ಯಾವ್ ಡಿಸೈನರ್ ಬಟ್ಟೆ? ರಶ್ಮಿಕಾ ಮಂದಣ್ಣ ಮನೆಯಲ್ಲಿ ಹಾಕೋ ಡ್ರೆಸ್ ನೋಡಿ ಎಂದ ನೆಟ್ಟಿಗರು!
ವೈರಲ್ ಆಗುತ್ತಿದೆ ರಶ್ಮಿಕಾ ಮಂದಣ್ಣ ಹೋಮ್ ಔಟ್‌ಫಿಟ್‌ಗಳು. ಹಾಟ್ ನಟಿ ಅನ್ನಬೇಡಿ ಆಕೆ ಮನೆ ಹುಡುಗಿ ಎಂದ ಅಭಿಮಾನಿಗಳು...
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸಿನಿಮಾಗೆ ತಕ್ಕಂತೆ ಉಡುಪು ಧರಿಸಿಬಹುದು, ಸಿನಿಮಾ ಪ್ರಚಾರಕ್ಕೆ ಅಥವಾ ಜಾಹೀರಾತಿಗೆ ಡಿಸೈನರ್ ವೇರ್ ಧರಿಸಬಹುದು ಆದರೆ ರಿಯಲ್ ಲೈಫ್‌ನಲ್ಲಿ ತುಂಬಾನೇ ಸಿಂಪಲ್.
ಬಾಕ್ಸ್ ಆಫೀನ್ ಕಲೆಕ್ಷನ್ ರಾಣಿ ಎಂದೇ ಬಿರುದು ಪಡೆದುಕೊಂಡಿರುವ ರಶ್ಮಿಕಾ ಮಂದಣ್ಣ ಏರ್‌ಪೋರ್ಟ್ ಲುಕ್‌ನ ಕೂಡ ಅನೇಕರು ಡಿಸೈನರ್ ವೇರ್ ಎನ್ನುತ್ತಿದ್ದರು. ಹಾಗಾಗಿ ಅಭಿಮಾನಿಗಳು ಆಕೆಯ ಇನ್‌ಸ್ಟಾಗ್ರಾಂ ಪ್ರೊಫೈಲ್ ಚೆಕ್ ಮಾಡಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ಕೆಲವೊಂದು ಪರ್ಸನಲ್ ಫೋಟೋ ಹಂಚಿಕೊಂಡಿರುವ ರಶ್ಮಿಕಾ ಪಕ್ಕಾ ಮನೆ ಹುಡುಗಿ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಬಹುತೇಕ ಕಲೆಕ್ಷನ್‌ಗಳು ಟೀ-ಶರ್ಟ್.
ಸಾಮಾನ್ಯ ಹುಡುಗಿ ರೀತಿಯಲ್ಲಿ ಮೇಕಪ್ ಇಲ್ಲದೆ ಕೂದಲು ಕಟ್ಟಿಕೊಂಡು ನಾಯಿ ಮರಿಗಳನ್ನು ಮುದ್ದು ಮಾಡುತ್ತಿರುವ ಫೋಟೋಗಳು ಸಖತ್ ವೈರಲ್ ಆಗಿತ್ತು.
ಅಬ್ಬಾ ಎಷ್ಟು ಮೇಕಪ್ ಹಾಕ್ತೀಯಾ ಯಾಕಿಷ್ಟು ದುಬಾರಿ ಬಟ್ಟೆ ಎಂದು ಅನೇಕರು ರಶ್ಮಿಕಾ ಕಾಲೆಳೆದಿದ್ದಾರೆ. ಆದರೆ ಕ್ರಶ್ ಪರ ಧ್ವನಿ ಎತ್ತಲು ಅಭಿಮಾನಿಗಳು ರೆಡಿಯಾಗಿದ್ದಾರೆ.
ರಶ್ಮಿಕಾ ಅಪ್ಲೋಡ್ ಮಾಡಿರುವ ಫೋಟೋ ನೋಡಿ ಮೇಕಪ್ ಇಲ್ಲದೆ ಸರಳ ಮನೆ ಹುಡುಗಿ ರೀತಿ ಇರುವ ಫೋಟೋ ಇದೆ. She is down to earth ಎಂದಿದ್ದಾರೆ ಅಭಿಮಾನಿಗಳು.