ವಿಶ್ವ ಎಡಚರ ದಿನ: ಇಲ್ಲಿದೆ ನೋಡಿ ವಿಶ್ವಶ್ರೇಷ್ಠ ಎಡಗೈ ಕ್ರಿಕೆಟ್ ಟೀಂ...!

First Published 13, Aug 2019, 8:11 PM

ಆಗಸ್ಟ್ 13ನ್ನು ಅಂತಾರಾಷ್ಟ್ರೀಯ ಎಡಚರ[ಎಡಗೈ ಹೆಚ್ಚಾಗಿ ಬಳಸುವವರ] ದಿನವನ್ನಾಗಿ ಅಚರಿಸಲಾಗುತ್ತದೆ. ಬಳಗೈ ಬಳಕೆದಾರರ ಪ್ರಾಬಲ್ಯದ ನಡುವೆ ಎಡಗೈ ಬಳಕೆದಾರರ ಅನುಕೂಲಗಳು ಹಾಗೂ ಅನಾನುಕೂಲಗಳ ಬಗ್ಗೆ ಜಾಗೃತಿ ಮೂಡಿಸಲು 1976ರಿಂದ ಡೀನ್ R. ಕ್ಯಾಂಬೆಲ್ ಅಂತಾರಾಷ್ಟ್ರೀಯ ಎಡಗೈ ಬಳಕೆದಾರರ ದಿನವನ್ನು ಆರಂಭಿಸಿದರು. 
ಕ್ರಿಕೆಟ್ ಜಗತ್ತಿನಲ್ಲಿ ಹಲವಾರು ಎಡಗೈ ಕ್ರಿಕೆಟಿಗರು ಅಮೋಘ ಪ್ರದರ್ಶನದ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ವಿಭಾಗದಲ್ಲಿ ಎಡಗೈ ಕ್ರಿಕೆಟಿಗರು ತಮ್ಮ ಹೆಜ್ಜೆ ಗುರುತು ದಾಖಲಿಸಿದ್ದಾರೆ. ಈ ಸಂದರ್ಭದಲ್ಲಿ ಸುವರ್ಣ ನ್ಯೂಸ್.ಕಾಂ ವಿಶ್ವ ಕ್ರಿಕೆಟ್’ನ ಶ್ರೇಷ್ಠ ಎಡಗೈ ಕ್ರಿಕೆಟಿಗರ ತಂಡವನ್ನು ಆಯ್ಕೆ ಮಾಡಿದೆ. 

1. ಸೌರವ್ ಗಂಗೂಲಿ: ಭಾರತ

1. ಸೌರವ್ ಗಂಗೂಲಿ: ಭಾರತ

’ಗಾಡ್ ಆಫ್ ಆಫ್ ಸೈಡ್’ ಖ್ಯಾತಿಯ ಸೌರವ್ ಗಂಗೂಲಿ ಟೀಂ ಇಂಡಿಯಾದ ಯಶಸ್ವಿ ಆರಂಭಿಕರಾಗಿ ಮಿಂಚಿದ್ದರು. ವಿಶಿಷ್ಠ ರೀತಿಯಲ್ಲಿ ಮುನ್ನುಗ್ಗಿ ಸಿಕ್ಸರ್ ಬಾರಿಸುತ್ತಿದ್ದ ದಾದಾ, ನಾಯಕತ್ವದಲ್ಲೂ ಸೈ ಎನಿಸಿದ್ದರು.

2.ಆ್ಯಡಂ ಗಿಲ್‌ಕ್ರಿಸ್ಟ್: ಆಸ್ಟ್ರೇಲಿಯಾ

2.ಆ್ಯಡಂ ಗಿಲ್‌ಕ್ರಿಸ್ಟ್: ಆಸ್ಟ್ರೇಲಿಯಾ

ಏಕದಿನ ಕ್ರಿಕೆಟ್‌ನಲ್ಲಿ ವಿಕೆಟ್ ಕೀಪರ್ ಕೂಡಾ ಆರಂಭಿಕನಾಗಿ ಕಣಕ್ಕಿಳಿದು ತಂಡ ಗೆಲ್ಲಿಸಿಕೊಡಬಲ್ಲ ಇನಿಂಗ್ಸ್ ಕಟ್ಟಬಹುದು ಎಂದು ತೋರಿಸಿ ಕೊಟ್ಟಿದ್ದು ಆ್ಯಡಂ ಗಿಲ್‌ಕ್ರಿಸ್ಟ್. ಸ್ಫೋಟಕ ಬ್ಯಾಟಿಂಗ್ ಮೂಲಕ ಏಕದಿನ ಕ್ರಿಕೆಟ್’ಗೆ ಹೊಸ ದಿಕ್ಕು ನೀಡಿದ ಗಿಲ್ಲಿ, ಕೀಪಿಂಗ್‌ನಲ್ಲೂ ಚಾಂಪಿಯನ್ ಎನ್ನುವುದನ್ನು ಸಾಬೀತು ಮಾಡಿದ್ದರು.

3. ಬ್ರಿಯಾನ್ ಲಾರಾ: ವೆಸ್ಟ್ ಇಂಡೀಸ್

3. ಬ್ರಿಯಾನ್ ಲಾರಾ: ವೆಸ್ಟ್ ಇಂಡೀಸ್

ಕಲಾತ್ಮಕ ಹೊಡೆತಗಳ ಸರದಾರ ಬ್ರಿಯಾನ್ ಲಾರಾ ಬ್ಯಾಟಿಂಗ್ ನೋಡುವುದೇ ಕಣ್ಣಿಗೆ ಹಬ್ಬ. ಸ್ಪಿನ್ ದಿಗ್ಗಜರಾದ ವಾರ್ನ್, ಮುತ್ತಯ್ಯ ಅವರಿಗೂ ಮುಟ್ಟಿ ನೋಡಿಕೊಳ್ಳುವಂತಹ ಬೌಂಡರಿ ಬಾರಿಸುವಲ್ಲಿ ನಿಸ್ಸೀಮ. ಟೆಸ್ಟ್ ಕ್ರಿಕೆಟ್’ನಲ್ಲಿ 400* ರನ್ ಬಾರಿಸಿದ್ದು, ಇಂದಿಗೂ ಮುರಿಯಲಾಗದ ದಾಖಲೆಯಾಗಿಯೇ ಉಳಿದಿದೆ.

4. ಅಲನ್ ಬಾರ್ಡರ್: ಆಸ್ಟ್ರೇಲಿಯಾ

4. ಅಲನ್ ಬಾರ್ಡರ್: ಆಸ್ಟ್ರೇಲಿಯಾ

ಆಸ್ಟ್ರೇಲಿಯಾ ಕ್ರಿಕೆಟ್’ನ ಸವ್ಯಸಾಚಿ ಬ್ಯಾಟ್ಸ್‌ಮನ್ ಅಲನ್ ಬಾರ್ಡರ್ ಕಾಂಗರೂ ನಾಡಿಗೆ ಚೊಚ್ಚಲ ವಿಶ್ವಕಪ್ ಗೆದ್ದುಕೊಟ್ಟ ನಾಯಕ. ಸತತ 153 ಟೆಸ್ಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಪರ ಕಣಕ್ಕಿಳಿಯುವ ಮೂಲಕ ವಿಶ್ವದಾಖಲೆ ಬರೆದಿದ್ದರು.

5.ಅಲಿಸ್ಟರ್ ಕುಕ್: ಇಂಗ್ಲೆಂಡ್

5.ಅಲಿಸ್ಟರ್ ಕುಕ್: ಇಂಗ್ಲೆಂಡ್

ಅಲಿಸ್ಟರ್ ಕುಕ್ ಇಂಗ್ಲೆಂಡ್ ಕ್ರಿಕೆಟ್ ಕಂಡ ಶ್ರೇಷ್ಠ ಬ್ಯಾಟ್ಸ್‌ಮನ್’ಗಳಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ಭಾರತ ವಿರುದ್ಧ ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿ, ಭಾರತದ ವಿರುದ್ಧ ಅಂತಿಮ ಟೆಸ್ಟ್ ಪಂದ್ಯವನ್ನಾಡಿದ್ದರು. ಮೊದಲ ಹಾಗೂ ಕೊನೆಯ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಕುಕ್ ಸ್ಮರಣೀಯವಾಗಿಸಿಕೊಂಡಿದ್ದರು. ಇದರ ಜತೆಗೆ ಇಂಗ್ಲೆಂಡ್ ಪರ ಗರಿಷ್ಠ ರನ್ ಬಾರಿಸಿದ ಆಟಗಾರ ಕೂಡಾ ಹೌದು.

6. ಕುಮಾರ ಸಂಗಕ್ಕರ: ಶ್ರೀಲಂಕಾ

6. ಕುಮಾರ ಸಂಗಕ್ಕರ: ಶ್ರೀಲಂಕಾ

ಶ್ರೀಲಂಕಾದ ದಿಗ್ಗಜ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕುಮಾರ ಸಂಗಕ್ಕರ ಆಧುನಿಕ ಕ್ರಿಕೆಟ್’ನ ಶ್ರೇಷ್ಠ ಎಡಗೈ ಬ್ಯಾಟ್ಸ್‌ಮನ್ ಎಂದರೆ ಅತಿಶಯೋಕ್ತಿಯಾಗಲಾರದು. ಅದರಲ್ಲೂ 2015ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸತತ 4 ಶತಕ ಸಿಡಿಸಿ ವಿಶ್ವದಾಖಲೆ ಬರೆದಿದ್ದಾರೆ.

7. ಸನತ್ ಜಯಸೂರ್ಯ: ಶ್ರೀಲಂಕಾ

7. ಸನತ್ ಜಯಸೂರ್ಯ: ಶ್ರೀಲಂಕಾ

ಶ್ರೀಲಂಕಾದ ಮತ್ತೋರ್ವ ದಿಗ್ಗಜ ಎಡಗೈ ಬ್ಯಾಟ್ಸ್‌ಮನ್ ಎಂದರೆ ಅದು ಸನತ್ ಜಯಸೂರ್ಯ. ಆರಂಭಿಕ ಬ್ಯಾಟ್ಸ್‌ಮನ್ ಆಗಿ ಕಣಕ್ಕಿಳಿಯುತ್ತಿದ್ದ ಸನತ್, ಎದುರಾಳಿ ಬೌಲರ್’ಗಳ ಮಾರಣ ಹೋಮ ಮಾಡುತ್ತಿದ್ದರು.  ಏಕದಿನ ಕ್ರಿಕೆಟ್’ನಲ್ಲಿ 13 ಸಾವಿರಕ್ಕೂ ಅಧಿಕ ರನ್ ಹಾಗೂ 320ಕ್ಕೂ ಅಧಿಕ ವಿಕೆಟ್ ಕಬಳಿಸಿದ್ದ ಜಯಸೂರ್ಯ, 1996ರ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

8. ರಂಗನಾ ಹೆರಾತ್: ಶ್ರೀಲಂಕಾ

8. ರಂಗನಾ ಹೆರಾತ್: ಶ್ರೀಲಂಕಾ

ಮುತ್ತಯ್ಯ ಮುರುಳೀಧರನ್ ನೆರಳಿನಲ್ಲೇ ಬೆಳೆದ ರಂಗನಾ ಹೆರಾತ್, ಮುರುಳಿ ವಿದಾಯದ ನಂತರ ಲಂಕಾ ತಂಡದ ಆಧಾರ ಸ್ತಂಭವಾಗಿ ಬೆಳೆದು ನಿಂತರು. ಟೆಸ್ಟ್ ಕ್ರಿಕೆಟ್’ನಲ್ಲಿ[433] ಅತಿ ಹೆಚ್ಚು ವಿಕೆಟ್ ಕಬಳಿಸಿದ ಎಡಗೈ ಸ್ಪಿನ್ನರ್ ಎನ್ನುವ ವಿಶ್ವದಾಖಲೆ ಹೆರಾತ್ ಹೆಸರಿನಲ್ಲಿದೆ.

9. ಜಹೀರ್ ಖಾನ್: ಭಾರತ

9. ಜಹೀರ್ ಖಾನ್: ಭಾರತ

ಎಡಗೈ ಬ್ಯಾಟ್ಸ್‌ಮನ್’ಗಳ ಪಾಲಿಗೆ ದುಸ್ವಪ್ನವಾಗಿ ಕಾಡುತ್ತಿದ್ದ ಜಹೀರ್ ಖಾನ್ ಟೀಂ ಇಂಡಿಯಾ ಕ್ರಿಕೆಟ್ ಜಗತ್ತಿಗೆ ಪರಿಚಯಿಸಿದ ಶ್ರೇಷ್ಠ ಎಡಗೈ ವೇಗದ ಬೌಲರ್’ಗಳಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ಮುತ್ತಯ್ಯ[325] ಬಳಿಕ ಅತಿಹೆಚ್ಚು ಬಾರಿ ಎಡಗೈ ಬ್ಯಾಟ್ಸ್‌ಮನ್ ಬಲಿ ಪಡೆದ ಏಷ್ಯಾದ[237] ಎರಡನೇ ಹಾಗೂ ಒಟ್ಟಾರೆ ಮೂರನೇ ಬೌಲರ್ ಎನ್ನುವ ಕೀರ್ತಿ ಜಹೀರ್‌ಗೆ ಸಲ್ಲುತ್ತದೆ.

10. ವಾಸೀಂ ಅಕ್ರಂ: ಪಾಕಿಸ್ತಾನ

10. ವಾಸೀಂ ಅಕ್ರಂ: ಪಾಕಿಸ್ತಾನ

ಸ್ವಿಂಗ್ ಕಿಂಗ್ ಖ್ಯಾತಿಯ ವಾಸೀಂ ಅಕ್ರಂ ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ಎಡಗೈ ಬೌಲರ್’ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. 90ರ ದಶಕದಲ್ಲಿ ಎದುರಾಳಿ ಬ್ಯಾಟ್ಸ್‌ಮನ್’ಗಳ ನಿದ್ದೆಗೆಡಿಸುತ್ತಿದ್ದ ಅಕ್ರಂ, ಟೆಸ್ಟ್ ಕ್ರಿಕೆಟ್’ನಲ್ಲಿ 400 ವಿಕೆಟ್ ಕಬಳಿಸಿದ ಮೊದಲ ಎಡಗೈ ವೇಗಿ ಕೂಡಾ ಹೌದು. ಇದರ ಜತೆಗೆ  ಏಕದಿನ ಕ್ರಿಕೆಟ್’ನಲ್ಲಿ 500+ ವಿಕೆಟ್ ಕಬಳಿಸಿದ ಏಕೈಕ ವೇಗದ ಬೌಲರ್ ಎನ್ನುವ ದಾಖಲೆ ಅಕ್ರಂ ಹೆಸರಿನಲ್ಲಿ ಉಳಿದಿದೆ.

11. ಟ್ರೆಂಟ್ ಬೌಲ್ಟ್: ನ್ಯೂಜಿಲೆಂಡ್

11. ಟ್ರೆಂಟ್ ಬೌಲ್ಟ್: ನ್ಯೂಜಿಲೆಂಡ್

ತಮ್ಮ ಕರಾರುವಕ್ಕಾದ ಯಾರ್ಕರ್ ಹಾಗೂ ವೇಗದ ದಾಳಿಗೆ ಹೆಸರಾಗಿರುವ ಟ್ರೆಂಟ್ ಬೌಲ್ಟ್ ನ್ಯೂಜಿಲೆಂಡ್ ಜಗತ್ತಿಗೆ ಪರಿಚಯಿಸಿದ ಶ್ರೇಷ್ಠ ಎಡಗೈ ವೇಗಿಗಳಲ್ಲಿ ಒಬ್ಬರು. ನ್ಯೂಜಿಲೆಂಡ್ ತಂಡ 2015 ಹಾಗೂ 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಲು ಟ್ರೆಂಟ್ ಕೊಡುಗೆ ಮರೆಯುವಂತಿಲ್ಲ.

12. ಶಕೀಬ್ ಅಲ್ ಹಸನ್: ಬಾಂಗ್ಲಾದೇಶ

12. ಶಕೀಬ್ ಅಲ್ ಹಸನ್: ಬಾಂಗ್ಲಾದೇಶ

ವಿಶ್ವ ಕ್ರಿಕೆಟ್ ಬಾಂಗ್ಲಾದೇಶದತ್ತ ಹುಬ್ಬೇರಿಸಿ ನೋಡುವಂತೆ ಮಾಡುವಲ್ಲಿ ಶಕೀಬ್ ಅಲ್ ಹಸನ್ ಪ್ರದರ್ಶನ ಮರೆಯುವಂತಿಲ್ಲ. 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 606 ರನ್ ಹಾಗೂ 11 ವಿಕೆಟ್ ಕಬಳಿಸುವ ಮೂಲಕ ಕೆಚ್ಚೆದೆಯ ಹೋರಾಟ ತೋರಿದ್ದರು. ಅಲ್ಲದೇ ಬಾಂಗ್ಲಾದೇಶ ಪರ  ಗರಿಷ್ಠ ರನ್ ಹಾಗೂ ಗರಿಷ್ಠ ವಿಕೆಟ್ ಕಬಳಿಸಿದ ದಾಖಲೆ ಶಕೀಬ್ ಹೆಸರಿನಲ್ಲಿದೆ.  ಇದರ ಜತೆಗೆ ಮ್ಯಾಥ್ಯೂ ಹೇಡನ್, ಸಯೀದ್ ಅನ್ವರ್, ಗ್ರೇಮ್ ಸ್ಮಿತ್, ಯುವರಾಜ್ ಸಿಂಗ್, ಡೇವಿಡ್ ವಾರ್ನರ್ ಕೂಡಾ ಶ್ರೇಷ್ಠ ಎಡಗೈ ಬ್ಯಾಟ್ಸ್’ಮನ್ ಎನಿಸಿಕೊಂಡಿದ್ದಾರೆ.

loader