KPL ಕ್ರಿಕೆಟ್: ನೆರೆ ಸಂತ್ರಸ್ತರಿಗೆ ಬೆಳಕಾದ ಬೆಳಗಾವಿ ಪ್ಯಾಂಥರ್ಸ್!
ಕರ್ನಾಟಕ ಪ್ರಿಮಿಯರ್ ಲೀಗ್ ಟೂರ್ನಿ ಈ ಬಾರಿ ಹಲವು ಸಾಮಾಜಿಕ ಕಾರ್ಯಗಳಿಗೆ ಕೈಜೋಡಿಸಿದೆ. ಕಾವೇರಿ ಕೂಗು ಅಭಿಯಾನದ ಮೂಲಕ ಕಾವೇರಿ ನದಿ ಪುನಶ್ಚೇತನ ಹಾಗೂ ಪ್ರವಾಹದಲ್ಲಿ ಕೊಚ್ಚಿ ಹೋದ ಜನರ ಬದುಕನ್ನು ಮತ್ತೆ ಕಟ್ಟಿ ಕೊಡಲು ಮುಂದಾಗಿದೆ. ಫ್ರಾಂಚೈಸಿ ಕೂಡ ತಮ್ಮದೇ ಆದ ರೀತಿಯಲ್ಲಿ ನೆರ ಸಂತ್ರಸ್ತರಿಗೆ ನೆರವು ನೀಡುತ್ತಿದೆ. ಈ ಬಾರಿ ರಣಭೀಕರ ಮಳೆಗೆ ಬೆಳಗಾವಿ ತತ್ತರಿಸಿದೆ. ಪ್ರವಾಹದಲ್ಲಿ ಬೆಳಗಾವಿ ಜನತೆ ಮನೆಗಳು ಕೊಚ್ಚಿ ಹೋಗಿವೆ. ಇದೀಗ KPL ಟೂರ್ನಿಯ ಬೆಳಗಾವಿ ಪ್ಯಾಂಥರ್ಸ್ ತಂಡ ನೆರ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ಪೂರೈಸೋ ಮೂಲಕ ನೆರವು ನೀಡಿದೆ.
ಬೆಳಗಾವಿ ನೆರೆ ಸಂತ್ರಸ್ತರ ನೆರವಿಗೆ ಧಾವಿಸಿದ ಬೆಳಗಾವಿ ಪ್ಯಾಂಥರ್ಸ್ ಫ್ರಾಂಚೈಸಿ
ಗೋಕಾಕ್ ಜಿಲ್ಲೆಯ 300 ಕುಟುಂಬಗಳಿಗೆ ನೆರವು ನೀಡಿದ ಕೆಪಿಎಲ್ ತಂಡ
ಅಕ್ಕಿ, ಆಹಾರ ವಸ್ತುಗಳು, ಹೊದಿಕೆ, ದೈನಂದಿನ ಬಳಕೆ ವಸ್ತುಗಳನ್ನು ಪ್ಯಾಂಥರ್ಸ್ ನೀಡಿದೆ
ಬೆಳಗಾವಿ ಬಹುತೇಕ ನೀರಿನಲ್ಲಿ ಮುಳುಗಡೆಯಾಗಿದ್ದು, ಜನರ ನೆರವಿಗೆ ಬೆಳಗಾವಿ ತಂಡ ಧಾವಿಸಿದೆ
8ನೇ ಆವೃತ್ತಿಯಲ್ಲಿ ಬೆಳಗಾವಿ ಪ್ಯಾಂಥರ್ಸ್ ಆಡಿದ 3ರಲ್ಲೂ ಸೋಲು ಅನುಭವಿಸೋ ಮೂಲಕ ನಿರಾಸೆ ಅನುಭವಿಸಿದೆ
ಬೆಳಗಾವಿ ಫ್ರಾಂಚೈಸಿ ಮಾಲೀಕ ಹಾಗೂ ಕ್ರಿಕೆಟಿಗರು ಸೇರಿ ಅಗತ್ಯ ವಸ್ತುಗಳನ್ನು ಕಳುಹಿಸಿಕೊಟ್ಟರು
ಆಹಾರ ವಸ್ತುಗಳ ಜೊತೆಗೆ ಬೆಳಗಾವಿ ಪ್ಯಾಂಥರ್ಸ್ ತಂಡದ ಜರ್ಸಿಯನ್ನು ನೀಡಲಾಗಿದೆ