ಕೆಲವೇ ದಿನದಲ್ಲಿ ನಡೆಯಲಿದೆ ಕೌತುಕ, ಆಗಸದಲ್ಲಿ ಗೋಚರಿಸಲಿದ್ದಾನೆ ಜ್ಯೂನಿಯರ್ ಚಂದ್ರ!
ಇನ್ನೇನು ಕೆಲವೇ ದಿನಗಳಲ್ಲಿ ಆಕಾಶದಲ್ಲಿ ಅಪರೂಪದ ಒಂದು ಘಟನೆ ನಡೆಯಲಿದೆ. ಒಂದು ಸಣ್ಣ ಕ್ಷುದ್ರಗ್ರಹವು 'ಕಿರಿಯ ಚಂದ್ರ'ನಂತೆ ಭೂಮಿಯನ್ನು ಸುತ್ತುತ್ತದೆ. ಸೆಪ್ಟೆಂಬರ್ ನಿಂದ ನವೆಂಬರ್ ವರೆಗೆ ಈ ಕಿರಿಯ ಚಂದ್ರನು ಆಕಾಶದಲ್ಲಿ ಗೋಚರಿಸಲಿದ್ದಾನೆ.
ಸಣ್ಣ ಚಂದ್ರ
ಬಾಹ್ಯಾಕಾಶದ ಕೌತುಕ ಬಗೆದಷ್ಟು ವಿಶಾಲ. ಪ್ರತಿ ದಿನ ಒಂದಲ್ಲು ಒಂದು ಘಟನೆಗಳು ಆಗಸದಲ್ಲಿ ಘಟಿಸುತ್ತದೆ. ಪ್ರತಿ ಕೌತುಕವನ್ನು ವಿಜ್ಞಾನಿಗಳು ಅಧ್ಯಯನ ಮಾಡುತ್ತಾರೆ. ಇದೀಗ ಅಪರೂಪದ ಕೌತುಕವೊಂದು ಆಗಸದಲ್ಲಿ ಘಟಿಸಲಿದೆ. ಭೂಮಿಯ ದೊಡ್ಡ ಚಂದ್ರನ ಜೊತೆಗೆ ಮತ್ತೊಂದು ಸಣ್ಣ ಚಂದ್ರನನ್ನು ಪಡೆಯಲಿದೆ. ಇನ್ನೇನು ಕೆಲವೇ ದಿನಗಳಲ್ಲಿ ಒಂದು ಸಣ್ಣ ಚಂದ್ರನನ್ನು ಭೂಮಿಯಿಂದ ನೋಡಬಹುದು.
ಅಪರೂಪದ ಘಟನೆಗೆ ಸಾಕ್ಷಿ
ವಿಶ್ವಕ್ಕೆ ಒಂದು ಅಪರೂಪದ ಘಟನೆಗೆ ಸಾಕ್ಷಿಯಾಗಲಿದೆ. ಏಕೆಂದರೆ ಒಂದು ಕ್ಷುದ್ರಗ್ರಹವನ್ನು 'ಕಿರಿಯ ಚಂದ್ರ'ನಂತೆ ನೋಡಬಹುದು. ಇದು ಗಾತ್ರದಲ್ಲಿ ಸಣ್ಣದು. ಆದರೆ ಭೂಮಿಯ ಸುತ್ತ ಈ ಕಿರಿಯ ಚಂದ್ರ ಸುತ್ತಲಿದ್ದಾನೆ. ಬರೋಬ್ಬರಿ 2 ತಿಂಗಳ ಕಾಲ ಈ ಕೌತುಕ ಗೋಚರವಾಗಲಿದೆ. ಇದರ ಗಾತ್ರ 10 ಡಯಾಮೀಟರ್ ಅಂದರೆ ಸರಿಸುಮಾರು 33 ಅಡಿ.
ಎರಡು ತಿಂಗಳು
ಸತತ ಎರಡು ತಿಂಗಳು ಈ ಕ್ಷುದ್ರಗ್ರಹವು ಭೂಮಿಯನ್ನು ಸುತ್ತುತ್ತದೆ. ಸೆಪ್ಟೆಂಬರ್ 29ರಂದು ಈ ಅಪರೂಪದ ವಿಸ್ಮಯ ಮೊದಲ ಬಾರಿಗೆ ಆಗಸದಲ್ಲಿ ಗೋಚರವಾಗಲಿದೆ. ಸೆಪ್ಟೆಂಬರ್ 29 ರಿಂದ ನವೆಂಬರ್ 14ರ ವರೆಗೆ ಈ ಕೌತುಕ ಕಾಣಲಿದೆ. ಒಟ್ಟು 56 ದಿನಗಳ ಕಾಲ ಆಗಸದಲ್ಲಿ ಕಿರಿಯ ಚಂದ್ರ ಅಂದರೆ ಸಣ್ಣ ಕ್ಷುದ್ರಗ್ರಹ ಭೂಮಿಯನ್ನು ಸುತ್ತಲಿದೆ.
ಸುತ್ತುವ ಸಮಯ
ಈ ಸೆಪ್ಟೆಂಬರ್ ತಿಂಗಳಿನಿಂದಲೇ ಈ ವಿಶೇಷ ಖಗೋಳ ಘಟನೆಯನ್ನು ನೋಡಬಹುದು. ಈ 2024 PT5 ಕ್ಷುದ್ರ ಗ್ರಹವನ್ನು ಮ್ಯಾಡ್ರಿಡ್‌ನ ಕಂಪ್ಲುಟೆನ್ಸಿ ವಿಶ್ವವಿದ್ಯಾಲಯದ ಸಂಶೋಧ ವಿಜ್ಞಾನಿಗಳಾದ ಕಾರ್ಲೋಸ್ ಡೇ ಲಾ ಫ್ಯುಯೆಂಟೆ ಮಾರ್ಕೋಸ್ ಹಾಗೂ ರೌಲ್ ಡೇ ಲಾ ಫ್ಯುಯೆಂಟ್ ಮಾರ್ಕೋಸ್ ಆಗಸ್ಟ್ 7 ರಂದು ಪತ್ತೆ ಹಚ್ಚಿದ್ದಾರೆ.
'ಕಿರಿಯ ಚಂದ್ರ'ನ ಪರಿಚಯ
ಕ್ಷುದ್ರಗ್ರಹ 2024 PT5. ಆಗಸ್ಟ್ 7 ರಂದು ಕ್ಷುದ್ರಗ್ರಹ ಟೆರೆಸ್ಟ್ರಿಯಲ್-ಇಂಪ್ಯಾಕ್ಟ್ ಲಾಸ್ಟ್ ಅಲರ್ಟ್ ಸಿಸ್ಟಮ್ (ATLAS) ಮೂಲಕ NASA ಈ ಮಾಹಿತಿ ನೀಡಿದೆ. ಈ ಕುರುತಿ ಅಮೆರಿಕನ್ ಆ್ಯಸ್ಟ್ರೊನಾಮಿಕಲ್ ಸೊಸೆಟಿ ಅಧ್ಯಯನ ಕುತೂಹಲಕರ ಮಾಹಿತಿ ತೆರೆದಿಡುತ್ತಿದೆ. 56 ದಿನಗಳ ಅವಧಿಯಲ್ಲಿ ಈ ಕಿರಿಯ ಚಂದ್ರ ಭೂಮಿ ಸುತ್ತ ಸುತ್ತಲಿದೆ. ಆದರೆ ಕಕ್ಷೆಯನ್ನು ಪೂರ್ಣಗೊಳಿಸುವುದಿಲ್ಲ.
ಕ್ಷುದ್ರಗ್ರಹದ ಗಾತ್ರ
ಭೂಮಿಯ ಸುತ್ತ 56 ದಿನಗಳ ಎರಡು ಚಂದ್ರ ಗೋಚರಿಸಲಿದ್ದಾರೆ. ಒಂದು ಪ್ರತಿ ದಿನ ನಮಗೆ ಕಾಣಿಸುವ ಚಂದ್ರಿರ. ಮತ್ತೊಂದು ಕಿರಿಯ ಚಂದ್ರ. ಹಾಗಂತ ಇದು ಯಾವುದೇ ಗ್ರಹದ ತುಣುಕಲ್ಲ. ಕಕ್ಷೆಯಲ್ಲಿ ಸುತ್ತುತ್ತಿರುವ ಭೂಮಿಗೆ ಹತ್ತಿರವಾಗಿರುವ ಕ್ಷುದ್ರ ಗ್ರಹ ಎಂದು ವಿಜ್ಞಾನಿಗಳು ಹೇಳಿದ್ದಾರೆ. 2024 PT5 ಸಂಪೂರ್ಣ ಕಕ್ಷೆಯನ್ನು ಸುತ್ತುವುದಿಲ್ಲ. ಬದಲಾಗಿ ಅದು ಭೂಮಿಯ ಗುರುತ್ವಾಕರ್ಷಣೆಯಿಂದ ದೂರ ಸರಿಯುತ್ತದೆ. ಆದರೆ ಅದಕ್ಕೂ ಮೊದಲು ಕುದುರೆಯ ಲಾಳದಂತಹ ಒಂದು ಕುಣಿಕೆಯನ್ನು ಸೃಷ್ಟಿಸುತ್ತದೆ.
ಕಕ್ಷೆ
ಕಾರ್ಲೋಸ್ ಡಿ ಲಾ ಫ್ಯೂಯೆಂಟೆ ಮಾರ್ಕೋಸ್ ಮತ್ತು ರೌಲ್ ಡಿ ಲಾ ಫ್ಯೂಯೆಂಟೆ ಮಾರ್ಕೋಸ್ ಬರೆದ RNAAS ವರದಿಯಲ್ಲಿ ಭೂಮಿಯು ಕ್ಷುದ್ರಗ್ರಹಗಳನ್ನು ಹಿಡಿದಿಟ್ಟುಕೊಳ್ಳುವ ಮತ್ತು ಅವುಗಳನ್ನು ತನ್ನ ಕಕ್ಷೆಗೆ ಎಳೆದುಕೊಳ್ಳುವ ಗುಣ ಹೊಂದಿದೆ ಎಂದು ಹೇಳಲಾಗಿದೆ. ಈ ಕ್ಷುದ್ರಗ್ರಹಗಳು ಕೆಲವೊಮ್ಮೆ ನಮ್ಮ ಗ್ರಹದ ಸುತ್ತ ಒಂದು ಅಥವಾ ಹೆಚ್ಚಿನ ಸಂಪೂರ್ಣ ಸುತ್ತುಗಳನ್ನು ಪೂರ್ಣಗೊಳಿಸುತ್ತವೆ, ಆದರೆ ಇತರ ಸಮಯಗಳಲ್ಲಿ, ಅವು ಒಂದು ಕಕ್ಷೆಯನ್ನು ಪೂರ್ಣಗೊಳಿಸುವ ಮೊದಲೇ ಭೂಮಿಯ ದೀರ್ಘವೃತ್ತದ ಹಾದಿಯಿಂದ ದೂರ ಸರಿದು ಹೋಗುತ್ತವೆ.
ಕ್ಷುದ್ರಗ್ರಹಗಳ ಕಾರ್ಯ
ವರದಿಯಲ್ಲಿ 2024 PT5 ಒಂದು ಸ್ವಾಭಾವಿಕ ಕ್ಷುದ್ರಗ್ರಹವಾಗಿದ್ದು, ಇದು ಕಡಿಮೆ ಅವಧಿಗೆ ಮಾತ್ರ ಭೂಮಿ ಮತ್ತು ಚಂದ್ರನ ಕಕ್ಷೆಯಲ್ಲಿ ಉಳಿಯುತ್ತದೆ ಎಂದು ಹೇಳಲಾಗಿದೆ.