ಮಾನವೀಯತೆ ಮೆರೆದ ಸಚಿವ ಡಾ.ಕೆ. ಸುಧಾಕರ್

First Published 23, May 2020, 7:54 PM

ಕೊರೋನಾ ಭೀತಿ ಹಿನ್ನೆಲೆಯಲ್ಲಿ ಒಬ್ಬರ ಮುಂದೆ ಹತ್ತಿರ ನಿಂತು ಮಾತನಾಡುವುದಕ್ಕೂ ಕೊಂಚ ಭಯವಾಗುತ್ತೆ. ಇನ್ನೂ ಒಬ್ಬರನ್ನು ಮುಟ್ಟುವುದು ದೂರ ಮಾತು. ಇಂತಹ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ.ಕೆ. ಸುಧಾಕರ್ ಅವರು ಅನಾರೋಗ್ಯದಿಂದ ಕುಸಿದು ಬಿದ್ದ ಕಾರ್ಮಿಕನಿಗೆ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ.

ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ಸ್ ನಲ್ಲಿ, ಒಡಿಶಾ, ಮಣಿಪುರ ಮೊದಲಾದ ರಾಜ್ಯಗಳಿಗೆ ತೆರಳಲು ನೊಂದಾಯಿಸಿಕೊಳ್ಳುತ್ತಿರುವ ವಲಸಿಗರನ್ನು ಸಚಿವ ಡಾ.ಕೆ.ಸುಧಾಕರ್ ಅವರು ಭೇಟಿ ಮಾಡಿ ಕುಂದುಕೊರತೆಗಳನ್ನು ಆಲಿಸಿದರು

ಈ ವೇಳೆ ಹಠಾತ್ತನೆ ಕುಸಿದುಬಿದ್ದ ವಲಸೆ ಕಾರ್ಮಿಕನನ್ನು ಗಮನಿಸಿದ ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ.ಕೆ. ಸುಧಾಕರ್ ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕಳುಹಿಸುವ ಮೂಲಕ ಮಾನವೀಯತೆ ತೋರಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಒಡಿಶಾ ಮೂಲದ ಕಾರ್ಮಿಕ ಅರ್ಷದ್ ಎಂಬಾತ ಹಠಾತ್ತನೆ ಕುಸಿದು ಬಿದ್ದಿದ್ದಾರೆ. ಇದೇ ಮಾರ್ಗದಲ್ಲಿ ಹೋಗುತ್ತಿದ್ದ ಸಚಿವ ಸುಧಾಕರ್ ಸ್ಥಳದಲ್ಲಿ ಜನ ಸೇರಿರುವುದನ್ನು ಗಮನಿಸಿ ಅಲ್ಲಿಗೆ ಹೋಗಿದ್ದು, ಅರ್ಷದ್ ಕುಸಿದು ಬಿದ್ದಿರುವುದನ್ನು ಗಮನಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕಳುಹಿಸಿದ್ದಾರೆ.

ವಲಸೆ ಕಾರ್ಮಿಕರ ಸಮಸ್ಯೆಯನ್ನು ಆಲಿಸಿ, ರಾಜ್ಯದಿಂದ ವಿವಿಧ ರಾಜ್ಯಗಳಿಗೆ ತೆರಳುತ್ತಿರುವ ಕಾರ್ಮಿಕರಿಗೆ ಸಮಾಧಾನ ಮಾಡಿದ್ದು, ಯಾರೂ ಆತಂಕಪಡುವ ಅಗತ್ಯವಿಲ್ಲ. ಸರ್ಕಾರದ ವೆಚ್ಚದಲ್ಲಿ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗುವುದು ತಿಳಿಸಿದ್ದಾರೆ.

ವಲಸಿಗರನ್ನು ಭೇಟಿಮಾಡಿ ಅವರ ಕುಂದುಕೊರತೆ ವಿಚಾರಿಸಿ, ಕೊರೋನಾ ಸವಾಲುಗಳನ್ನು ರಾಜ್ಯ ಸರ್ಕಾರ ಸಮರ್ಥವಾಗಿ ಎದುರಿಸುತ್ತಿದ್ದು, ರಾಜ್ಯದಲ್ಲಿರುವ ಎಲ್ಲರ ಸುರಕ್ಷತೆ ಮತ್ತು ನೆರವು ನೀಡುವ ಪ್ರಯತ್ನಗಳಲ್ಲಿ ನಿರತವಾಗಿದೆ ಎಂದರು.

loader