ಬೈ ಎಲೆಕ್ಷನ್: ಮತದಾರ ಪ್ರಭುಗಳಿಗೆ ಮತದಾನ ಮಾಡಲು ರೆಡ್ ಕಾರ್ಪೆಟ್ ಸ್ವಾಗತ..!
ಮತದಾನ ಮಾಡುವುದು ಪ್ರತಿಯೊಬ್ಬ ಭಾರತೀಯರ ಹಕ್ಕು ಮತ್ತು ಕರ್ತವ್ಯ. ಚುನಾವಣೆಯಲ್ಲಿ ಉತ್ತಮ ಮತದಾನ ದಾಖಲಿಸುವ ಮಹತ್ವಾಕಾಂಕ್ಷೆಯೊಂದಿಗೆ ವೈವಿಧ್ಯಮಯ ಮತದಾರರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತೆ. ಅದರಂತೆಯೇ ಮತದಾನಕ್ಕೆ ಪ್ರೋತ್ಸಾಹಿಸಲು ಕರ್ನಾಟಕದ ಉಪಚುನಾವಣೆ ಕ್ಷೇತ್ರವೊಂದರಲ್ಲಿ ಮತದಾರರಿಗೆ ರೆಡ್ ಕಾರ್ಪೆಟ್ ಹಾಸಿ ಸ್ವಾಗತ ಮಾಡಲಾಗಿದೆ.
ಶಿರಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ರೆಡ್ ಕಾರ್ಪೆಟ್ ಹಾಸಿ ಸ್ವಾಗತ ಮಾಡಲಾಗಿದೆ.
ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಮಾದರಿ ಮತಗಟ್ಟೆ ತೆರೆಯಲಾಗಿದೆ
ಈ ಮತಗಟ್ಟೆಗೆ ಬಂದವರಿಗೆ ರೆಡ್ ಕಾರ್ಪೆಟ್ ಸ್ವಾಗತರ ಜೊತೆ ಮಾಸ್ಕ್‌ನೀಡಿ, ಸ್ಯಾನಿಟೈಸ್ ಮಾಡಲಾಯಿತು.
ತಮ್ಮ ಹಕ್ಕು ಚಲಾಯಿಸಲು ಬರುವ ಮತದಾರರನ್ನು ರೆಡ್ ಕಾರ್ಪೆಟ್ ಸ್ವಾಗತಿಸಲಾಗಿದ್ದು, ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ.
ಶಿರಾ ಸೇರಿದಂತೆ ಬೆಂಗಳೂರಿನ ಆರ್‌ಆರ್ ನಗರ ವಿಧಾನಸಭಾ ಉಪಚುನಾವಣೆಗೆ ಇಂದು (ಮಂಗಳವಾರ) ಮತದಾನ ನಡೆದಿದ್ದು, ಇದೇ ನವೆಂಬರ್ 10 ಉಪಚುನಾವಣೆ ಫಲಿತಾಂಶ ಪ್ರಕಟವಾಗಲಿದೆ.