಎಕ್ಸ್‌ ಆರ್‌ಟಿ ಎಂಬ ಉತ್ಪನ್ನ ಕೋವಿಡ್‌ ಸೋಂಕು ಪತ್ತೆಹಚ್ಚಲು ಆರ್‌ಟಿಪಿಸಿಆರ್‌ನಲ್ಲಿ ಬಳಸುವ ಆರ್‌ಎನ್‌ಎ ಐಸೋಲೇಷನ್‌ ವಿಧಾನವಾಗಿದೆ. ಈಗಾಗಲೇ ಚಾಲ್ತಿಯಲ್ಲಿರುವ ವಿಧಾನಗಳಿಗಿಂತ ಸರಳ ಮತ್ತು ಕಡಿಮೆ ವೆಚ್ಚದಾಯಕವಾಗಿದೆ. ಕೋವಿಡಿ-ಎಕ್ಸ್‌ ಎಂಪ್ಲೆಕ್ಸ್‌ 3ಆರ್‌ ಮತ್ತು 4ಆರ್‌ ತಂತ್ರಜ್ಞಾನದಡಿ ವಂಶವಾಹಿನಿಗಳನ್ನು ಬಳಸಿ ಕೋವಿಡ್‌ ವೈರಸ್‌ ಪತ್ತೆ ಹಚ್ಚಬಹುದಾಗಿದೆ. ಇನ್‌-ವಿಟ್ರೋ ಆರ್‌ಟಿಪಿಸಿಆರ್‌ ಪರೀಕ್ಷಾ ವಿಧಾನವನ್ನು ಸಂಪೂರ್ಣವಾಗಿ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದೆ. ಐಸಿಎಂಆರ್‌ ಈ ತಂತ್ರಜ್ಞಾನಕ್ಕೆ ಅನುಮೋದನೆ ನೀಡಿದೆ ಎಂದು ತಿಳಿಸಿದರು.

ಕ್ವೋಂಚ್‌ ಉಪಕರಣವು ಸ್ಮಾರ್ಟ್‌ ಐಡಿ ಕಾರ್ಡ್‌ ಹೋಲ್ಡರ್‌ ಹೊಂದಿದ ಐಒಟಿ ಪ್ಲಾಟ್‌ಫಾರ್ಮ್‌ ಆಗಿದೆ. ವ್ಯಾಪಾರೋದ್ದಿಮೆಗಳು, ಶಾಲಾ-ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ಹೆಚ್ಚಿನ ವಿಶ್ವಾಸದೊಂದಿಗೆ ಪುನಃ ಆರಂಭಿಸಲು ಇದು ಸಹಕಾರಿಯಾಗಲಿದೆ. ಇದರಡಿ, ಜಿಯೋ-ಫೆನ್ಸಿಂಗ್‌ ಮೂಲಕ ಜನದಟ್ಟಣೆಯನ್ನು ನಿಯಂತ್ರಿಸಬಹುದಾಗಿದೆ. ಎಎಂಪಿವರ್ಕ್ ಪ್ಲ್ಯಾಟ್‌ಫಾರ್ಮ್‌ ಉತ್ಪನ್ನವು ಸರ್ಕಾರಕ್ಕೆ ಪ್ರಸ್ತುತ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು, ಮೇಲ್ವಿಚಾರಣೆ ಮಾಡಲು ಮತ್ತು ಅವಲೋಕಿಸುವ ನಿಟ್ಟಿನಲ್ಲಿ ವ್ಯಾಪಾರೋದ್ದಿಮೆಗಳು, ಆಡಳಿತ ವರ್ಗ, ಜನರು ಮತ್ತು ಆರೋಗ್ಯ ಸೇವಾ ವಲಯದಲ್ಲಿರವವರು ಒಟ್ಟಿಗೆ ಸೇರಿ ಕೆಲಸ ಮಾಡಲು ಅನುವು ಮಾಡಿಕೊಡಲಿದೆ.

ಎಸ್‌ಎಎಫ್‌ಎಇ ಬಯೋಸೆಕ್ಯೂರಿಟಿ ಸೊಲ್ಯೂಷನ್ಸ್‌, ಯುವಿಇಇ ಬೀಮರ್‌, ಯುವಿಇಇ ಕನ್ವೇಯರ್‌, ರಸ್ಟಿರ್‌ ಏಯ್ಡ್‌, ಇಎಂವಿಲಿಯೋ, ಪಿಕ್ಸುಯೇಟ್‌, ಥರ್ಮಾಕ್ಸಿ, ಹೈಲೋಬಿಜ್‌, ವ್ಯಾಪ್‌ಕೇರ್‌, ಟಚ್‌ ಲೆಸ್‌ ಐಡಿ, ಸ್ಟ್ಯಾಸಿಸ್‌, ಸೆನ್ಸ್‌ಗಿಜ್‌, ಡೋಜೀ, ನ್ಯೂಬ್‌ ವೆಲ್‌ ನೆಟ್‌ವರ್ಕ್ ಫಂಕ್ಷನ್‌ ಗೇಟ್‌ ವೇ ಸೇರಿದಂತೆ ಇತರೆ ಉತ್ಪನ್ನಗಳನ್ನು ಲೋಕಾರ್ಪಣೆಗೊಳಿಸಲಾಯಿತು.

loader