80ರ ದಶಕದಲ್ಲೇ ಬಿಕಿನಿ ತೊಟ್ಟು ಬೋಲ್ಡ್ ಪೋಸ್ ನೀಡಿದ್ರು ಅಣ್ಣಾವ್ರ ಸಿನಿಮಾ ನಾಯಕಿ
ಚಂದನವನದಲ್ಲಿ 80 ರ ದಶಕದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿ, ಸ್ಟಾರ್ ನಟಿ ಎನಿಸಿಕೊಂಡಿದ್ದ ನಟಿ ಮಾಧವಿ ಅವರು ಆ ಕಾಲದಲ್ಲೇ ಬಿಕಿನಿ ಧರಿಸಿ, ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದರು. ಆ ಫೋಟೋಗಳು ಇದೀಗ ವೈರಲ್ ಆಗುತ್ತಿವೆ.
ಹಾಲು ಜೇನು ಒಂದಾದ ಹಾಗೆ ನನ್ನ ನಿನ್ನ ಜೀವನ ಹಾಡು ನೆನಪಿದೆ ಅಲ್ವಾ? ಡಾ. ರಾಜ್ ಕುಮಾರ್ (Dr Rajkumar) ಅವರ ಹಾಲು ಜೇನು ಸಿನಿಮಾದಲ್ಲಿ ಅಣ್ಣಾವ್ರಿಗೆ ನಾಯಕಿಯಾಗಿದ್ದ ಮಾಧವಿ ಕೂಡ ನೆನಪಿರಲೇಬೇಕು. ಸದ್ಯ ಇವರು ಸಿನಿಮಾದಿಂದ ದೂರ ಉಳಿದಿದ್ದಾರೆ ನಿಜ. ಆದರೆ ಇವರ ಹಳೆಯ ಫೋಟೋವೊಂದು ಇದೀಗ ವೈರಲ್ ಆಗುತ್ತಿವೆ.
ಕನ್ನಡ, ತಮಿಳು, ತೆಲುಗು ಮತ್ತು ಬಾಲಿವುಡ್ ನಲ್ಲೂ ಮಿಂಚಿದ 80ರ ದಶಕದ ಬಟ್ಟಲು ಕಂಗಳ ಚೆಲುವೆ ಮಾಧವಿಯವರ (Madhavi) ಬಿಕಿನಿ ಫೋಟೋಗಳು ಇದೀಗ ವೈರಲ್ ಆಗುತ್ತಿವೆ. ಸಿನಿಮಾಗಳಲ್ಲಿ ಹೆಚ್ಚಾಗಿ ಸೀರೆಯಲ್ಲೇ ಕಾಣಿಸಿಕೊಂಡು. ಜನಮನ ಗೆದ್ದಿದ್ದ ಈ ಚೆಲುವೆ ಬಿಕಿನಿ ಹಾಕಿದ್ದು, ಯಾವಾಗ ಅಂತ ನೀವು ಕೇಳಬಹುದು? 80-90ರ ದಶಕದ ಫೋಟೋ ಇದಾಗಿದ್ದು, ಫೋಟೋ ನೋಡಿ ಜನ ಶಾಕ್ ಆಗಿದ್ದಾರೆ.
ಕಮಲ್ ಹಾಸನ್ (Kamal Hasan) ಜೊತೆಗಿನ ಫೋಟೋ ಇದಾಗಿದೆ. ಈ ಫೋಟೋ ತಮಿಳಿನಲ್ಲಿ 1981ರಲ್ಲಿ ಬಿಡುಗಡೆಯಾದ 'ಟಿಕ್ ಟಿಕ್ ಟಿಕ್' ಎಂಬ ಸಿನಿಮಾ ಶೂಟಿಂಗ್ ವೇಳೆಯಲ್ಲಿ ಕ್ಲಿಕ್ ಮಾಡಿದ್ದು ಎನ್ನಲಾಗಿದೆ. ಒಂದು ಫೊಟೋದಲ್ಲಿ ಕಮಲ್ ಹಾಸನ್ ಕುಳಿತುಕೊಂಡಿದ್ದರೆ, ನಟಿಯರಾದ ಸ್ವಪ್ನಾ, ರಾಧಾ, ಮಾಧವಿ ಬಿಕಿನಿಯಲ್ಲಿ ನಿಂತು ಪೋಸ್ ಕೊಟ್ಟಿರುವುದನ್ನು ನೋಡಬಹುದು.
ಇದಲ್ಲದೇ ಕಮಲ್ ಹಾಸನ್ ಜೊತೆಯಾಗಿ ನಿಂತಿರುವ ಫೋಟೋಗಳು ಸಹ ಇವೆ. ಅಷ್ಟೇ ಅಲ್ಲದೇ ಮಾಧವಿಯವರ ಸಿಂಗಲ್ ಫೋಟೋಗಳು ಸಹ ಇದ್ದು, ನಟಿ ತುಂಬಾನೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ತಿಳಿ ನೀಲಿ ಬಣ್ಣದ ಬಿಕಿನಿಯಲ್ಲಿ, ಮಾಧವಿ ತಮ್ಮ ಮಾದಕ ಮೈಮಾಟ ಪ್ರದರ್ಶಿಸಿದ್ದು, ಸ್ವಿಮ್ಮಿಂಗ್ ಪೂಲ್ ಎದುರು ನಿಂತಿರೋ ಫೋಟೋ ನೋಡಿದ್ರೆ ಆ ಕಾಲದಲ್ಲೇ ಇಷ್ಟೊಂದು ಬೋಲ್ಡ್ ನೆಸ್ ಎಂದು ಜನ ಶಾಕ್ ಆಗ್ತಿದ್ದಾರೆ.
ಈಗಿನ ಸಮಯದಲ್ಲಿ ಹೀರೋಯಿನ್ಸ್ ತುಂಡು ಬಟ್ಟೆ, ಬಿಕಿನಿಯಲ್ಲಿ (bikini) ಕಾಣಿಸಿಕೊಳ್ಳೋದು ದೊಡ್ಡ ವಿಷಯವೇನಲ್ಲ, ಆದರೆ 80ರ ದಶಕ ಅಂದ್ರೆ ನಟಿಯರು ಮೈಪೂರ್ತಿ ಬಟ್ಟೆ ಹಾಕಿ ಓಡಾಡುತ್ತಿದ್ದ ಸಮಯ ಅದು, ಆವಾಗ್ಲೇ ಇಷ್ಟೊಂದು ಬೋಲ್ಡ್ ಆಗಿ, ಬಿಕಿನಿ ಧರಿಸಿರುವ ಮಾಧವಿಯವರ ಮೈಮಾಟ ನೋಡಿದ್ರೆ, ನಮ್ಮ ಕನ್ನಡ ಸಿನಿಮಾಗಳಲ್ಲಿ ನಟಿಸಿದ ಮಾಧವಿಯೇ ಎಂದು ಅಚ್ಚರಿಯಾಗಬಹುದು.
ತಮ್ಮ 13ನೇ ವಯಸ್ಸಿಗೆ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ ಮಾಧವಿ, 20 ವರ್ಷಗಳ ಕಾಲ ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ, ಬೆಂಗಾಲಿ, ಒಡಿಯಾ ಸೇರಿ 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು. ಚಂದನವನದಲ್ಲಿ ಹಾಲು-ಜೇನು, ಕೈದಿ, ಭಾಗ್ಯ ಲಕ್ಷ್ಮೀ ಬಾರಮ್ಮ, ಜೀವನ ಚೈತ್ರ, ಆಕಸ್ಮಿಕದಂತಹ ಹಲವು ಬ್ಲಾಕ್ ಬಸ್ಟರ್ (Blockbuster) ಸಿನಿಮಾದಲ್ಲಿ ಇವರು ನಟಿಸಿದ್ದರು.
1976ರಿಂದ 1996ರವರೆಗೆ ಭಾರತೀಯ ಸಿನಿಮಾ ರಂಗದಲ್ಲಿ ಮಿಂಚಿದ ಮಾಧವಿ, 1996 ರಲ್ಲಿ ಉದ್ಯಮಿ ರಾಲ್ಫ್ ಶರ್ಮಾ (Rolf Sharma) ಅವರನ್ನು ವಿವಾಹವಾದರು. ಮದುವೆಯಾದ ನಂತರ ಸಿನಿಮಾದಿಂದ ದೂರವೇ ಉಳಿದಿರುವ ಮಾಧವಿ ಪತಿಯೊಂದಿಗೆ ಅಮೆರಿಕದ ನ್ಯೂಜೆರ್ಸಿಯಲ್ಲಿ ನೆಲೆಸಿದ್ದಾರೆ. ಇವರಿಗೆ ಮೂರು ಜನ ಹೆಣ್ಣುಮಕ್ಕಳಿದ್ದಾರೆ.