ಲವ್ವಲ್ಲಿ ಬಿದ್ದ ಮೇಲೆ ಹೆಂಗೆಂಗೋ ಆಗೋದು ಹೃದಯಕ್ಕೆ ಮಾತ್ರವಲ್ಲ, ದೇಹಕ್ಕೂ ಮುಟ್ಟುತ್ತೆ ಬಿಸಿ!
ಪ್ರೀತಿ ಯಾವಾಗ, ಯಾರ್ ಮೇಲೆ ಬೇಕಾದ್ರೂ ಆಗುತ್ತೆ ಅನ್ನೋದು ಗೊತ್ತಿದೆ, ಪ್ರೀತಿ ಆದ್ಮೇನೆ ಹೃದಯ ಹೆಂಗೆಂಗೋ ಆಡಕ್ಕೆ ಶುರು ಮಾಡುತ್ತೆ ಅನ್ನೋದು ಗೊತ್ತಿದೆ. ಆದ್ರೆ ಪ್ರೀತಿಲಿ ಬಿದ್ದ ಮೇಲೆ ನಿಮ್ಮ ದೇಹದಲ್ಲೂ ಬದಲಾವಣೆ ಆಗುತ್ತೆ ಅನ್ನೋದು ಗೊತ್ತಾ?
ಪ್ರೀತಿ ಅನ್ನೋದು ಬಣ್ಣಿಸಲು ಸಾಧ್ಯವಾಗದೇ ಇರುವಂತಹ ಒಂದು ಸುಂದರ ಅನುಭವ. ಈ ಅನುಭವವನ್ನು ಪದಗಳಲ್ಲಿ ವರ್ಣಿಸೋಕೆ ಸಾಧ್ಯಾನೆ ಇಲ್ಲ ಅಂತಾರೆ. ಅಷ್ಟೇ ಅಲ್ಲ ಪ್ರೀತಿಯಾಲ್ಲಿ ಬಿದ್ದಾಗ ಹೃದಯದಲ್ಲಿ ಏನೇನೋ ಆಗುತ್ತೆ ಅಂತಾನೂ ಹೇಳ್ತಾರೆ. ಆದ್ರೆ ಲವ್ವಲ್ಲಿ ಬಿದ್ದಾಗ ನಿಮ್ಮಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಅನ್ನೋದು ಗೊತ್ತಾ?
ಲವ್ ಅಲ್ಲಿ ಬೀಳೋದು ಅಂದ್ರೆ ಡ್ರಗ್ ಅಡಿಕ್ಟ್ ಆದ ಹಾಗೆ
ಪ್ರೀತಿಯಲ್ಲಿ ಬೀಳುವುದು ಮೆದುಳಿನ ರಾಸಾಯನಿಕಗಳಾದ ಡೋಪಮೈನ್, ಆಕ್ಸಿಟೋಸಿನ್, ಅಡ್ರಿನಾಲಿನ್ ಮತ್ತು ವ್ಯಾಸೊಪ್ರೆಸಿನ್ ಹಾರ್ಮೋನ್ಸ್ ಬಿಡುಗಡೆಯಾಗುತ್ತೆ. ಇದು ಡ್ರಗ್ಸ್ (drugs) ಸೇವನೆ ಮಾಡಿದಾಗ ಬಿಡುಗಡೆಯಾಗುವಂತಹದ್ದೇ ಹಾರ್ಮೋನ್ಸ್ ಆಗಿದೆ. ಹಾಗಾಗಿ ಲವ್ವನ್ನ ಡ್ರಗ್ಸ್ ಗೆ ಹೋಲಿಕೆ ಮಾಡ್ತಾರೆ.
ಕೆನ್ನೆ ಕೆಂಪಾಗುತ್ತವೆ, ಅಂಗೈಗಳು ಬೆವರುತ್ತವೆ ಮತ್ತು ಹೃದಯ ಬಡಿತ ಹೆಚ್ಚುತ್ತೆ
ಡೇಟಿಂಗ್ ಗೆ ಮುಂಚಿತವಾಗಿ, ನಿಮ್ಮ ಹೃದಯ ಬಡಿತವು (heartbeat) ಹೆಚ್ಚಾಗುವುದನ್ನು ಮತ್ತು ನಿಮ್ಮ ಕೈಗಳು ಬೆವರುವುದನ್ನು ನೀವು ಗಮನಿಸಬಹುದು. ಇದು ನಿಮ್ಮ ಆತಂಕವನ್ನು ಹೆಚ್ಚಿಸಲು ಕಾರಣವಾಗುವ ಕೇವಲ ನರಮಂಡಲದ ಟ್ರಿಕ್ ಅಲ್ಲ; ಇದು ವಾಸ್ತವವಾಗಿ ಅಡ್ರಿನಾಲಿನ್ ಮತ್ತು ನೊರ್ಪೈನ್ಫ್ರೈನ್ನ ಪ್ರಚೋದನೆಯಾಗಿದೆ. ಇದು ವ್ಯಕ್ತಿಯ ಮೇಲೆ ಆಸೆ ಹೆಚ್ಚಿಸೋದಕ್ಕೆ ಸಹಾಯ ಮಾಡುತ್ತೆ.
ಪ್ರೀತಿಯಲ್ಲಿ ಬಿದ್ದಾಗ ಹಾರ್ಮೋನ್ಸ್ ಬದಲಾಗುತ್ತೆ
ಸಂಬಂಧದ ಮಧುಚಂದ್ರದ ಹಂತದಲ್ಲಿ - ಮೊದಲ ಒಂದರಿಂದ ಎರಡು ವರ್ಷಗಳಲ್ಲಿ ನೀವು ನಿಮ್ಮ ಪ್ರೇಮಿಯನ್ನು ನೋಡಿದಾಗಲೆಲ್ಲಾ ನಿಮ್ಮ ಹಾರ್ಮೋನುಗಳು ಏರು ಪೇರಾಗುತ್ತೆ. ಸೈಕೋನ್ಯೂರೋಎಂಡೋಕ್ರೈನಾಲಜಿಯಲ್ಲಿ ಪ್ರಕಟವಾದ 2004 ರ ಅಧ್ಯಯನದ ಪ್ರಕಾರ, ಕಾರ್ಟಿಸೋಲ್ (ಒತ್ತಡದ ಹಾರ್ಮೋನ್) ಪುರುಷರು ಮತ್ತು ಮಹಿಳೆಯರಲ್ಲಿ ಹೆಚ್ಚಾಗುತ್ತದೆ. ಮತ್ತು ಈ ಸಮಯದಲ್ಲಿ, ಲೈಂಗಿಕ ಹಾರ್ಮೋನ್ (sexual hormones) ಟೆಸ್ಟೋಸ್ಟೆರಾನ್ ಪುರುಷರಲ್ಲಿ ಕಡಿಮೆಯಾಗುತ್ತದೆ ಮತ್ತು ಮಹಿಳೆಯರಲ್ಲಿ ಹೆಚ್ಚಾಗುತ್ತದೆ.
ಲವ್ ಹಾರ್ಮೋನ್
ಲವ್ ಹಾರ್ಮೋನ್' (love hormones) ಎಂದು ಕರೆಯಲ್ಪಡುವ ಆಕ್ಸಿಟೋಸಿನ್, ಪ್ರೇಮಿಗಳು ಅಥವಾ ಸಂಗಾತಿಗಳ ನಡುವೆ ನಂಬಿಕೆ, ಸಂಬಂಧ ಮತ್ತು ಅನ್ಯೋನ್ಯತೆಯ ಭಾವನೆಗಳನ್ನು ಹೆಚ್ಚಿಸುತ್ತೆ. ಇದರಿಂದ ಪ್ರೇಮಿ ಜೊತೆ ಇಮೋಷನಲ್ ಕನೆಕ್ಷನ್ ಹೆಚ್ಚಿಸುತ್ತೆ, ಅಲ್ಲದೇ, ಭದ್ರತೆ ಮತ್ತು ಯೋಗಕ್ಷೇಮದ ಪ್ರಜ್ಞೆಯನ್ನು ಹೆಚ್ಚಿಸುತ್ತೆ. ಆಕ್ಸಿಟೋಸಿನ್ ನಿಂದಾಗಿ ಕಡಲಿಂಗ್, ಹಗ್ ಮಾಡೋದು ಮತ್ತು ಫಿಸಿಕಲ್ ಇಂಟಿಮೆಸಿ (Physical INtimacy) ಹೆಚ್ಚುತ್ತೆ, ಇದ್ರಿಂದಾಗಿ ಇಬ್ಬರ ನಡುವಿನ ಭಾಂದವ್ಯ ಕೂಡ ಸ್ಟ್ರಾಂಗ್ ಆಗುತ್ತೆ.
ಇದು ಮನುಷ್ಯನ ಮೂಳೆಗಳನ್ನು ಬಲಪಡಿಸಬಹುದು
ಯುಸಿಎಲ್ಎ ಅಧ್ಯಯನವು 25 ವರ್ಷ ಒಂದೇ ಸಂಬಂಧ ಅಥವಾ ಮದುವೆಯಲ್ಲಿರುವ ಪುರುಷರು, ಬಲವಾದ ಮೂಳೆಗಳನ್ನು ಹೊಂದಿರುತ್ತಾರೆ. ತಮ್ಮ ಜೀವನದಲ್ಲಿ ಬೆಂಬಲಿಸುವ ಮಹಿಳೆಯರನ್ನು ಹೊಂದಿರುವವರು ಮಾತ್ರ ದೀರ್ಘಕಾಲೀನ ಸಂಬಂಧದಿಂದ ಪ್ರಯೋಜನ ಪಡೀತಾರೆ. ಪ್ರೀತಿಯಿಲ್ಲದ ಅಥವಾ ಭಾವನಾತ್ಮಕವಾಗಿ ಬೆಂಬಲಿಸದ ಮಹಿಳೆಯರನ್ನು ಹೊಂದಿರುವವರು ಸ್ಟ್ರಾಂಗ್ ಆಗಿರೋದಿಲ್ಲ.
ಪ್ರೀತಿಯು ಮನಸ್ಸು ಅಥವಾ ಹೃದಯದೊಂದಿಗೆ ಸಂಪರ್ಕ ಹೊಂದಿದೆಯೇ ಅನ್ನೋ ಪ್ರಶ್ನೆ ಯಾವಾಗ್ಲೂ ನಮ್ಮನ್ನ ಕಾಡುತ್ತೆ ಅಲ್ವಾ?. ಲವ್ ಅನ್ನೋದು ಹೃದಯಕ್ಕಿಂತ ಹೆಚ್ಚಾಗಿ ಮೆದುಳಿನ ವಿಷಯ. ವಾಸ್ತವವಾಗಿ, ಪ್ರೀತಿಯ ಪರಿಕಲ್ಪನೆಯು ಮೆದುಳಿನಿಂದ ಹೃದಯಕ್ಕೆ ಮತ್ತು ಹೃದಯದಿಂದ ಮೆದುಳಿಗೆ ಎರಡೂ ಪ್ರಕ್ರಿಯೆಗಳಿಂದ ಕೂಡಿದೆ. ಉದಾಹರಣೆಗೆ, ಮೆದುಳಿನ ಭಾಗಗಳ ಸಕ್ರಿಯಗೊಳಿಸುವಿಕೆಯು ಹೃದಯ ಮತ್ತು ಹೊಟ್ಟೆಯಲ್ಲಿ ಚಿಟ್ಟೆಯಂತಹ ಪ್ರಚೋದನೆಗಳಿಗೆ ಕಾರಣವಾಗುತ್ತೆ.