ಇವತ್ತು ಆಸ್ಪತ್ರೆಗೆ ಬಂದವರೆಲ್ಲ ರಾಜಕೀಯ ವೈರಿಗಳೇ ಹೆಚ್ಚು: ರಾಜಕಾರಣದಾಚೆಗೆ ಸಿದ್ದು ಅಚ್ಚುಮೆಚ್ಚು

First Published 14, Dec 2019, 9:33 PM

ರಾಜಕೀಯವಾಗಿ ಅದೆಷ್ಟು ವೈರುಧ್ಯಗಳಿದ್ರೂ ಕೂಡ, ಮಾನವೀಯತೆ ವಿಚಾರ ಬಂದಾಗ ನಾವೆಲ್ಲಾ ಒಂದೇ ಅನ್ನೋದು ರಾಜ್ಯ ರಾಜಕೀಯದಲ್ಲಿ ಮತ್ತೆ ಸಾಬೀತಾಗಿದೆ. ಹೃದಯ ಸಂಬಂಧಿ ಕಾಯಿಲೆಯಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರೋ ಸಿದ್ದರಾಮಯ್ಯರನ್ನ ನೋಡಲು ಇಂದು [ಶನಿವಾರ] ಬಂದವರೆಲ್ಲರನ್ನ ನೋಡಿದ್ರೆ ಈ ಮಾತು ಸತ್ಯ ಅನಿಸುತ್ತೆ. ದರಲ್ಲೂ ಪ್ರಮುಖವಾಗಿ 3ನೇ ದಿನವಾದ ಶನಿವಾರ ಸಿದ್ದು ನೋಡಲು ಬಂದವರೆಲ್ಲ ಅವರ ರಾಜಕೀಯ ವಿರೋಧಿಗಳೇ ಹೆಚ್ಚು. ಆದ್ರೆ, ರಾಜಕಾರಣದ ಆಚೆಗೆ ಬಂದ್ರೆ ಮಾನವೀಯತೆಯಲ್ಲಿ ಸಿದ್ದರಾಮಯ್ಯ ಅಂದ್ರೆ ಅವರಿಗೆ ಅಷ್ಟು ಅಚ್ಚುಮೆಚ್ಚು. ಹಾಗಾದ್ರೆ, ಇವತ್ತು ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಯೋಗ ಕ್ಷೇಮ ವಿಚಾರಿಸಿದ್ಯಾರು..? ಚಿತ್ರಗಳಲ್ಲಿ ನೋಡಿ.....

ಚಾಮುಂಡೇಶ್ವರಿ ವಿಧಾನಸಭೆ ಚುನಾವಣೆಯಲ್ಲಿ ಹಾಲಿ ಸಿಎಂ ಆಗಿದ್ದ ಸಿದ್ದರಾಮಯ್ಯನವರನ್ನು ಜೆಡಿಎಸ್ ನ ಜಿ.ಟಿ.ದೇವೇಗೌಡ ಸೋಲಿಸಿ ಭಾರೀ ಸುದ್ದಿಯಾಗಿದ್ದರು. ಬಳಿಕ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿದ್ದರೂ ಕಡು ವೈರಿಗಳಂತೆ ಸಿದ್ದು ಜಿಟಿಡಿ ವರ್ತಿಸುತ್ತಿದ್ದರು. ರಾಜಕಾರಣದಾಚೆ ಬಂದು ಜಿಟಿಡಿ ಇಂದು ಆಸ್ಪತ್ರೆಗೆ ಭೇಟಿ ನೀಡಿ ಸಿದ್ದರಾಮಯ್ಯನವರ ಆರೋಗ್ಯ ವಿಚಾರಿಸಿದರು.

ಎಚ್.ವಿಶ್ವನಾಥ್ ಹಾಗೂ ಸಿದ್ದರಾಮಯ್ಯ ಮೊದಲು ಅಣ್ತಮ್ಮಾರಾಗಿದ್ದರು. ಬದಲಾದ ರಾಜಕೀಯ ವಿದ್ಯಾಮನಗಳಿಂದ ಇವರು ಸಹ ಬದಲಾಗಿ ರಾಜಕೀಯ ಕಡು ವೈರಿಗಳಾದರು. ಆದ್ರೆ, ಈಗ ಆಸ್ಪತ್ರೆಗೆ ವಿಶ್ವಾನಥ್  ಭೇಟಿ ನೀಡಿದ ಫೋಟೋವನ್ನ ನೋಡಿದ್ರೆ ಇಬ್ಬರ ಕಣ್ಣಲ್ಲಿಯೂ ಕಾಳಜಿ ಎದ್ದು ಕಾಣುತ್ತದೆ. ಅಂತಃಕರಣಿ ಮನಸ್ಸಿನಲ್ಲಿ ಪರಸ್ಪರ ಗೌರವ ಕಾಣುತ್ತದೆ.

ಇನ್ನು ಶ್ರೀರಾಮುಲು ಸಹ ಸಿದ್ದರಾಮಯ್ಯನವರ ರಾಜಕೀಯ ವಿರೋಧಿನೇ. ಕಳೆದ ಬಾದಾಮಿ ವಿಧಾನಸಭೆ ಚುನಾವಣೆಯಲ್ಲಿ ಶ್ರೀರಾಮುಲು ಅವರನ್ನು ಸಿದ್ದರಾಮಯ್ಯ ಸೋಲಿಸಿದ್ದರು. ಬಳಿಕ ಇಬ್ಬರು ಪರಸ್ಪರ ರಾಜಕೀಯವಾಗಿ ವೈಯಕ್ತಿಕ ಟೀಕೆಗಳು ಮಾಡಿದ್ದಾರೆ. ರಾಜಕೀಯದಲ್ಲಿ ಏನೇ ಇರಲಿ ಅದನೆಲ್ಲ ಮರೆತು ರಾಮುಲು ಸಿದ್ದು ಭೇಟಿ ಮಾಡಿ ಯೋಗ ಕ್ಷೇಮ ವಿಚಾರಿಸಿದರು.

ಈ ಮೊದಲು ಕಾಂಗ್ರೆಸ್ ನಲ್ಲಿದ್ದ ಮುನಿರತ್ನ ಬೆಂಗಳೂರಿನ ರಾಜರಾಜೇಶ್ವರಿ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸಿದ್ದರಾಮಯ್ಯನವರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಬಿಜೆಪಿ ಸೇರಿರುವ ಮುನಿರತ್ನ ಸಹ ಸಿದ್ದರಾಮಯ್ಯನವರನ್ನು ಭೇಟಿ ಬೇಗ ಗುಣಮುಖರಾಗಿ ಎಂದು ಹಾರೈಸಿದರು.

ಈ ಫೋಟೋದಲ್ಲಿ ಕಾಣಿಸುವವರೆಲ್ಲರೂ ಸಿದ್ದರಾಮಯ್ಯನವರ ಶಿಷ್ಯಂದಿರುಗಳೇ. ಆದ್ರೆ ಇದೀಗ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಮಾಜಿ ಶಿಷ್ಯಂದಿರುಗಳಾಗಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದರು. ಈ ವೇಳೆ ಸಚಿವರಾಗುವವರಿಗೆ ಸಿದ್ದು ಶುಭ ಹಾರೈಸಿದರು.

ಒಳ್ಳೆ ಹುಡ್ಗ ಪ್ರಥಮ್ ಕೂಡ ಆಸ್ಪತ್ರೆಗೆ ಭೇಟಿ ನೀಡಿದರು. ಭೇಟಿ ಬಳಿಕ ಸಾಮಾಜಿಕ ಜಾಲತಾಣ ಪ್ರಥಮ್  ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದು ಹೀಗೆ..... 'ಈಗಷ್ಟೇ ಸಿದ್ದರಾಮಣ್ಣರನ್ನ ಭೇಟಿಯಾದೆ. ನನ್ನ ನೋಡಿದ ಕೂಡಲೇ ನಾಳೆ ನಾನೇ ಡಿಸ್ಚಾರ್ಜ್ ಆಗ್ತಿದ್ದೆ, ಮನೆಗೆ ಬರುವಂತೆ ಅಂದ್ರು. ಅದೇನೋ ಗೊತ್ತಿಲ್ಲ ನೋಡಿದ ಕೂಡಲೇ ಖುಷಿ ಪಟ್ರು! ನನ್ನ ಎಲ್ಲಾ ಕಾರ್ಯಕ್ರಮದಲ್ಲೂ ಸಿದ್ದರಾಮಣ್ಣ ಜೊತೆಲಿ ಇರ್ತಾರೆ. ಯಾವಾಗ್ಲೂ ಬರೀ ಆರೋಗ್ಯ ವ್ಯತ್ಯಾಸದ ವಿಷಯ ಕೇಳಿ ಬಹಳಷ್ಟು ಬೇಸರವಾಗಿತ್ತು. ಇವತ್ತು ಅವರ ನಗು ನೋಡಿ ಸಮಾಧಾನ ಆಯ್ತು! ಯಾವಾಗ್ಲೂ ಹೇಳ್ತಿದ್ರು ನಮ್ ಸಿದ್ದರಾಮಣ್ಣ, ನೀನೊಬ್ನೆ ಕಣಯ್ಯಾ ಯಾವ ಲಾಭದ ನಿರೀಕ್ಷೆ ಇಲ್ಲದೇ ಬರ್ತೀಯಾ, ನಿನಗೆ ಒಳ್ಳೇದಾಯ್ತೆ…ನಡೆಯಪ್ಪ ಅಂದ್ರು'…

ಕಾಂಗ್ರೆಸ್ ಹಾಗು ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ತಮಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ. ಸಿದ್ದರಾಮಯ್ಯನವರು ತಮಗೆ ಬೇಕಾದವರೆಗೆ ಮಂತ್ರಿಗಿರಿ ನೀಡಿದ್ದಾರೆಂದು BTM ಲೇಔಟ್ ಹಿರಿಯ ಕಾಂಗ್ರೆಸ್ ಶಾಸಕ ರಾಮಲಿಂಗಾರೆಡ್ಡಿ ಆರೋಪಿಸಿ ಕೊನೆಗೆ ರಾಜೀನಾಮೆ ನೀಡುವ ತನಕ ಹೋಗಿದ್ರು. ಅವರೂ ಸಹ ಈಗ ಸಿದ್ದರಾಮಯ್ಯನವರ ಆರೋಗ್ಯ ವಿಚಾರಿಸಿದ್ರು.

ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಶ್ರೀಗಳು ಆಸ್ಪತ್ರೆಗೆ ಭೇಟಿ ನೀಡಿ ಸಿದ್ದರಾಮಯ್ಯನವ ಹಣೆಗೆ ವಿಭೂತಿ ಹಚ್ಚಿ ಆಯುರಾರೋಗ್ಯವನ್ನು ಕರುಣಿಸಲೆಂದು ಹಾರೈಸಿದರು.

ಸಿದ್ದರಾಮಯ್ಯನವರ ಭೇಟಿಯಾಗಿ ಆರೋಗ್ಯ ವಿಚಾರಿಸಿ ಆಶೀರ್ವದಿಸಿದ ವಾಲ್ಮೀಕಿ ಪೀಠದ ಜಗದ್ಗುರು ಪ್ರಸನ್ನಾನಂದ ಪುರಿ ಸ್ವಾಮೀಜಿಯವರು

loader