ರೆಡ್ ಡ್ರೆಸ್ನಲ್ಲಿ ಹಾಟ್ ಲುಕ್ ಕೊಟ್ಟ ಸಂಗೀತಾ ಭಟ್: ಹೊಕ್ಕುಳದ ಮೇಲೆನೇ ನೆಟ್ಟಿಗರ ಕಣ್ಣು!
ಸ್ಯಾಂಡಲ್ವುಡ್ನ ನಟಿ ಸಂಗೀತಾ ಭಟ್ ಕೆಲವು ವರ್ಷಗಳ ಬ್ರೇಕ್ ನಂತರ ಮತ್ತೆ ಚಿತ್ರರಂಗದ ಕಡೆಗೆ ಮುಖ ಮಾಡಿದ ನಟಿ, ಇದೀಗ ತಮ್ಮ ಸಿನಿಮಾಗಳ ಜೊತೆಗೆ ಸೋಶಿಯಲ್ ಮಿಡಿಯಾದಲ್ಲಿಯೂ ಆಕ್ಟೀವ್ ಆಗಿರುತ್ತಾರೆ. ಇದೀಗ ಈ ನಟಿ ಮಾಡಿಸಿರುವ ಹೊಸ ಫೋಟೋಶೂಟ್ ವೈರಲ್ ಆಗಿದೆ.
ನಟಿ ಸಂಗೀತಾ ಭಟ್ ಸದಾ ಸೋಶಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿದ್ದು, ಇದೀಗ ಹೊಸದಾಗಿ ಹಾಟ್ & ಬೋಲ್ಡ್ ಫೋಟೋಶೂಟ್ ಮಾಡಿಸಿ ನೆಟ್ಟಿಗರ ಗಮನ ಸೆಳೆದಿದ್ದಾರೆ.
ಸಂಗೀತಾ ಭಟ್ ಸೋಷಿಯಲ್ ಮೀಡಿಯಾದಲ್ಲಿ ಜಾಸ್ತಿ ಆ್ಯಕ್ಟೀವ್ ಆಗಿದ್ದಾರೆ. ತಮ್ಮ ಪ್ರತಿ ಅಪ್ಡೇಟ್ಗಳನ್ನೂ ಸೋಷಿಯಲ್ ಮೀಡಿಯಾದಲ್ಲಿರೋ ತಮ್ಮ ಸಂಗೀತಾ ಭಟ್ ಪೇಜ್ನಲ್ಲಿ ಹಂಚಿಕೊಳ್ತಾನೇ ಇರ್ತಾರೆ.
ಕನ್ನಡದ ನಟಿ ಸಂಗೀತಾ ಭಟ್ ಕೆಂಪು ಬಣ್ಣದ ಡ್ರೆಸ್ ಧರಿಸಿಕೊಂಡು ಫೋಟೋಗಳಿಗೆ ವಿವಿಧ ಭಂಗಿಯಲ್ಲಿ ಪೋಸ್ ನೀಡಿದ್ದು, ಮಾಡ್ರನ್ ಈಜಿಪ್ಟ್ ರಾಣಿ ರೀತಿಯಲ್ಲಿಯೇ ಹೊಳೆಯುತ್ತಿದ್ದಾರೆ.
ಸಂಗೀತಾ ಫೋಟೋಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಲೈಕ್ಸ್ ಹಾಗೂ ಅಭಿಮಾನಿಗಳು ಕಮೆಂಟ್ಗಳ ಸುರಿಮಳೆಯೇ ಹರಿದು ಬಂದಿದೆ. ಸದ್ಯ ಸಂಗೀತಾ ಆಗಾಗ ಬೋಲ್ಡ್ ಫೋಟೋ ಶೂಟ್ ಮೂಲಕ ಸುದ್ದಿಯಾಗುತ್ತಿದ್ದಾರೆ.
ಕನ್ನಡದ ಜೊತೆಗೆ ತಮಿಳು, ಮಲಯಾಳಂ ಸಿನಿಮಾಗಳಲ್ಲೂ ನಟಿಸಿರುವ ಸಂಗೀತಾ, ಕನ್ನಡದಲ್ಲಿ ಎರಡನೇ ಸಲ, ಪ್ರೀತಿ ಗೀತಿ ಇತ್ಯಾದಿ, ಮಾಮು ಟೀ ಅಂಗಡಿ, ದಯವಿಟ್ಟು ಗಮನಿಸಿ ಸಿನಿಮಾಗಳ ಮೂಲಕ ಜನಮನ ಗೆದ್ದಿದ್ದರು.
ಸಂಗೀತಾ ಭಟ್ ಸಿನಿಮಾಗಳ ವಿಚಾರಕ್ಕೆ ಬಂದ್ರೆ, ಕ್ಲಾಂತಾ ಮತ್ತು ರೂಪಾಂತರ ಚಿತ್ರಗಳಲ್ಲಿ ನಟಿಸಿದ್ದಾರೆ. ಬೇರೆ ಬೇರೆ ಪ್ರೊಜೆಕ್ಟ್ಗಳಲ್ಲೂ ಸಂಗೀತಾ ಭಟ್ ತೊಡಗಿಸಿಕೊಂಡಿರ್ತಾರೆ. ಇತ್ತೀಚಿಗೆ ಅನ್ನೋ ಹಾಗೆ ಹೀಲ್ಸ್ ಆನ್ ವ್ಹೀಲ್ಸ್ ತಂಡದಿಂದ ಬುಲೆಟ್ ರೈಡಿಂಗ್ ಕೂಡ ಕಲಿತುಕೊಂಡಿದ್ದಾರೆ.
ಚಿತ್ರರಂಗಕ್ಕೆ ಬರುವ ಮುನ್ನ ಸಂಗೀತಾ ಭಟ್ ಕಿರುತೆರೆಯಲ್ಲೂ ಕಾಣಿಸಿಕೊಂಡು ಅಭಿಮಾನಿಗಳ ಮನಗೆದ್ದಿದ್ದರು. ಪಂಜರದ ಗಿಳಿ, ಭಾಗ್ಯವಂತರು, ಚಂದ್ರ ಚಕೋರಿ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದರು.