ಬೋರಿಂಗ್ ದಾಂಪತ್ಯ ಜೀವನದಲ್ಲಿ ಹೀಗೆ ರೊಮ್ಯಾನ್ಸ್ ಮಸಾಲವಿರಲಿ!

First Published Mar 20, 2021, 3:33 PM IST

ಸಾಮಾನ್ಯವಾಗಿ ನಮ್ಮ ಜೀವನವು ಕೆಲಸ ಮತ್ತು ಮನೆ ಇದರ ಸುತ್ತವೇ ಸುತ್ತುತ್ತವೆ. ಜವಾಬ್ದಾರಿಗಳಲ್ಲಿ ಬದುಕನ್ನು ಸವೆಸುತ್ತಾ ನಿಜವಾದ ವಿನೋದವನ್ನು ಮರೆಯಲಾಗುತ್ತದೆ. ಎಲ್ಲರೂ ಜೊತೆಯಾಗಿಯೇ ಇರುತ್ತೇವೆ, ಆದರೆ ಜೊತೆಯಾಗಿ ಮಾತನಾಡಲು ಸಮಯವಿಲ್ಲ ಮತ್ತು ಸಮಯ ಬಂದಾಗ ಸಂಬಂಧಗಳ ಪ್ರಾಮುಖ್ಯತೆಯನ್ನು ನಾವು ಕಡೆಗಣಿಸುತ್ತೇವೆ. ಕಾರಣ ಏನೇ ಇರಲಿ, ಈ ಬ್ಯುಸಿ ಜೀವನದಿಂದಾಗಿ ಪ್ರೀತಿ, ರೊಮ್ಯಾನ್ಸ್ ಕಡಿಮೆಯಾಗುತ್ತಾ ಹೋಗುತ್ತದೆ ಮತ್ತು ವೈವಾಹಿಕ ಜೀವನವೂ ಬೋರ್ ಎನಿಸಲು ಶುರುವಾಗುತ್ತದೆ. ಆದರೆ, ಶೋ ನಡೆಯಲೇ ಬೇಕು. ಅದಕ್ಕೆ ಶ್ರಮ ಹಾಕುವುದು ಅನಿವಾರ್ಯ.