ಕೈಕೊಟ್ಟ ಅದೃಷ್ಟ: IPL ನಲ್ಲಿ ಅಬ್ಬರಿಸಿದ ಈ ಐವರಿಗೆ ವಿಶ್ವಕಪ್ ನಲ್ಲಿ ಸ್ಥಾನವಿಲ್ಲ!

First Published 5, May 2019, 4:28 PM

ಇಂಡಿಯನ್ ಪ್ರೀಮಿಯರ್ ಲೀಗ್ ನ 12ನೇ ಸೀಜನ್ ಅಂತಿಮ ಘಟಕ್ಕೆ ತಲುಪಿದೆ. IPLನ ಪೈನಲ್ ಪಂದ್ಯ ಮೇ 12ರಂದು ನಡೆಯಲಿದೆ. ಇದಾದ ಬಳಿಕ ಎಲ್ಲರ ಚಿತ್ತ ಮೇ 30ರಿಂದ ಇಂಗ್ಲೆಂಡ್ನ ಮೇಜ್ಬಾನಿಯಲ್ಲಿ ನಡೆಯಲಿರುವ ವಿಶ್ವಕಪ್ 2019ರ ಕಡೆ ಹೊರಳಲಿದೆ. ಹಲವಾರು ಕ್ರಿಕೆಟಿಗರು ಮುಂಬರುವ ವಿಶ್ವ ಕಪ್ ಪಂದ್ಯದ ತಯಾರಿ ನಡೆಸಲು IPL ಬಿಟ್ಟು ಸ್ವದೇಶಕ್ಕೆ ಮರಳಿದ್ದಾರೆ. ಆದರೆ ಐಪಿಎಲ್ ಪಂದ್ಯದಲ್ಲಿ ಅಬ್ಬರಿಸಿ ತಮ್ಮ ಆಟದಿಂದ ಎಲ್ಲರ ಮನಗೆದ್ದ ಐವರು ಆಟಗಾರರಿಗೆ ಮಾತ್ರ ವಿಶ್ವಕಪ್ ನಲ್ಲಿ ಆಟವಾಡುವ ಅವಕಾಶ ಲಭಿಸಿಲ್ಲ. ಯಾರು ಈ ಐವರು ಆಟಗಾರರು? ಇಲ್ಲಿದೆ ವಿವರ

ಕ್ರಿಸ್ ಮಾರಿಸ್: 2019ರ IPLನಲ್ಲಿ ದೆಹಲಿ ಕ್ಯಾಪಿಟಲ್ಸ್ ಪರವಾಗಿ ಆಡುತ್ತಿರುವ ಅವರು ಅಭಿಮಾನಿಗಳ ಫೆವರಿಟ್. ತಮ್ಮ ರೋಚಕ ಆಟದಿಂದಲೇ ಎಲ್ಲರ ಮನ ಗೆದ್ದಿದ್ದಾರೆ. ಆದರೆ ದ. ಆಫ್ರಿಕಾ ತಂಡದ ಈ ಆಟಗಾರನಿಗೆ ಈ ಬಾರಿಯ ವಿಶ್ವಕಪ್ ನಲ್ಲಿ ಸ್ಥಾನ ಸಿಕ್ಕಿಲ್ಲ.

ಜೋಫ್ರಾ ಆರ್ಚರ್: IPLನ 12ನೇ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ತಂದಲ್ಲಿ ಆಡುತ್ತಿರುವ ವೇಗಿ ಬೌಲರ್ ಹಾಗೂ ಆಲ್ರೌಂಡರ್ ಆರ್ಚರ್ ತಮ್ಮ ಬೌಲಿಂಗ್ ಹಾಗೂ ಬ್ಯಾಟಿಂಗ್ ನಿಂದ ಅಭಿಮಾನಿಗಳ ಮನ ಕದ್ದಿದ್ದಾರೆ. ಆದರೆ ಇಂಗ್ಲೆಂಡ್ ತಂಡದ ಈ ಆಟಗಾರ ವಿಶ್ವಕಪ್ ಪಂದ್ಯದಲ್ಲಿ ಆಡುವ ಆರಂಭಿಕ 15 ಮಂದಿಯ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.

ರಿಷಬ್ ಪಂತ್: ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್ ಮನ್ ಆಗಿರುವ ಪಂತ್ ವಿಶ್ವಕಪ್ ನ 15 ಸದಸ್ಯರ ಪಟ್ಟಿಯಲ್ಲಿ ಸ್ಥಾನ ಪಡೆಯುವ ಸಮೀಪದಲ್ಲಿದ್ದರು. ದುರಾದೃಷ್ಟವಶಾತ್ BCCI ಕಳಪೆ ವಿಕೆಟ್ ಕೀಪಿಂಗ್ ನೆಪ ನೀಡಿ ಅವರನ್ನು ಆಯ್ಕೆ ಮಾಡಿಲ್ಲ. ಆದರೀಗ IPL 12ನೇ ಸೀಜನ್ ನಲ್ಲಿ ದೆಹಲಿ ಕ್ಯಾಪಿಟಲ್ಸ್ ಪರ ಆಡುತ್ತಿರುವ 21 ವರ್ಷದ ಪಂತ್ 13 ಪಂದ್ಯಗಳಲ್ಲಿ 348 ರನ್ ಗಳಿಸಿದ್ದಾರೆ. ಸಾಲದೆಂಬಂತೆ ಅದ್ಭುತ ವಿಕೆಟ್ ಕೀಪಿಂಗ್ ಮಾಡಿದ್ದಾರೆ.

ಅಂಬಾಟಿ ರಾಯುಡು: ರಿಷಬ್ ರಂತೆ ರಾಯುಡು ಕೂಡಾ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಅತ್ಯಂತ ಸಮೀಪದಲ್ಲಿದ್ದರು. ಆದರೆ ಈ ಹಿಂದೆ ನಡೆದಿದ್ದ ಪಂದ್ಯಗಳಲ್ಲಿ ನೀಡಿದ ಕಳಪೆ ಪ್ರದರ್ಶನ ಅಡ್ಡಗಾಲಾಯಿತು. IPL ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿರುವ ರಾಯುಡು 13 ಪಂದ್ಯಗಳಲ್ಲಿ 218 ರನ್ ಗಳಿಸಿದ್ದಾರೆ.

ಎಬಿ ಡಿವಿಲಿಯರ್ಸ್: ದ. ಆಫ್ರಿಕಾದ ಸ್ಟಾರ್ ಕ್ರಿಕೆಟರ್ ಎಬಿಡಿ IPL 12 ನೇ ಸೀಜನ್ ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ ಹಾಗೂ 12 ಪಂದ್ಯಗಳಲ್ಲಿ 441 ರನ್ ಗಳಿಸಿದ್ದಾರೆ. ಇವರು ಅಂತರಾಷ್ಟ್ರೀಯ ಕ್ರಿಕೆಟ್ ಗೆ ಮತ್ತೆ ಮರಳುತ್ತಾರೆ ಎಂಬ ಭರವಸೆ ಅಭಿಮಾನಿಗಳಿಗಿತ್ತು. ಆದರೆ ತಮ್ಮ ನಿರ್ಧಾರಕ್ಕೆ ಅಂಟಿಕೊಂಡಿರುವ ಎಬಿಡಿ ವಿಶ್ವಕಪ್ ನಲ್ಲಿ ಆಡಲು ನಿರಾಕರಿಸಿದ್ದಾರೆ. ಹೀಗಾಗಿ ಅವರ ಅಬ್ಬರ ವಿಶ್ವಕಪ್ ನಲ್ಲಿ ನೋಡಲು ಸಿಗುವುದಿಲ್ಲ ಎಂಬುವುದು ನಿಶ್ಚಿತ.

loader