ಕಪ್ಪು ಬೆಳ್ಳಿ ಬಣ್ಣದಲ್ಲಿ ಸಿಗೋ ಆಕ್ಸಿಡೈಸ್ ಆಭರಣಗಳು ಕಡಿಮೆ ಬೆಲೆಯಲ್ಲಿ ಸಿಗುತ್ತವೆ ಮತ್ತು ದೀರ್ಘಕಾಲದವರೆಗೆ ಬಾಳಿಗೆ ಬರುತ್ತವೆ. ಕಪ್ಪು ಸೀರೆಯೊಂದಿಗೆ ಹೆವಿ ಆಕ್ಸಿಡೈಸ್ ಹಾರ ಧರಿಸಬಹುದು.
ಆಕ್ಸಿಡೈಸ್ಡ್ ಹಾಥ್ ಫೂಲ್
ಆಕ್ಸಿಡೈಸ್ ಹಾರವಷ್ಟೇ ಅಲ್ಲ, ಹಾಥ್ ಫೂಲ್‌ನ ಟ್ರೆಂಡಿ ವಿನ್ಯಾಸಗಳೂ ಸಹ ಲಭ್ಯವಿದೆ. ಕಪ್ಪು ಸೀರೆಯೊಂದಿಗೆ ವರ್ಣರಂಜಿತ ಆಕ್ಸಿಡೈಸ್ ಹಾಥ್ ಫೂಲ್ ಮತ್ತು ಹಾರವನ್ನು ಖರೀದಿಸಲು ಮರೆಯಬೇಡಿ.
ಆಕ್ಸಿಡೈಸ್ ಬಳೆಗಳು
ಸಿಂಪಲ್ ಆಕ್ಸಿಡೈಸ್ ನೆಕ್ಲೇಸ್ ಜೊತೆ ಅದೇ ಬಣ್ಣದ ಬಳೆಗಳನ್ನು ಧರಿಸಿ ಮಿಂಚಬಹುದು. ಒಂದು ಕೈಯಲ್ಲಿ ಒಂದೇ ಬಳೆಯನ್ನು ಧರಿಸುವುದರಿಂದಲೂ ನೀವು ಸುಂದರವಾಗಿ ಕಾಣುತ್ತೀರಿ.
ಆಕ್ಸಿಡೈಸ್ ಮಲ್ಟಿ ಲೇಯರ್ ನೆಕ್ಲೇಸ್
ಆಫೀಸ್ ಪಾರ್ಟಿಗಾಗಿ ನೀವು ಬಿಳಿ ಶರ್ಟ್ ಅಥವಾ ಕೋಟ್ ಧರಿಸುತ್ತಿದ್ರೆ ಆಕ್ಸಿಡೈಸ್ ಮಲ್ಟಿ ಲೇಯರ್ ನೆಕ್ಲೇಸ್ ಧರಿಸಬಹುದು. ಇದರಿಂದ ನೀವು ಸೆಂಟರ್ ಆಫ್ ಅಟ್ರಾಕ್ಷನ್ ಆಗುತ್ತೀರಿ.
ಆಕ್ಸಿಡೈಸ್ ಸ್ಟೇಟ್‌ಮೆಂಟ್ ಜುಮ್ಕಿ
ಕಪ್ಪು ಬಣ್ಣದ ಸೂಟ್‌ನೊಂದಿಗೆ ಸ್ಟೇಟ್‌ಮೆಂಟ್ ಕಿವಿಯೋಲೆಗಳು ಅದ್ಭುತವಾಗಿ ಕಾಣುತ್ತವೆ. ನೀವು ಕೂಡ ಮೋನಿ ರಾಯ್ ಅವರಂತೆ ನೋಟವನ್ನು ಮರುಸೃಷ್ಟಿಸಬಹುದು.